21ರಂದುಂ ಅಗರಿ ಸಂಸ್ಮರಣೆ, ಪ್ರಶಸ್ತಿ ಪ್ರದಾನ, ಯಕ್ಷಗಾನ ಸ್ಪರ್ಧೆ

KannadaprabhaNewsNetwork |  
Published : Mar 19, 2026, 02:30 AM IST
ಸುರತ್ಕಲ್‌ ನಲ್ಲಿ ಅಗರಿ ಸಂಸ್ಮರಣೆ,ಪ್ರಶಸ್ತಿ ಪ್ರಧಾನ ಹಾಗೂ ಮಂಗಳೂರು ವಿ ವಿ ಮಟ್ಟದ ಅಂತರ್‌ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ 21ರಂದು  | Kannada Prabha

ಸಾರಾಂಶ

ಸುರತ್ಕಲ್‌ ನ ಗೋವಿಂದ ದಾಸ ಕಾಲೇಜು ಹಾಗೂ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣಾ ವೇದಿಕೆ ಆಶ್ರಯದಲ್ಲಿ ಮಾ. 21ರಂದು ಸುರತ್ಕಲ್‌ ಗೋವಿಂದ ದಾಸ ಕಾಲೇಜಿನ ಯಕ್ಷ ಕೇಸರಿ ಅಗರಿ ರಘುರಾಮ ಭಾಗವತ ವೇದಿಕೆಯಲ್ಲಿ "ಯಕ್ಷಯಾನ " ಅಗರಿ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ನಡೆಯಲಿದೆ ಎಂದು ಅಗರಿ ರಾಘವೇಂದ್ರ ರಾವ್‌ ಹೇಳಿದರು.

ಮೂಲ್ಕಿ: ಸುರತ್ಕಲ್‌ ನ ಗೋವಿಂದ ದಾಸ ಕಾಲೇಜು ಹಾಗೂ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣಾ ವೇದಿಕೆ ಆಶ್ರಯದಲ್ಲಿ ಮಾ. 21ರಂದು ಸುರತ್ಕಲ್‌ ಗೋವಿಂದ ದಾಸ ಕಾಲೇಜಿನ ಯಕ್ಷ ಕೇಸರಿ ಅಗರಿ ರಘುರಾಮ ಭಾಗವತ ವೇದಿಕೆಯಲ್ಲಿ "ಯಕ್ಷಯಾನ " ಅಗರಿ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ನಡೆಯಲಿದೆ ಎಂದು ಅಗರಿ ರಾಘವೇಂದ್ರ ರಾವ್‌ ಹೇಳಿದರು.

ಸುರತ್ಕಲ್‌ ನ ಶುಭಗಿರಿಯಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 21ರಂದು ಬೆಳಿಗ್ಗೆ ಸುರತ್ಕಲ್‌ ಗೋವಿಂದ ದಾಸ ಕಾಲೇಜಿನ ಯಕ್ಷ ಕೇಸರಿ ಅಗರಿ ರಘುರಾಮ ಭಾಗವತ ವೇದಿಕೆಯಲ್ಲಿ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿ ರಘುನಾದ ಶೆಟ್ಟಿ, ಕೃಷ್ಣಾಪುರ ನೆರವೇರಿಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರತ್ಕಲ್‌ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಹರೀಶ ಆಚಾರ್ಯ ಪಿ. ವಹಿಸಿಲಿದ್ದಾರೆ. ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶಕುಂತಳ ರಮಾನಂದ ಭಟ್ ದೀಪ ಪ್ರಜ್ವಲನೆಗೈಯಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿಂದು ವಿದ್ಯಾದಾಯಿನೀ ಸಂಘ, ಸುರತ್ಕಲ್ ನ ಕಾರ್ಯದರ್ಶಿ ಶ್ರೀರಂಗ ಹೆಚ್, ಅಗರಿ ಎಂಟರ್ ಪ್ರೈಸಸ್ ನ ಮಾಲಕ ಅಗರಿ ರಾಘವೇಂದ್ರ ರಾವ್‌ ಪಾಲ್ಗೊಳ್ಳಲಿದ್ದಾರೆ. ಸಂಜೆ 4:30ಕ್ಕೆ ಜರುಗಲಿರುವ ಯಕ್ಷಯಾನ-2026 ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ವೇದಮೂರ್ತಿ ಕಮಲಾದೇವಿ ಪ್ರಸಾದ ಅಸ್ರಣ್ಣರು ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ಉದ್ಯಮಿ ಶ್ರೀಪತಿ ಭಟ್, ಮೂಡಬಿದಿರೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿಂದು ವಿದ್ಯಾದಾಯಿನೀ ಸಂಘ ಸುರತ್ಕಲ್ ನ ಅಧ್ಯಕ್ಷ ಜಯಚಂದ್ರ ಹತ್ವಾರ್ ಎಸ್., ಶಾಸಕ ಡಾ. ವೈ. ಭರತ್ ಶೆಟ್ಟಿ, ಕಿನ್ನಿಗೋಳಿಯ ಯುಗಪುರುಷದ ಕೆ ಭುವನಾಭಿರಾಮ ಉಡುಪ, ಶ್ರೀನಿವಾಸ ಕಾಲೇಜಿನ ಫ್ರೊಫೆಸರ್‌ ಶ್ರೀನಾಥ್‌ ರಾವ್‌ ಭಾಗವಹಿಸಲಿದ್ದು ಅಗರಿ ಸಂಸ್ಮರಣ ಭಾಷಣವನ್ನು ಕೃಷ್ಣ ಪ್ರಕಾಶ ಉಳಿತ್ತಾಯ ನೆರವೇರಿಸಲಿದ್ದು , ಅಭಿನಂದನ ಭಾಷಣ ಡಾ. ವಾದಿರಾಜ ಕಲ್ಲೂರಾಯ ಮಾಡಲಿದ್ದಾರೆ. ಅಗರಿ ರಘುರಾಮ ಭಾಗವತ ಪ್ರಶಸ್ತಿಯನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡಿಗೆ ಮತ್ತು ಅಗರಿ ಪ್ರಶಸ್ತಿಯನ್ನು ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಅವರಿಗೆ 35,000 ರು. ನಗದಿನೊಂದಿಗೆ ನೀಡಲಾಗುವುದು ಎಂದು ಅವರು ತಿಳಿಸಿದರು. ಬೆಳಗ್ಗೆ 9 ರಿಂದ ಸಂಜೆ 3.30 ರ ವರೆಗೆ ನಡೆಯಲಿರುವ ಮಂಗಳೂರು ವಿ ವಿ ಮಟ್ಟದ ಅಂತರ್‌ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯಲ್ಲಿ ಸ್ವಸ್ತಿಕ ನ್ಯಾಶನಲ್ ಬಿಸಿನೆಸ್ ಸ್ಕೂಲ್, ಮಂಗಳೂರು ತಂಡದಿಂದ ''''''''''''''''ನರಕಾಸುರ ಮೋಕ್ಷ” 10.15ರಿಂದ 11.15ರವರೆಗೆ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯ ಕಲಾವಿದರಿಂದ "ಭೀಷ್ಮ ಪ್ರತಿಜ್ಞೆ” 11.30ರಿಂದ 12.30ರವರೆಗೆ “ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜು ತಂಡದಿಂದ ''''''''''''''''ರತ್ನಾವತಿ ಕಲ್ಯಾಣ " ಅಪರಾಹ್ನ 1 ರಿಂದ 2ರವರೆಗೆ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ರವರಿಂದ "ಬಬ್ರುವಾಹನ ಕಾಳಗ " 2.15ರಿಂದ 3.15ರವರೆಗೆ ಎಸ್.ಡಿ.ಎಮ್ ಕಾಲೇಜು, ಉಜಿರೆ ಯವರಿಂದ "ತರಣಿಸೇನ ಕಾಳಗ” 3:30ರಿಂದ ಸುರತ್ಕಲ್‌ ಗೋವಿಂದ ದಾಸ ಕಾಲೇಜಿನ ಯಕ್ಷಗಾನ ಮತ್ತು ಲಲಿತ ಕಲಾ ಅಧ್ಯಯನ ಕೇಂದ್ರದವರಿಂದ "ಸುಧನ್ವ ಮೋಕ್ಷ” ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಪುಂಡಲೀಕ ಹೊಸಬೆಟ್ಟು ತಿಳಿಸಿದರು.ಗೋಷ್ಠಿಯಲ್ಲಿ ಯಕ್ಷ ಧ್ರುವ ಪಟ್ಲ ಫೌಂಡೇಶನ್‌ ನ ಸುರತ್ಕಲ್‌ ಘಟಕದ ಕಾರ್ಯದರ್ಶಿ ಗಂಗಾಧರ ಪೂಜಾರಿ ಚೇಳ್ಯೆರು, ಪೂರ್ಣೀಮಾ ಯತೀಶ್‌ ರೈ, ಹರೀಶ್‌ ಆಚಾರ್ಯ, ಪ್ರಕಾಶ್‌ ಕುಳಾಯಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಆಧಾರ್ ಸೀಡಿಂಗ್ - ಮ್ಯಾಪಿಂಗ್ ಕಡ್ಡಾಯ: ಶಶಿಧರ್ ಕೋಸಂಬೆ
ಎಸ್ಸೆಸ್ಸೆಲ್ಸಿ: ಕನ್ನಡ ಪರೀಕ್ಷೆ ಬರೆದ 254 ವಿದ್ಯಾರ್ಥಿಗಳು