ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ವತಿಯಿಂದ ‘ವಿಜ್ಞಾನದಲ್ಲಿ ಮಹಿಳೆಯರು - ವಿಕಾಸಿತ ಭಾರತವನ್ನು ವೇಗಗೊಳಿಸುವುದು’ ಎಂಬ ವಿಷಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಗುರುವಾರ ವಿಶ್ವವಿದ್ಯಾಲಯದ ಎಲ್‌ಸಿಆರ್‌ಐ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಅಲೋಶಿಯಸ್ ವಿವಿಯ ಸಹಕುಲಪತಿ ರೆ.ಡಾ. ಮೆಲ್ವಿನ್ ಡಿ.ಕುನ್ಹಾ, ಎಸ್.ಜೆ., ವಿವಿಯ ರಿಜಿಸ್ಟ್ರಾರ್ ಡಾ. ರೊನಾಲ್ಡ್ ನಜರೆತ್, ಎಂಜಿನಿಯರಿಂಗ್ ಡೀನ್ ಡಾ. ರೂಬನ್ ಎಸ್., ಕ್ಸೇವಿಯರ್ ಬ್ಲಾಕ್‌ನ ನಿರ್ದೇಶಕಿ ಡಾ. ಅರುಣಾ ಕಲ್ಕುರ ಟಿ., ಎಲ್‌ಸಿಆರ್‌ಐ ಬ್ಲಾಕ್‌ನ ನಿರ್ದೇಶಕಿ ಡಾ. ಆಶಾ ಅಬ್ರಹಾಂ, ಕಾರ್ಯಕ್ರಮದ ಸಂಚಾಲಕಿ ಡಾ. ಜ್ಯೋತಿ ಮಿರಾಂಡಾ, ಸಹ ಸಂಚಾಲಕಿ ಡಾ. ಗೀತಾ ಪಿಂಟೊ, ಜೀವ ವಿಜ್ಞಾನದ ಡೀನ್ ಡಾ. ರೆನಿಟಾ ಮರಿಯಾ ಡಿ.ಸೋಜಾ ಇದ್ದರು.ಇತ್ತೀಚೆಗೆ ನಿಧನರಾದ ವಿಶ್ವಪ್ರಸಿದ್ಧ ವಿಜ್ಞಾನಿ ಮತ್ತು ಅಲೋಶಿಯಸ್ ಕಾಲೇಜಿನ ಮಾಜಿ ಪ್ರಾಂಶುಪಾಲ ದಿ. ರೆ. ಡಾ. ಲಿಯೋ ಡಿ ಸೋಜಾ ಎಸ್.ಜೆ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಜ್ಯೋತಿ ಮಿರಾಂಡಾ ಸ್ವಾಗತಿಸಿದರು. ಅಸೋಸಿಯೇಟ್ ಡೀನ್ ಡಾ. ಗೀತಾ ಪಿಂಟೊ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಅಕ್ಷಿತಾ ನಿರೂಪಿಸಿದರು.