ವೈಜ್ಞಾನಿಕವಾಗಿ ರೇಷ್ಮೆ ಬೆಳೆದರೆ ಲಾಭ ಸಾಧ್ಯ

KannadaprabhaNewsNetwork |  
Published : Feb 08, 2026, 01:15 AM IST
3 | Kannada Prabha

ಸಾರಾಂಶ

ರೈತರು ಸಾಂಪ್ರದಾಯಿಕ ಬೆಳೆಗೆ ಬದಲಾಗಿ ರೇಷ್ಮೆ ಬೆಳೆಯುತ್ತ ಆಸಕ್ತಿ ವಹಿಸಬೇಕು

ಕನ್ನಡಪ್ರಭ ವಾರ್ತೆ ಮೈಸೂರುರೇಷ್ಮೆ ಕೃಷಿಯನ್ನು ವೈಜ್ಞಾನಿಕವಾಗಿ ಕೈಗೊಂಡರೆ ವರ್ಷದಲ್ಲಿ ಆರರಿಂದ ಏಳು ಬೆಳೆ ಪಡೆಯಬಹುದು. ರೇಷ್ಮೆಗೂಡಿಗೆ ನಿಖರವಾದ ಬೆಲೆಯೂ ಸಿಗಲಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್‌ಉಪಾಧ್ಯಕ್ಷ ಪ್ರೊ.ಎಸ್‌.ಆರ್‌. ನಿರಂಜನ ಕಿವಿಮಾತು ಹೇಳಿದರು.ಮಾನಸ ಗಂಗೋತ್ರಿ ರೇಷ್ಮೆ ಕೃಷಿ ವಿಜ್ಞಾನ ಅಧ್ಯಯನ ವಿಭಾಗ ಮತ್ತು ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರ ಆಯೋಜಿಸಿದ್ದ ರೇಷ್ಮೆ ಕೃಷಿ ತಾಂತ್ರಿಕತೆಗಳ ಕುರಿತ ರಾಷ್ಟ್ರೀಯ ಪ್ರಾಯೋಗಿಕ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ರೈತರು ಸಾಂಪ್ರದಾಯಿಕ ಬೆಳೆಗೆ ಬದಲಾಗಿ ರೇಷ್ಮೆ ಬೆಳೆಯುತ್ತ ಆಸಕ್ತಿ ವಹಿಸಬೇಕು. ಉತ್ತಮ ಗುಣಮಟ್ಟದ ಬೈವೋಲ್ಟೀನ್ ರೇಷ್ಮೆ ಉತ್ಪಾದನೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಹಲವು ರೇಷ್ಮೆ ಕೃಷಿಕರು ವಾರ್ಷಿಕವಾಗಿ ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ ಎಂದರು.ರೇಷ್ಮೆ ಕೃಷಿಯ ವಿಚಾರ ತಿಳಿದುಕೊಳ್ಳದವರು ಪ್ರಾಯೋಗಿಕವಾಗ ಬೆಳೆಯಲಾರರು. ಹವಾವಾನ ವೈಪರೀತ್ಯ, ತಂತ್ರಜ್ಞಾನದ ಕೊರತೆಯೇ ರೇಷ್ಮೆ ಕೃಷಿಯ ಹಿನ್ನೆಡೆಗೆ ಕಾರಣವಾಗಿದೆ ಎಂದು ಅವರು ಹೇಳಿದರು.ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ವಾತನಾಡಿ, ರೇಷ್ಮೆ ಉತ್ಪಾದನೆಯಲ್ಲಿ ಭಾರತವು ಪ್ರಪಂಚದಲ್ಲಿಯೇ ಎರಡನೇ ಸ್ಥಾನದಲ್ಲಿದೆ. 2024-25ರ ಆರ್ಥಿಕ ವರ್ಷದಲ್ಲಿ 41,121 ಮೆಟ್ರಿಕ್‌ ನಷ್ಟು ಉತ್ಪಾದನೆಯಾಗಿದೆ ಎಂದರು.ವಿಭಾಗದ ಅಧ್ಯಕ್ಷ ಪ್ರೊ.ಬಿ. ಸಣ್ಣಪ್ಪ, ಸಂಘಟನಾ ಕಾರ್ಯದರ್ಶಿ ಪ್ರೊ.ಎಂ.ಎನ್. ಅನಿಲ್‌ ಕುಮಾರ್, ಜೆ. ಲೋಹಿತ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಯೋಜನೆಗೆ ಭೂಮಿ ನೀಡಲು ರಾಜ್ಯ ಹಿಂದೇಟು
ಸಮಸ್ಯೆ ಬಗೆ ಹರಿಸದಿದ್ದರೇ ತೀವ್ರ ಹೋರಾಟ