ಮಂಗಳೂರು: ಬಿಎನ್‌ಐ ಮಂಗಳೂರು ಮತ್ತು ಉಡುಪಿ ವತಿಯಿಂದ ಬಿಎನ್‌ಐ ಬಿಗ್ ಬ್ರ್ಯಾಂಡ್ಸ್ ಎಕ್ಸ್‌ಪೋ- 2026 ಸೆ.25ರಿಂದ 27ರ ವರೆಗೆ ನಗರದ ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಬಿಎನ್‌ಐ ಮಂಗಳೂರು-ಉಡುಪಿ ಕಾರ್ಯನಿರ್ವಾಹಕ ನಿರ್ದೇಶಕ ಗಣೇಶ್ ಎನ್.ಶರ್ಮ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾರ್ವಜನಿಕರಿಗೆ ಶಾಪಿಂಗ್, ಆಹಾರ, ಮನರಂಜನೆ ಮತ್ತು ವಿವಿಧ ಚಟುವಟಿಕೆಗಳ ಮೂಲಕ ಉತ್ತಮ ಅನುಭವ ನೀಡುವುದು ನಮ್ಮ ಉದ್ದೇಶವಾಗಿದೆ. ಮೂರೂ ದಿನವೂ ಉಚಿತ ಪ್ರವೇಶ ಇರಲಿದೆ ಎಂದರು.
ಎಕ್ಸ್ ಪೋ ಜೊತೆಯಲ್ಲೇ ನಡೆಯಲಿರುವ ಫುಡ್ ಫೆಸ್ಟ್‌ನಲ್ಲಿ 10ಕ್ಕೂ ಹೆಚ್ಚು ವಿವಿಧ ಆಹಾರ ಮಳಿಗೆಗಳು ಹಾಗೂ ವಿವಿಧ ರೀತಿಯ ಪಾಕಪದ್ಧತಿಗಳು ಲಭ್ಯವಿರಲಿವೆ ಎಂದರು.ಮಕ್ಕಳ ಚಿತ್ರಕಲಾ ಸ್ಪರ್ಧೆ ಮತ್ತು ಚೆಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಚಿತ್ರಕಲಾ ಸ್ಪರ್ಧೆ ಸೆ. 27 ನಡೆಯಲಿದ್ದು, ಬೆಳಗ್ಗೆ 9. 30ಕ್ಕೆ ವರದಿ ಮಾಡುವ ಸಮಯ ಮತ್ತು 10ರಿಂದ ಮಧ್ಯಾಹ್ನ 1.30ರವರೆಗೆ ಸ್ಪರ್ಧೆ ನಡೆಯಲಿದೆ. ಜತೆಗೆ ಚೆಸ್ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.ಚೇರ್ಮನ್ ಮೋಹನ್‌ರಾಜ್, ಕೋ ಚೇರ್‌ಪರ್ಸನ್ ಸುಷ್ಮಿತಾ ಕಾಮತ್, ಪಬ್ಲಿಸಿಟಿ ಇನ್‌ಚಾರ್ಜ್ ಡಾ. ಸಚಿನ್ ನಡ್ಕ, ಅಗರಿ ಎಂಟರ್‌ಪ್ರೈಸಸ್ ಮಾಲೀಕ ಅಗರಿ ರಾಘವೇಂದ್ರ ರಾವ್, ಸುನೀಲ್‌ದತ್ ಪೈ, ಸುನೀತಾ ಡಿಸೋಜಾ ಇದ್ದರು.