- ಸ್ಥಳೀಯ ಕಂಪನಿ ಕಲಾವಿದರಿಗೆ ನಿರ್ಲಕ್ಷ್ಯ ಹಿನ್ನೆಲೆ ರಾಷ್ಟ್ರೀಯ ವೃತ್ತಿ ರಂಗೋತ್ಸವಕ್ಕೆ ಬಹಿಷ್ಕಾರ: ಭದ್ರಪ್ಪ ಎಚ್ಚರಿಕೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ನಡೆಯುವ ವೃತ್ತಿ ರಂಗೋತ್ಸವಕ್ಕೆ ಸ್ಥಳೀಯ ಕಲಾವಿದರ ಕಂಪನಿಗಳಿಗೆ ಅವಕಾಶವನ್ನೇ ಕೊಡದೇ ಬೇರೆಯವರಿಗೆ ಅವಕಾಶ ನೀಡಿದ್ದು ಖಂಡನೀಯ ಎಂದರು.
ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳರ ಸ್ವಜನ ಪಕ್ಷಪಾತ, ಸ್ಥಳೀಯರ ಕಡೆಗಣನೆ ವಿರೋಧಿಸಿ, ವೃತ್ತಿ ರಂಗಭೂಮಿ ಕಲಾವಿದರ ಸಂಘ ಮತ್ತು ವೃತ್ತಿ ರಂಗಭೂಮಿ ಕಲಾವಿದರ ಒಕ್ಕೂಟದಿಂದ ರಾಷ್ಟ್ರೀಯ ವೃತ್ತಿ ರಂಗೋತ್ಸವವನ್ನು ಬಹಿಷ್ಕರಿಸಲು ನಿರ್ಧರಿಸಲಾಗಿದೆ. ಮೂರು ದಿನಗಳ ರಂಗೋತ್ಸವದಲ್ಲಿ ನಾವ್ಯಾರೂ ಸಹ ಭಾಗವಹಿಸುವುದಿಲ್ಲ ಎಂದರು.ಅಲ್ಲದೇ, ವೃತ್ತಿ ರಂಗಭೂಮಿ ರಂಗಾಯಣಕ್ಕೆ ಯಾವುದೇ ರೀತಿ ಅರ್ಹರಲ್ಲದ ಮಲ್ಲಿಕಾರ್ಜುನ ಕಡಕೋಳ ರಂಗಭೂಮಿ ಕಲಾವಿದರೂ ಅಲ್ಲ. ರಂಗ ಸಂಗೀತ ನಿರ್ದೇಶಕರಲ್ಲ. ನಾಟಕಗಳ ಲೇಖಕರೂ, ನಿರ್ದೇಶಕರಲ್ಲ. ಕಂಪನಿ ಮಾಲೀಕರಲ್ಲ. ಇದೆಲ್ಲಾ ಹೋಗಲಿ, ಕನಿಷ್ಠ ಪಕ್ಷ ರಂಗಕರ್ಮಿಯೂ ಅಲ್ಲ. ಇಂಥವರು ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕರಾಗಿದ್ದೇ ಆಶ್ಚರ್ಯಕರ ಸಂಗತಿಯಾಗಿದೆ. ಇಂತಹವರು ವೃತ್ತಿ ರಂಗಭೂಮಿಗೆ ಯಾವುದೇ ಬದ್ಧತೆ, ಅರ್ಹತೆ ಇಲ್ಲದ ವ್ಯಕ್ತಿಯಾಗಿದ್ದಾರೆ ಎಂದು ದೂರಿದರು.
ನಿರ್ದೇಶಕ ಕಡಕೋಳರ ಹೇಳಿಕೆಯಿಂದ ದಾವಣಗೆರೆ ವೃತ್ತಿ ಕಲಾವಿದರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ರಂಗಾಯಣದಿಂದ ಮುಂದಿನ ದಿನಗಳಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸಿದರೂ ಅವುಗಳನ್ನು ಸ್ವಾಭಿಮಾನಿ ಕಲಾವಿದರು ಬಹಿಷ್ಕರಿಸುತ್ತೇವೆ. ವೃತ್ತಿ ರಂಗಭೂಮಿಗೆ ಸಂಬಂಧಿಸದ ಕಡಕೋಳ ಅವರನ್ನು ತಕ್ಷಣ ಬದಲಿಸಿ, ವೃತ್ತಿ ರಂಗಭೂಮಿಯ ಅರ್ಹ, ಅನುಭವ ಇರುವ ವ್ಯಕ್ತಿಗಳನ್ನು ನೇಮಿಸಬೇಕು. ಈ ಬಗ್ಗೆ ಕಲಾವಿದರು, ಪತ್ರಕರ್ತ ಅಹಮ್ಮದ್ ಷರೀಫ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರಿಗೆ ಫೋನ್ ಮೂಲಕ, ಲಿಖಿತ ಪತ್ರ ಬರೆದು ಒತ್ತಾಯಿಸಿದ್ದಾರೆ ಎಂದು ತಿಳಿಸಿದರು.
ಸಂಘದ ತುರುವನೂರು ಅಹಮ್ಮದ್ ಷರೀಫ್ ಮಾತನಾಡಿ, ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕರಾದವರಿಗೆ ವೃತ್ತಿ ರಂಗಭೂಮಿಯ ಯಾವುದೇ ಚಟುವಟಿಕೆಗೆ ಸಂಬಂಧವೇ ಇಲ್ಲ. ಅಂತಹವರು ಯಾರದ್ದೋ ಶಿಫಾರಸು ಮಾಡಿಸಿ, ನಿರ್ದೇಶಕರಾಗಿದ್ದಾರೆ. ತಕ್ಷಣವೇ ನಿರ್ದೇಶಕ ಸ್ಥಾನದಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.
- - - -10ಕೆಡಿವಿಜಿ65.ಜೆಪಿಜಿ: