ಸೇವೆಯಲ್ಲಿ ಖಾಯಂಗೊಳಿಸಿ,ಇಲ್ಲವೇ ಸಾಯಲು ವಿಷ ಕೊಡಿ: ಲಕ್ಷ್ಮಿ

KannadaprabhaNewsNetwork |  
Published : Nov 17, 2026, 01:15 AM IST
ೇ್‌ | Kannada Prabha

ಸಾರಾಂಶ

ಶೃಂಗೇರಿಸೇವೆ ಖಾಯಮಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣ ಪಂಚಾಯಿತಿ ನೇರಪಾವತಿ ಪೌರ ಕಾರ್ಮಿಕರು ಕಚೇರಿ ಎದುರು ಸೋಮವಾರದಿಂದ ಅನಿರ್ಧಿಷ್ಠಾವಧಿ ಮುಷ್ಕರ ಆರಂಭಿಸಿದ್ದಾರೆ.

- ಶೃಂಗೇರಿ ಪಪಂ ಕಚೇರಿ ಎದುರು ನೇರಪಾವತಿ ಪೌರಕಾರ್ಮಿಕ ರ ಅನಿರ್ದಿಷ್ಠಾವಧಿ ಮುಷ್ಕರ

ಕನ್ನಡಪ್ರಭ ವಾರ್ತೆ ಶೃಂಗೇರಿ

ಸೇವೆ ಖಾಯಮಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣ ಪಂಚಾಯಿತಿ ನೇರಪಾವತಿ ಪೌರ ಕಾರ್ಮಿಕರು ಕಚೇರಿ ಎದುರು ಸೋಮವಾರದಿಂದ ಅನಿರ್ಧಿಷ್ಠಾವಧಿ ಮುಷ್ಕರ ಆರಂಭಿಸಿದ್ದಾರೆ.

ಬೆಳಿಗ್ಗೆಯಿಂದಲೇ ಕೆಲಸ ಸ್ಥಗಿತಗೊಳಿಸಿ ಕಚೇರಿ ಎದುರು ಸಮಾವೇಶಗೊಂಡು ಬೇಡಿಕೆ ಈಡೇರಿಯ ಬ್ಯಾನರ್ ಹಿಡಿದು ಧರಣಿ ನಡೆಸಿದರು.

ಮುಷ್ಕರ ನಿರತರನ್ನು ಉದ್ದೇಶಿಸಿ ಮಾತನಾಡಿದ ಪಪಂ ನೇರಪಾವತಿ ಪೌರಕಾರ್ಮಿಕರ ಸಂಘದ ಉಪಾಧ್ಯಕ್ಷೆ ಲಕ್ಷ್ಮಿ ನಾವು ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಲೇ ಬಂದಿದ್ದೇವೆ. ಮನವಿ, ಪ್ರತಿಭಟನೆ,ಮುಷ್ಕರ ನಡೆಸುತ್ತಾ ಜನಪ್ರತಿನಿಧಿ ಗಳ, ಸರ್ಕಾರದ ಗಮನಕ್ಕೆ ತರುತ್ತಲೇ ಇದ್ದೇವೆ. ಆದರೆ ಈವರೆಗೂ ನಮಗೆ ಕೇವಲ ಭರವಸೆ ಮಾತ್ರ ನೀಡುತ್ತಿದ್ದಾರೆ ಹೊರತು ನಮ್ಮ ಬೇಡಿಕೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಕೆಲಸ ಮಾಡಿಲ್ಲ. ಬೆಳಿಗ್ಗೆಯಿಂದ ಇಡೀ ಪಟ್ಟಣದ ಮೂಲೆ ಮೂಲೆಗಳಿಂದ ಕಸ,ತ್ಯಾಜ್ಯ ಸಂಗ್ರಹಿಸಿ,ನಮ್ಮ ಆರೋಗ್ಯ,ಕುಟುಂಬ ಪರಿಸ್ಥಿತಿಯನ್ನೂ ಲೆಕ್ಕಿಸದೇ ಸ್ವಚ್ಛತೆ ಕೆಲಸ ಮಾಡುತ್ತಿದ್ದೇವೆ. ನಮ್ಮ ಬದುಕಿಗೆ ಭರವಸೆಯ ಬೆಲೆ ಇಲ್ಲದಂತಾಗಿದೆ ಎಂದರು.

ಕಳೆದ ವರ್ಷ ಸುಮಾರು 18 ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಿದಾಗ ಖಾಯಂ ಭರವಸೆ ನೀಡಿದರು.ಅದರಂತೆ ಪ್ರತಿಭಟನೆ ಹಿಂಪಡೆದೆವು.ಆದರೆ ಈವರೆಗೂ ನಮ್ಮ ಬೇಡಿಕೆ ಈಡೇರಿಸಿಲ್ಲ. ಕೇವಲ 3 ಜನರನ್ನು ಮಾತ್ರ ಖಾಯಂ ಮಾಡಿದ್ದಾರೆ. ಇನ್ನಾದರೂ ನಮಗೆ ಬದುಕಲು ಸೇವೆಯಲ್ಲಿ ಖಾಯಂಗೊಳಿಸಿ ಇಲ್ಲವೇ ಸಾಯಲು ವಿಷ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ನಾಗೇಶ್ ಮಾತನಾಡಿ ಕಳೆದ ವರ್ಷ ಧರಣಿ ನಿರತ ಸ್ಥಳಕ್ಕೆ ಶಾಸಕರು, ಜಿಲ್ಲಾಧಿಕಾರಿ ಭೇಟಿ ನೀಡಿ ಖಾಯಂಗೊಳಿಸುವ ಭರವಸೆ ನೀಡಿದ್ದರು. ಈ ಬಗ್ಗೆ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ನಮ್ಮ ಸೇವೆ ಪರಿಗಣಿಸದೇ ಖಾಯಂಗೊಳಿಸದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದುವರೆಗಿನ ಯಾವುದೇ ಸರ್ಕಾರಗಳು ಇಚ್ಛಾಶಕ್ತಿಯಿಂದ ಸ್ಪಂದಿಸುವ ಕೆಲಸ ಮಾಡಿಲ್ಲ.ನಮ್ಮನ್ನು ಖಾಯಂಗೊಳಿಸದೇ ಹೋದರೆ ನಾವು ಧರಣಿ ಕೈಬಿಡಲ್ಲ.ನಮ್ಮ ಎಲ್ಲಾ ಬೇಡಿಕೆ ಈಡೇರಿಸಿ ನಮಗೆ ನ್ಯಾಯ ಸಿಗುವವರೆಗೂ ಮುಷ್ಕರ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಸಂಘದ ಪದಾಧಿಕಾರಿಗಳಾದ ಶಂಕರ,ಚಂದ್ರಪ್ಪ,ಕುಮಾರ್,ಶ್ರೀನಿವಾಸ,ಗೋಪಾಲ,ಸುಜಾತ,ಅಂಜಲಿ ಕೆ ಮತ್ತಿತರರು ಹಾಜರಿದ್ದರು.

16 ಶ್ರೀ ಚಿತ್ರ 1-

ಶೃಂಗೇರಿ ಪಟ್ಟಣ ಪಂಚಾಯಿತಿ ಕಚೇರಿ ಎದುರು ಪಪಂ ನೇರಪಾವತಿ ಪೌರಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರದಿಂದ ಅನಿರ್ಧಿಷ್ಠಾವಧಿ ಮುಷ್ಕರ ಆರಂಬಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿಯವ ನೀರಿಗಾಗಿ ಇಳಕಲ್ಲ ಜನರ ಪರದಾಟ
ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ