ಕನ್ನಡಪ್ರಭ ವಾರ್ತೆ ಬೆಂಗಳೂರು
ಉತ್ತರಪ್ರದೇಶ ಗೋರಖ್‌ಪುರದ ರವೀಂದರ್ ಬಂಧಿತನಾಗಿದ್ದು, ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಇನ್ನೂ ಇಬ್ಬರು ಆರೋಪಿಗಳ ಪತ್ತೆಗೆ ಪೊಲೀಸರ ತನಿಖೆ ಮುಂದುವರೆದಿದೆ. ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ತನ್ನ ಗೆಳೆಯ ವಿದ್ಯಾ ಪ್ರಸಾದ್ ಅಲಿಯಾಸ್ ವಿದ್ಯಾಭಾರತಿಯನ್ನು ಹತ್ಯೆಗೈದು ಬಳಿಕ ಖಾಲಿ ನಿವೇಶನದಲ್ಲಿ ಬಿಸಾಡಿ ಪರಾರಿಯಾಗಿದ್ದ. ಈ ಕೃತ್ಯದ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.
ಮದ್ಯದ ಅಮಲಿನಲ್ಲಿ ಗಲಾಟೆ:ನಿಸರ್ಗಲೇಔಟ್ ಸಮೀಪ ಬಾಡಿಗೆ ರೂಮ್‌ನಲ್ಲಿ ಉತ್ತರಪ್ರದೇಶದ ರವೀಂದರ್ ಹಾಗೂ ವಿದ್ಯಾಪ್ರಸಾದ್ ನೆಲೆಸಿದ್ದರು. ಪೆಂಟರ್ ಆಗಿ ಇಬ್ಬರು ಕೆಲಸ ಮಾಡುತ್ತಿದ್ದರು. ಏ.20 ರಂದು ರಾತ್ರಿ ರೂಮ್‌ನಲ್ಲಿ ಮದ್ಯ ಸೇವಿಸುವಾಗ ಕ್ಷುಲ್ಲಕ ಕಾರಣಕ್ಕೆ ಗೆಳೆಯರ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆರೋಪಿ, ವಿದ್ಯಾಪ್ರಸಾದ್‌ನ ಎದೆ ಹಾಗೂ ಹೊಟ್ಟೆಗೆ ಬಲವಾಗಿ ಗುದ್ದಿದ್ದ. ಈ ಹೊಡೆತದಿಂದ ನಿತ್ರಾಣನಾಗಿ ಆತ ಕುಸಿದು ಬಿದ್ದಿದ್ದಾನೆ. ಈ ಗಲಾಟೆ ಬಳಿಕ ರವೀಂದ್ರ ನಿದ್ರೆಗೆ ಜಾರಿದ್ದ. ಮರು ದಿನ ಬೆಳಗ್ಗೆ ಕೆಲಸಕ್ಕೆ ತೆರಳಿದ್ದ ರವೀಂದರ್, ಮಧ್ಯಾಹ್ನ ಮನೆಗೆ ಬಂದು ಸ್ನೇಹಿತನನ್ನು ಮಾತನಾಡಿಸಲು ಯತ್ನಿಸಿದ್ದಾನೆ. ರಾತ್ರಿ ಹಲ್ಲೆಯಿಂದ ವಿದ್ಯಾಪ್ರಸಾದ್ ಮೃತಪಟ್ಟಿದ್ದ.
ಆರೋಪಿ ಸೆರೆಯಾಗಿದ್ದು ಹೇಗೆ?