ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ವೇದಿಕೆ ಅಧ್ಯಕ್ಷ ಬಿ.ಶಂಕರ್ ಬಾಬು ನೇತೃತ್ವದಲ್ಲಿ ಬೆಂಗಳೂರು- ಮೈಸೂರಿನ ಹೆದ್ದಾರಿಯ ಕುವೆಂಪು ವೃತ್ತದ ಬಳಿ ಮೊದಲು ಹುತಾತ್ಮರಾದ ಕನ್ನಡಿಗರಿಗೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಮೂಲಕ ಗೌರವ ಸಮರ್ಪಿಸಿದರು.
ನಂತರ ಉಗ್ರರ ವಿರುದ್ಧ ಘೋಷಣೆ ಕೂಗಿ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ ಕೊಳೆತ ಟಮೋಟ ಹಣ್ಣಿನಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಶಂಕರಬಾಬು, ನಾವು ಹಿಂದೂ ಆಗಿದ್ದರೂ ದೇಶದಲ್ಲಿ ಪರಕೀಯರಾಗಿ ಬದುಕುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರು ತಕ್ಷಣ ಹಿಂದೂ ಆಗಲಿ, ಮುಸ್ಲಿಮರಾಗಲಿ ದೇಶದ ಜನ ಸಂಖ್ಯೆಯಲ್ಲಿ ಎಲ್ಲರಿಗೂ ಒಂದೇ ಕಾನೂನು ತರಬೇಕು ಎಂದು ಆಗ್ರಹಿಸಿದರು.ಈ ಹಿಂದಿನ ಕಾನೂನಿನಂತೆ ಪ್ರತಿ ಕುಟುಂಬಕ್ಕೆ ಆರತಿಗಾಗಿ ಒಬ್ಬ ಮಗಳು , ಕೀರ್ತಿಗೆ ಒಬ್ಬ ಮಗ ಎಂಬ ಕಾಯ್ದೆಯನ್ನು ತಂದು ಜಾರಿ ಮಾಡಬೇಕು. ಕಾನೂನು ಮೀರಿದರೆ ಯಾವುದೇ ಸರ್ಕಾರಿಯ ಕೆಲಸವಾಗಲಿ ಅಥವಾ ಸವಲತ್ತು ಆಗಲಿ ನೀಡಬಾರದು ಎಂದು ಒತ್ತಾಯಿಸಿದರು.
ದೇಶದ ನಮ್ಮೊಳಗಿನ ಉಗ್ರರನ್ನು ಮೊದಲು ಸದೆಬಡಿದು ಕಾನೂನು ಕ್ರಮ ತೆಗೆದುಕೊಳ್ಳಬೇಕು. ಪ್ರವಾಸಿಗರನ್ನು ಹತ್ಯೆ ಮಾಡಿದ ಉಗ್ರರನ್ನು ಹಿಡಿದು ನೇಣಿಗೆ ಹಾಕಬೇಕು ಎಂದು ಆಗ್ರಹಿಸಿದರು.ಈ ವೇಳೆ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಚ್.ಜಗದೀಶ್ ಗೌಡ, ಛಾಯಾದೇವಿ, ಮಹೇಂದ್ರ, ಧನುಷ್, ದರಸಕುಪ್ಪೆ ಪ್ರಭಾಕರ , ಸಾವಿತ್ರಮ್ಮ , ಕಮಲಮ್ಮ ಸೇರಿದಂತೆ ಹಲವರು ಇದ್ದರು.