ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ: ಶಾಸಕ ವೆಂಕಟೇಶ್‌

KannadaprabhaNewsNetwork |  
Published : Jun 26, 2026, 02:00 AM IST
ಫೋಟೋ 24ಪಿವಿಡಿ1ತಾಲೂಕಿನ ಬೆಳ್ಳಿಬಟ್ಟಲು ಗ್ರಾಮದಲ್ಲಿ ಉಚಿತ ಶೇಂಗಾ ಬಿತ್ತನೆ ಬೀಜ ವಿತರಣೆಗೆ ಶಾಸಕ ಎಚ್‌.ವಿ.ವೆಂಕಟೇಶ್ ಚಾಲನೆ ನೀಡಿದರು.ಫೋಟೋ 24ಪಿವಿಡಿ2ತಾಲೂಕಿನ ರಂಗಸಮುದ್ರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಿತ್ತನೆ ಬೀಜ ವಿತರಣೆ ಹಾಗೂ ವಿವಿಧ ಕಾಮಗಾರಿಗಳ ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ  ಶಾಸಕ ಎಚ್‌.ವಿ.ವೆಂಕಟೇಶ್ ಭಾಗವಹಿಸಿ ಮಾತನಾಡಿದರು.  | Kannada Prabha

ಸಾರಾಂಶ

ಕೃಷಿ ಅಭಿವೃದ್ಧಿಗಾಗಿ ಸರ್ಕಾರ ಹಾಗೂ ಕೃಷಿ ಇಲಾಖೆ ಜಾರಿಗೊಳಿಸಿರುವ ವಿವಿಧ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಪ್ರಗತಿ ತಾಲೂಕಿನ ರೈತರಿಗೆ ಶಾಸಕ ಹಾಗೂ ತುಮುಲ್‌ ಅಧ್ಯಕ್ಷ ಎಚ್‌.ವಿ.ವೆಂಕಟೇಶ್‌ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಕೃಷಿ ಅಭಿವೃದ್ಧಿಗಾಗಿ ಸರ್ಕಾರ ಹಾಗೂ ಕೃಷಿ ಇಲಾಖೆ ಜಾರಿಗೊಳಿಸಿರುವ ವಿವಿಧ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಪ್ರಗತಿ ತಾಲೂಕಿನ ರೈತರಿಗೆ ಶಾಸಕ ಹಾಗೂ ತುಮುಲ್‌ ಅಧ್ಯಕ್ಷ ಎಚ್‌.ವಿ.ವೆಂಕಟೇಶ್‌ ಕರೆ ನೀಡಿದರು.

ತಾಲೂಕು ಕೃಷಿ ಇಲಾಖೆ ಹಾಗೂ ಕೆಒಎಫ್‌ ವತಿಯಿಂದ ತಾಲೂಕಿನ ರಂಗಸಮುದ್ರ ಗ್ರಾಪಂ ವ್ಯಾಪ್ತಿಯ ಬೆಳ್ಳಿಬಟ್ಟಲು ಗ್ರಾಮದಲ್ಲಿ ಆಯೋಜಿಸಿದ್ದ ಉಚಿತ ಶೇಂಗಾ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ರೈತರ ಪ್ರಗತಿ ಸರ್ಕಾರ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಅನೇಕ ರೀತಿಯ ಯೋಜನೆ ಜಾರಿಪಡಿಸಿದೆ. ಸರಿಯಾದ ದಾಖಲೆ ನೀಡುವ ಮೂಲಕ ಇಲಾಖೆಯ ಸೌಲಭ್ಯ ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಬರದ ಹಿನ್ನೆಲೆಯಲ್ಲಿ ಇಲ್ಲಿನ ರೈತರ ಸಮಸ್ಯೆ ಮನಗಂಡು ಸಾಧ್ಯವಾದಷ್ಟು ಅನುಕೂಲ ಕಲ್ಪಿಸುವ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಬಿತ್ತನೆ ಕಾರ್ಯಕ್ಕಾಗಿ ಕೃಷಿ ಇಲಾಖೆಯಿಂದ ರೈತರಿಗೆ ಉಚಿತ ಶೇಂಗಾ ಬಿತ್ತನೆ ಬೀಜ ವಿತರಣೆಗೆ ಮುಂದಾಗಿದ್ದು, ಅರ್ಹ ರೈತರು ಬಿತ್ತನೆ ಬೀಜ ಪಡೆದುಕೊಳ್ಳುವ ಮೂಲಕ ಜಮೀನಿನಲ್ಲಿ ಬಿತ್ತನೆ ಮಾಡಿ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಮಾಜಿ ಸಚಿವರು ಹಾಗೂ ತಮ್ಮ ತಂದೆಯವರಾದ ದಿವಂಗತ ವೆಂಕಟರಮಣಪ್ಪ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ,ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸಿದರು.

ಈ ವೇಳೆ ಗ್ರಾಪಂನ ಸಾರ್ವಜನಿಕರಿಂದ ಶಾಸಕ ಎಚ್‌.ವಿ.ವೆಂಕಟೇಶ್‌ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಶಾಲಾ ಮಕ್ಕಳಿಗೆ ನೋಟ್‌ಬುಕ್‌ಗಳು ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.ಇದೇ ವೇಳೆ ಕೃಷಿ ಇಲಾಖೆಯ ಉಪನಿರ್ದೇಶಕರಾದ ಅಜಯ್ ಕುಮಾರ್, ತುಮುಲ್ ಮಾಜಿ ನಿರ್ದೇಶಕರಾದ ಬೆಳ್ಳಿಬಟ್ಲು ಚಂದ್ರಶೇಖರರೆಡ್ಡಿ, ಶಂಕರರೆಡ್ಡಿ, ಲಿಂಗದಹಳ್ಳಿ ವೇಣುಗೋಪಾಲರೆಡ್ಡಿ, ರೈತ ಸಂಘದ ನರಸಿಂಹರೆಡ್ಡಿ, ಹನುಮೇಶ್, ಶ್ರೀರಾಮರೆಡ್ಡಿ ಗುಂಡೂರಾವ್, ಸತೀಶ್ ಪಾಳೇಗಾರ, ಸಣ್ಣ ಓಬನಾಯಕ, ಈರಪ್ಪರೆಡ್ಡಿ, ರಾಜಣ್ಣ, ಮಾರಕ್ಕ, ಓಬಳಾಪತಿ ನಾಯಕ, ಬಿ ಆರ್ ಪಾಲಯ್ಯ, ರಂಗಸಮುದ್ರ ಅಜಿತ್, ರುದ್ರಮುನಿ, ಜಯರಾಮಪ್ಪ, ರಘುನಂದನ್, ಮಂಜು, ಪವನ್, ಹನುಮಂತರಾಯಪ್ಪ, ಓಬಳೇಶ್, ರಘು, ನಿಂಗಣ್ಣ, ಮಾರಣ್ಣ, ಕಂಪಾಲಪ್ಪ, ಪಿಎಸ್ಐ ರಾಜೇಂದ್ರ, ಶ್ರೀರಾಮರೆಡ್ಡಿ, ತಿಪ್ಪೇಸ್ವಾಮಿ, ಅಂಬಲಗಿರಿಯಪ್ಪ, ನಾಗರತ್ನಪ್ಪ, ರಂಗಧಾಮಪ್ಪ, ಬೋರಪ್ಪ, ಶಶಿಧರ್, ಪ್ರಸಾದಪ್ಪ, ಶಿವಾನಂದಪ್ಪ, ಎನ್‌.ಜಿ.ರಾಮ್, ಮೈಲಾರಪ್ಪ, ಗುಡಿಪಲಿ ರಂಗಪ್ಪ, ಈರಾರೆಡ್ಡಿ ಇತರೆ ಅನೇಕ ಮಂದಿ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನ ಕರ ಪಾವತಿ ಒಟಿಎಸ್‌ಗೆ ಬೆಂಗಳೂರಿಗೆ ನಿಯೋಗ
ಅಂಧ, ಅನಾಥರ ಆಶ್ರಯದಾತ ಕಲ್ಲಯ್ಯಜ್ಜನವರಿಗೇ ಜೀವಬೆದರಿಕೆಗೆ ಭಾರೀ ಆಕ್ರೋಶ