ಕ್ರೀಡೆ, ಶಿಕ್ಷಣದಲ್ಲಿ ಮಳವಳ್ಳಿ ವಿಶಿಷ್ಟ ಛಾಪು: ದೊಡ್ಡಯ್ಯ

KannadaprabhaNewsNetwork |  
Published : Feb 18, 2026, 01:30 AM IST
17ಕೆಎಂಎನ್‌ಡಿ-8ಮಳವಳ್ಳಿಸರ್ಕಾರಿ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ಪ್ರೆಂಡ್ಸ್ ವಾಲಿಬಾಲ್ ಕ್ಲಬ್ ಮಾದೇಶ ತಂಡದವರಿಂದ ಆಯೋಜಿಸಿದ್ದ ಹೊನಲು ಬೆಳಕಿನ ವಾಲಿಬಾಲ್  ಪಂದ್ಯಾವಳಿಯಲ್ಲಿ ನಿವೃತ್ತ ಡಿವೈಎಸ್‌ಪಿ ಎಂ.ಪಿ ಲೊಕೇಶ್ ಅವರನ್ನು ಅಭಿನಂದಿಸಲಾಯಿತು. | Kannada Prabha

ಸಾರಾಂಶ

ಮಳವಳ್ಳಿಯಲ್ಲಿ ವಾಲಿಬಾಲ್ ಆಟಕ್ಕೆ ಎಂ.ಎನ್. ಗಣೇಶ್ ಪ್ರೇರಣಾಶಕ್ತಿಯಾಗಿದ್ದರು ಜೊತೆಗೆ ಪಟ್ಟಣದಲ್ಲಿ ರಾಜ್ಯ ಮಟ್ಟದ ಪಂದ್ಯಾವಳಿಯನ್ನು ಆಯೋಜಿಸಿ ಕ್ರೀಡೆಗೆ ಸ್ಫೂರ್ತಿ ತುಂಬಿದ್ದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಶಿಕ್ಷಣ, ಕ್ರೀಡೆ ಹಾಗೂ ಜಾನಪದ ಕಲೆಯಲ್ಲಿ ಮಳವಳ್ಳಿ ತನ್ನದೇ ಆದ ಛಾಪು ಮೂಡಿಸಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ತಿಳಿಸಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ಪ್ರೆಂಡ್ಸ್ ವಾಲಿಬಾಲ್ ಕ್ಲಬ್ ಮಾದೇಶ ತಂಡದವರಿಂದ ವಾಲಿಬಾಲ್ ಆಟಗಾರ ದಿ.ಎಂ.ಎನ್ ಗಣೇಶ್‌ಕುಮಾರ್ ಸ್ಮರಣಾರ್ಥ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಳವಳ್ಳಿಯಲ್ಲಿ ವಾಲಿಬಾಲ್ ಆಟಕ್ಕೆ ಎಂ.ಎನ್. ಗಣೇಶ್ ಪ್ರೇರಣಾಶಕ್ತಿಯಾಗಿದ್ದರು ಜೊತೆಗೆ ಪಟ್ಟಣದಲ್ಲಿ ರಾಜ್ಯ ಮಟ್ಟದ ಪಂದ್ಯಾವಳಿಯನ್ನು ಆಯೋಜಿಸಿ ಕ್ರೀಡೆಗೆ ಸ್ಫೂರ್ತಿ ತುಂಬಿದ್ದರು ಎಂದು ಸ್ಮರಿಸಿದರು.

ಕ್ರೀಡಾಪಟು ಗಣೇಶ್ ಅವರ ಅಕಾಲಿಕ ಮರಣದಿಂದಾಗಿ ಪಟ್ಟಣದಲ್ಲಿ ಬಾಲಿಬಾಲ್ ಪಂದ್ಯಾವಳಿ ಆಯೋಜನೆ ಕಡಿಮೆಯಾಗುತ್ತಿದ್ದು, ಯುವ ಸಮೂಹ ತಾಲೂಕಿನಾದ್ಯಂತ ಕ್ರೀಡೆಯನ್ನು ಹೆಚ್ಚಾಗಿ ಆಯೋಜನೆ ಮಾಡಬೇಕು ಎಂದು ಕರೆ ನೀಡಿದರು.ಯುಗಾದಿ ಸಂಭ್ರಮ: ಕವನಗಳು, ವಿವಿಧ ಪ್ರಶಸ್ತಿಗಳಿಗೆ ಆಹ್ವಾನ

ಕನ್ನಡಪ್ರಭ ವಾರ್ತೆ ಮಂಡ್ಯ

ಡಾ.ಜೀಶಂಪ ಸಾಹಿತ್ಯ ವೇದಿಕೆಯಿಂದ ಯುಗಾದಿ ಸಂಭ್ರಮ ಅಂಗವಾಗಿ 16ನೇ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾ.22ರಂದು ಮಂಡ್ಯ ನಗರದ ಕರ್ನಾಟಕ ಸಂಘದ ಶಂಕರಗೌಡ ಶತಮನೋತ್ಸವ ಭವನದಲ್ಲಿ ಆಯೋಜಿಸಿದ್ದು, ಆಸಕ್ತರಿಂದ ಕವಿಗೋಷ್ಠಿಗೆ ಕವನವನ್ನು ಹಾಗೂ ಪ್ರಶಸ್ತಿಗೆ ಸಾಧಕರಿಂದ ಅರ್ಜಿ ಆಹ್ವಾನಿಸಿದೆ.

ಆಸಕ್ತರು 20 ಸಾಲಿನ ಎರಡು ಕವನಗಳು, ಕಿರು ಪರಿಚಯ, ಫೋಟೋ, ಮೊಬೈಲ್ ಸಂಖ್ಯೆ ಹಾಗೂ ವಿಳಾಸವನ್ನು ಫೆಬ್ರವರಿ 25ರೊಳಗೆ ಕಳುಹಿಸಬೇಕು. ವ್ಯಾಟ್ಸಪ್‌ನಲ್ಲಿ ಮೊದಲು ನೋಂದಣಿ ಮಾಡಿಕೊಂಡು, ನಂತರ ಅಂಚೆ ಮೂಲಕ ಕಳುಹಿಸಬೇಕು. ಕವನಗಳು ಯಾವುದಾದರೂ ವಿಷಯವನ್ನು ಒಳಗೊಂಡಿರ ಬಹುದು.

ಐವತ್ತು ಕವಿಗಳಿಗೆ ಕವಿಗೋಷ್ಠಿಯಲ್ಲಿ ಅವಕಾಶ ಕಲ್ಪಿಸಲಾಗುವುದು. ಇಪ್ಪತ್ತು ಉತ್ತಮ ಕವನಗಳಿಗೆ ‘ಕಾವ್ಯಶ್ರೀ’, ಇಪ್ಪತ್ತು ಮಂದಿ ಸಾಧಕರಿಗೆ ‘ಕನ್ನಡರತ್ನ’, ಜೀವಮಾನ ಸಾಧನೆಗಾಗಿ 10 ಮಂದಿಗೆ ‘ಕರ್ನಾಟಕ ಭೂಷಣ’ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು. ಅತ್ಯತ್ತಮ ಸಾಹಿತ್ಯ ಸೇವೆ ಮಾಡಿದ ಸಾಧಕರನ್ನು 16ನೇ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸಲಾಗುವುದು.

ಆಸಕ್ತ ಕವಿಗಳು, ವಿವಿಧಕ್ಷೇತ್ರದಲ್ಲಿ ಸಾಧನೆಮಾಡಿದವರು ವಿವಿಧ ಪ್ರಶಸ್ತಿಗಾಗಿ ಹಾಗೂ ಕವಿಗೋಷ್ಠಿಗೆ ಫೆಬ್ರವರಿ 25ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ವಿಳಾಸ: ಎಸ್.ಕೃಷ್ಣಸ್ವರ್ಣಸಂದ್ರ, ಕವಿಮಿತ್ರ, ನಂ-767, ಸ್ವರ್ಣಸಂದ್ರ, ಮಂಡ್ಯ-2 ಕಳುಹಿಸಬೇಕು. ಹೆಚ್ಚಿನ ವಿವರ ಹಾಗೂ ವ್ಯಾಟ್ಸಾಪ್ ನಂ: 9448424380ಗೆ ಕಳುಹಿಸಕೊಡಬಹುದೆಂದು ವೇದಿಕೆ ಅಧ್ಯಕ್ಷರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ನಿವೃತ್ತ ಡಿವೈಎಸ್‌ಪಿ ಎಂ.ಪಿ.ಲೊಕೇಶ್ ಕ್ರೀಡೆಗೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಎಲೆಮರೆಕಾಯಿಯಂತೆ ಹಲವು ಪ್ರತಿಭೆಗಳು ಅಡಗಿದ್ದು, ಕ್ರೀಡಾಕೂಟವನ್ನು ಆಯೋಜನೆ ಮಾಡುವುದರ ಮೂಲಕ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಬೇಕೆಂದರು ಸಲಹೆ ನೀಡಿದರು.

ಇದೇ ವೇಳೆ ಅಗಲಿದ ವಾಲಿಬಾಲ್ ಆಟಗಾರರಾದ ದಿ.ಎಂ.ಎನ್ ಗಣೇಶ್‌ಕುಮಾರ್, ದೊಡ್ಡಹುಚ್ಚಯ್ಯ, ಶಿವಣ್ಣ, ನಂಜರಾಜು ಅವರನ್ನು ಸ್ಮರಿಸಲಾಯಿತು.

ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ಪ್ರಶಾಂತ್, ಮಾಜಿ ಸದಸ್ಯ ಕೃಷ್ಣ, ಗಂಗಾ ಪರಮೇಶ್ವರಿ ಸೊಸೈಟಿ ಮಾಜಿ ಅಧ್ಯಕ್ಷ ಕಂಬರಾಜು, ನಿವೃತ್ತಪ್ರಾಂಶುಪಾಲ ಅನಿಲ್‌ಕುಮಾರ್, ರಾಜ್ಯ ಮಟ್ಟದ ಆಟಗಾರ ನಂಜುಂಡಸ್ವಾಮಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಡಾನೆ ತುಳಿದು ಬಾಳೆ, ತೆಂಗು, ಅಡಿಕೆ ನಾಶ
ಬಜೆಟ್ ಮುನ್ನ ಶಾಸಕರ ಫಾರಿನ್ ಟೂರ್‌ ಅಗತ್ಯವಿದ್ದಿಲ್ಲ