ಕೆಎಂಸಿಯಲ್ಲಿ 128 ಸ್ಲೈಸ್ ಸಿಟಿ ಸ್ಕ್ಯಾನರ್ ಮತ್ತು ಅತ್ಯಾಧುನಿಕ ಮ್ಯಾಮೊಗ್ರಾಫಿ ಉದ್ಘಾಟನೆ

KannadaprabhaNewsNetwork |  
Published : Apr 03, 2026, 02:45 AM IST
ಕೆಎಂಸಿಯಲ್ಲಿ 128 ಸ್ಲೈಸ್ ಸಿಟಿ ಸ್ಕ್ಯಾನರ್ ಮತ್ತು ಅತ್ಯಾಧುನಿಕ ಮ್ಯಾಮೊಗ್ರಾಫಿ ಉದ್ಘಾಟನೆ  | Kannada Prabha

ಸಾರಾಂಶ

ಮಣಿಪಾಲ್ ಅಕಾಡೆಮಿಯ ಉನ್ನತ ಶಿಕ್ಷಣದ ಪ್ರೊ. ಚಾನ್ಸಲರ್ ಡಾ. ಎಚ್‌.ಎಸ್‌. ಬಲ್ಲಾಳ್ ಉದ್ಘಾಟಿಸಿ ಮಾತನಾಡಿ, ನವೀಕರಿಸಿದ ರೇಡಿಯೋಲಾಜಿ ವಿಭಾಗ ಅತ್ಯಾಧುನಿಕ ಡಯಾಗ್ನೊಸ್ಟಿಕ್ ಇಮೇಜಿಂಗ್ ಟೆಕ್ನಾಲೊಜಿಸ್ ಮತ್ತು ಸಂಯೋಜಿತ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲಿದೆ. ಕೆಎಂಸಿಯ ರೇಡಿಯೋಲಾಜಿ ವಿಭಾಗ ಸುದೀರ್ಘ ಇತಿಹಾಸವನ್ನು ಹೊಂದಿದ್ದು, ರೇಡಿಯಾಲಾಜಿಸ್ಟ್ ಆಗಿ ಸುಮಾರು ಮೂರು ದಶಕಗಳ ಹಿಂದೆ ಅದರ ಆರಂಭಿಕ ಪ್ರಯಾಣದ ಭಾಗವಾಗಲು ನನಗೆ ಅವಕಾಶ ಸಿಕ್ಕಿತ್ತು. ಇದು ಸಾಧಾರಣ ವಿಭಾಗದಿಂದ ಮುಂದುವರಿದ ರೇಡಿಯೊ ಡಯಾಗ್ನೋಸಿಸ್ ಸೌಲಭ್ಯವಾಗಿ ವಿಕಸನಗೊಂಡಿದೆ ಎಂದರು.

ಮಂಗಳೂರು: ನೂತನ ಹೈ ಸ್ಪೀಡ್ 128- ಸ್ಲೈಸ್ ಸಿಟಿ ಸ್ಕ್ಯಾನ್ ಮತ್ತು ಅತ್ಯಾಧುನಿಕ ಮ್ಯಾಮೊಗ್ರಾಫಿಯನ್ನು ನವೀಕರಿಸಲಾದ ರೇಡಿಯೊಲಾಜಿ ವಿಭಾಗದಲ್ಲಿ ಬುಧವಾರ ಉದ್ಘಾಟಿಸಲಾಯಿತು.

ಮಣಿಪಾಲ್ ಅಕಾಡೆಮಿಯ ಉನ್ನತ ಶಿಕ್ಷಣದ ಪ್ರೊ. ಚಾನ್ಸಲರ್ ಡಾ. ಎಚ್‌.ಎಸ್‌. ಬಲ್ಲಾಳ್ ಉದ್ಘಾಟಿಸಿ ಮಾತನಾಡಿ, ನವೀಕರಿಸಿದ ರೇಡಿಯೋಲಾಜಿ ವಿಭಾಗ ಅತ್ಯಾಧುನಿಕ ಡಯಾಗ್ನೊಸ್ಟಿಕ್ ಇಮೇಜಿಂಗ್ ಟೆಕ್ನಾಲೊಜಿಸ್ ಮತ್ತು ಸಂಯೋಜಿತ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲಿದೆ. ಕೆಎಂಸಿಯ ರೇಡಿಯೋಲಾಜಿ ವಿಭಾಗ ಸುದೀರ್ಘ ಇತಿಹಾಸವನ್ನು ಹೊಂದಿದ್ದು, ರೇಡಿಯಾಲಾಜಿಸ್ಟ್ ಆಗಿ ಸುಮಾರು ಮೂರು ದಶಕಗಳ ಹಿಂದೆ ಅದರ ಆರಂಭಿಕ ಪ್ರಯಾಣದ ಭಾಗವಾಗಲು ನನಗೆ ಅವಕಾಶ ಸಿಕ್ಕಿತ್ತು. ಇದು ಸಾಧಾರಣ ವಿಭಾಗದಿಂದ ಮುಂದುವರಿದ ರೇಡಿಯೊ ಡಯಾಗ್ನೋಸಿಸ್ ಸೌಲಭ್ಯವಾಗಿ ವಿಕಸನಗೊಂಡಿದೆ ಎಂದರು.

ಆಸ್ಪತ್ರೆಯ ರೇಡಿಯೊಲಾಜಿ ವಿಭಾಗದ ಮುಖ್ಯಸ್ಥ ಡಾ. ಸಂತೋಷ್ ರೈ ಮಾತನಾಡಿ, ನವೀಕರಿಸಿದ ವಿಭಾಗ ಹೈ -ಎಂಡ್ ಇಮೇಜಿಂಗ್ 1.5ಟಿ ಎಮ್ಆಆರ್‌ಐ 128 ಸ್ಲೈಸ್ ಸಿಟಿ ಸ್ಕ್ಯಾನರ್ , ಅತ್ಯಾಧುನಿಕ ಮ್ಯಾಮೊಗ್ರಾಫಿ, ಡಿಜಿಟಲ್ ಎಕ್ಸ್ ರೇ, ಅಲ್ಟ್ರಾಸೌಂಡ್, ಡಾಪ್ಲರ್, ಫೀಟಲ್ ಮೆಡಿಸಿನ್ ಮತ್ತು ಇಂಟರ್ವೆನ್ಶನಲ್ ರೆಡಿಯಾಲಾಜಿಸ್ಟ್ ನಂತಹ ಸೌಲಭ್ಯಗಳನ್ನು ಒಂದೇ ಸೂರಿನಲ್ಲಿ ಒಳಗೊಂಡಿದೆ. ಅನುಭವಿ ಮಹಿಳಾ ರೇಡಿಯಾಲಜಿಸ್ಟ್‌, ಅನುಭವಿ ತಂತ್ರಜ್ಞರು ಮತ್ತು ರೇಡಿಯಾಲಜಿಸ್ಟ್‌ಗಳ ಬೆಂಬಲದೊಂದಿಗೆ ತ್ವರಿತ ರೋಗ ನಿರ್ಣಯ, ಸಂಯೋಜಿತ ರೋಗಿ ಆರೈಕೆ ಹಾಗೇ ಬ್ರೆಸ್ಟ್‌ ಇಮೇಜಿಂಗ್‌ ಮತ್ತು ವುಮೆನ್ಸ್‌ ಹೆಲ್ತ್‌ ಇಮೇಜಿಂಗ್‌ ಸೌಲಭ್ಯವನ್ನು ಹೊಂದಿದೆ. ಈ ವಿಭಾಗ ದಿನದ 24 ಗಂಟೆಗಳ ಸೇವೆಯನ್ನು ಒದಗಿಸುತ್ತದೆ ಎಂದರು.

ಆಧುನಿಕ ತಂತ್ರಜ್ಞಾನಗಳಾದ ಮ್ಯಾಮೊಗ್ರಾಫಿ ಸ್ಕ್ರೀನಿಂಗ್ ಸ್ತನ ಕ್ಯಾನ್ಸರ್‌ನ್ನು ಆರಂಭದಲ್ಲೇ ಪತ್ತೆ ಪತ್ತೆ ಹಚ್ಚುತ್ತದೆ. ನಿಯಮಿತ ಮ್ಯಾಮೊಗ್ರಾಫಿ ತಪಾಸಣೆಯು 40 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ನಿಂದ ಸಾವಿಗೀಡಾಗುವ ಪ್ರಮಾಣವನ್ನು ಶೇ. 25-30 ರಷ್ಟು ತಗ್ಗಿಸುತ್ತದೆ.

ಜೊತೆಗೆ ಕಟ್ಟಿಂಗ್ ಎಡ್ಜ್ ಸಿಟಿ ತಂತ್ರಜ್ಞಾನವು ಸಿಟಿ ಕೊರೊನರಿ ಎಂಜಿಯೊಗ್ರಾಫಿ ಮತ್ತು ಕೊರೊನರಿ ಆರ್ಟರಿ ಕ್ಯಾಲ್ಶಿಯಂ ಸ್ಕೋರಿಂಗ್‌ ಮೂಲಕ ಹೃದಯ ರೋಗವನ್ನು ಆರಂಭದಲ್ಲೇ ಪತ್ತೆಹಚ್ಚಲು ನೆರವಾಗುತ್ತದೆ. ಈ ವಿಭಾಗ ಪ್ರಿವೆಂಟಿವ್ ಇಮೇಜಿಂಗ್ ಮತ್ತು ಆರಂಭಿಕ ರೋಗ ಪತ್ತೆಗೆ ಮಹತ್ವ ನೀಡುತ್ತದೆ. ರೋಗ ಪತ್ತೆ ವಿಳಂಬವಾದರೆ ಸಂಕೀರ್ಣ ಚಿಕಿತ್ಸೆ, ದೀರ್ಘಕಾಲದ ಆಸ್ಪತ್ರೆ ವಾಸ ಹಾಗೇ ಆರೋಗ್ಯ ಸೇವೆಯ ಖರ್ಚನ್ನು ಹೆಚ್ಚಿಸುತ್ತದೆ. ಆದರೆ ಸಕಾಲದಲ್ಲಿ ತಪಾಸಣೆ ಸರಳ ಚಿಕಿತ್ಸೆ, ಕಡಿಮೆ ವೆಚ್ಚ ಹಾಗೇ ದೀರ್ಘಕಾಲದ ಆರೋಗ್ಯವನ್ನು ಬೆಂಬಲಿಸುತ್ತದೆ ಎಂದರು.

ಕೆಎಂಸಿ ಆಸ್ಪತ್ರೆಯ ಕ್ಲಸ್ಟರ್ ನಿರ್ದೇಶಕ ಪ್ರಮೋದ್ ಕುಂದರ್ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಸದಾ ಉನ್ನತ ಮಟ್ಟದ ಸೌಲಭ್ಯಗಳನ್ನು ರೋಗಿಗಳಿಗೆ ಒದಗಿಸುವುದು ನಮ್ಮ ಸಮೂಹದ ಧ್ಯೇಯವಾಗಿದೆ. ವಿಶ್ವದರ್ಜೆಯ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲು ಮತ್ತು ಆರೋಗ್ಯ ಸೇವೆಯನ್ನು ಬಲಪಡಿಸುವಲ್ಲಿ ನವೀಕರಿಸಿದ ರೇಡಿಯೊ ಡಯಾಗ್ನೋಸಿಸ್ ವಿಭಾಗ ನಿರಂತರ ಬದ್ಧತೆಗೆ ಸಹಯೋಗ ನೀಡುತ್ತದೆ. ದಿನದ 24 ಗಂಟೆಯೂ ಸ್ಕ್ಯಾನಿಂಗ್ ಮತ್ತು ವರದಿ ಮಾಡುವ ಸೇವೆಯಿಂದ ನಮ್ಮ ರೋಗಿ ಕೇಂದ್ರಿತ ಸೇವೆಗಳಾದ ಭಾನುವಾರದ ಒಪಿಡಿ, ಸಂಜೆ ಒಪಿಡಿ, ತುರ್ತು ಚಿಕಿತ್ಸೆಗೆ ಪ್ರಯೋಜನವಾಗಲಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೇ 8 ರಂದು ರಾಜ್ಯಮಟ್ಟದ ರೈತ ಜಾಗೃತಿ ಸಮಾವೇಶ
ಪ್ರಧಾನಿ ಬಗ್ಗೆ ಮಾತನಾಡಲು ಕಾಂಗ್ರೆಸ್ಸಿನವರಿಗೆ ನೈತಿಕತೆ ಇಲ್ಲ: ಯತ್ನಾಳ