ಕನ್ನಡಪ್ರಭ ವಾರ್ತೆ ಮುಳಬಾಗಿಲು ತಾಲೂಕಿನಲ್ಲಿ ಪ್ರತಿಯೊಂದು ಶಾಲೆಯಲ್ಲಿಯೂ ಸಹ ಶಾಲೆಗೊಂದು ಕನ್ನಡ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಕನ್ನಡ ಸಂಘದ ತಾಲೂಕು ಅಧ್ಯಕ್ಷ ಈ.ಶ್ರೀನಿವಾಸ ಗೌಡ ಹೇಳಿದರು.ತಾಲೂಕಿನ ಅಲಂಗೂರು ಕ್ರಾಸ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಂಘದಿಂದ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.ಭಾಷೆ ಬಗ್ಗೆ ಅಸಕ್ತಿ ಬೆಳೆಸಿ
ಕನ್ನಡ ಭಾಷಾ ಶಿಕ್ಷಕ ದಾದುಸಾಬಿ ಅವರು ಸ್ವಾಮಿ ವಿವೇಕಾನಂದರ ಬಾಲ್ಯ, ಶಿಕ್ಷಣ, ದೇಶ ಹಾಗೂ ಹೊರದೇಶಗಳ ಸಂಚಾರದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕನ್ನಡ ಬೆಳಗು ವೇದಿಕೆ ಅಧ್ಯಕ್ಷ ಅತ್ತಿಕುಂಟೆ ಎಸ್.ಸುಬ್ರಮಣಿ ಹಾಗೂ ವಕೀಲೆ ಎನ್.ದೀಕ್ಷಾ ಅವರು ಬಹುಮಾನವನ್ನು ವಿತರಣೆ ಮಾಡಿದರು.
ಪ್ರೌಢ ಶಾಲೆ ಮುಖ್ಯ ಶಿಕ್ಷಕ ಎಂ.ಶಂಕರ್, ಕನ್ನಡ ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ ಮೂರ್ತಿ, ಎಂ.ಶಿವಣ್ಣ, ನಂದಕಿಶೋರ್, ಸಿದ್ದಲಿಂಗಯ್ಯ, ಶಕ್ತಿಪ್ರಸಾದ್, ಶಾಲೆಯ ಶಿಕ್ಷಕರಾದ ಸುರೇಶ್, ಆರ್.ಉಷಾ, ದಾದುಸಾಬಿ, ಎಂ.ನಾಗರಾಜು, ಎಂ.ಕವಿತಾ, ಸುಮಿತ್ರ, ಕೃಷ್ಣವೇಣಿ, ಸಿಬ್ಬಂದಿ ಸುಷ್ಮಾ, ವೆಂಕಟಲಕ್ಷ್ಮಮ್ಮ, ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ಇದ್ದರು..