ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಅಂಬೇಡ್ಕರ್ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ರಿಜಿಸ್ಟರ್ ಭಾರತಿನಗರ ವತಿಯಿಂದ ಸ್ಪಂದನ ಆಸ್ಪತ್ರೆ ಮತ್ತು ವರ್ಧಮಾನ ನೇತ್ರಾಲಯ ಸಹಯೋಗದೊಂದಿಗೆ ನವ ಜೀವನೋತ್ಸವ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರತಿದಿನ ಹೆಚ್ಚು ನಡೆದಾಡುವ ಅಭ್ಯಾಸ ರೂಢಿಸಿಕೊಳ್ಳುವುದರಿಂದ ಆರೋಗ್ಯ ಉತ್ತಮಪಡಿಸಿಕೊಳ್ಳಬಹುದು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನಡೆಸುತ್ತಿರುವ ಆರೋಗ್ಯ ಶಿಬಿರಗಳಿಂದ ಗ್ರಾಮಾಂತರ ಪ್ರದೇಶದ ಜನಸಾಮಾನ್ಯರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಸಾಧ್ಯವಾಗುತ್ತದೆ ಎಂದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಲವು ಉಪಯುಕ್ತ ಕಾರ್ಯಕ್ರಮಗಳು ನಡೆಯುತ್ತಿವೆ. ಸಂಘದ ಸದಸ್ಯರೆಲ್ಲರೂ ಆರೋಗ್ಯ ಶಿಬಿರದ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಜನಜಾಗೃತಿ ಸದಸ್ಯರಾದ ಕ್ಯಾತಘಟ್ಟ ರವಿಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಧರಣಿ ಪುಟ್ಟೇಗೌಡ, ವೈದ್ಯರಾದ ಮನೋಜ್, ನಿಕಿತಾ, ರಾಜು, ಸಾಗರ ಮೇಲ್ವಿಚಾರಕಿ ಅಶ್ವಿನಿ, ಭಾರತಿ ಸೇರಿದಂತೆ ಸೇವಾ ಪ್ರತಿನಿಧಿಗಳು ಸಂಘದ ಸದಸ್ಯರು ಹಾಜರಿದ್ದರು.
ಕಿಕ್ಕೇರಿ: ಮಕ್ಕಳು ಶಿಕ್ಷಣ, ಜ್ಞಾನಾರ್ಜನೆಯ ಹಸಿವನ್ನು ಪ್ರೀತಿಯಿಂದ ಸ್ವೀಕರಿಸಿ ಸಂತೃಪ್ತಿಪಡಿಸಿಕೊಳ್ಳಲು ಶಿಕ್ಷಕರು ಮಾರ್ಗದರ್ಶಕರಾಗಿದ್ದಾರೆ ಎಂದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ ತಿಳಿಸಿದರು.ಹೋಬಳಿಯ ಜಕ್ಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಏರ್ಪಡಿಸಿದ್ದ ಶಾರದಾಪೂಜೆ ಸಮಾರಂಭದಲ್ಲಿ ಮಾತನಾಡಿ, ಸರ್ಕಾರಿ ಶಾಲೆ ಬಲವರ್ಧನೆ ಬಲುಮುಖ್ಯ, ಸರ್ಕಾರಿ ಶಾಲೆ ಉಳಿವಿಗೆ ಎಲ್ಲ ರೀತಿಯ ಸಹಕಾರ ಸದಾ ತಮ್ಮದಿದೆ ಎಂದರು.
ಶಾರದಾ ಪೂಜೆ ಪರೀಕ್ಷೆ ಭಯ ನಿವಾರಿಸಲು, ದೇವಿಯನ್ನು ಭಕ್ತಿಯಿಂದ ಪೂಜಿಸಿಸಬೇಕು. ಓದಿರುವುದನ್ನು ಬರೆಯಲು ಆತ್ಮಸ್ಥೈರ್ಯ ನೀಡುವ ದೇವಿಯ ಆರಾಧನೆ ಪೂಜೆ ಆಗಿದೆ ಎಂದು ಹೇಳಿದರು.ಮಕ್ಕಳು ಅಭಿನಯಗೀತೆ, ನೃತ್ಯ, ವಿವಿಧ ವೇಷ ಭೂಷಣ ಧರಿಸಿ ಹಾಡಿ ನಲಿದು ಸಂಭ್ರಮಸಿದರು. ಮಕ್ಕಳಿಂದ ಜರುಗಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಪ್ರಿಯಾ, ಸದಸ್ಯರಾದ ಶಿವರಾಜು, ಗೋವಿಂದರಾಜು, ದೇವರಾಜು, ಯುವರಾಜು, ದೊಡ್ಡೇಗೌಡ, ಶಿವಮ್ಮ, ಪವಿತ್ರಾ ಮತ್ತಿತರರಿದ್ದರು.