ಮುಕುಂದ್ ರಿಯಾಲ್ಟಿಯ ಹೊಸ ಯೋಜನೆ ‘ರುದ್ರಾಕ್ಷ್’

KannadaprabhaNewsNetwork |  
Published : Mar 03, 2026, 02:45 AM IST
‘ರುದ್ರಾಕ್ಷ್’ ಹೈ ಲಿವಿಂಗ್ ಲಕ್ಸುರಿ ಹೋಮ್ಸ್ | Kannada Prabha

ಸಾರಾಂಶ

ನಗರದ ಮುಂಚೂಣಿಯ ನಿರ್ಮಾಣ ಸಂಸ್ಥೆ ಮುಕುಂದ್ ರಿಯಾಲ್ಟಿಯ ಮಹತ್ವಾಕಾಂಕ್ಷೆಯ ಪ್ರೀಮಿಯಂ ವಸತಿ ಯೋಜನೆ ‘ರುದ್ರಾಕ್ಷ್’ ಹೈ ಲಿವಿಂಗ್ ಲಕ್ಸುರಿ ಹೋಮ್ಸ್ ಕೊಟ್ಟಾರದ ಇನ್ಫೋಸಿಸ್ ಸಮೀಪ ನಿರ್ಮಾಣವಾಗುತ್ತಿದೆ.

ಮಂಗಳೂರು: ನಗರದ ಮುಂಚೂಣಿಯ ನಿರ್ಮಾಣ ಸಂಸ್ಥೆ ಮುಕುಂದ್ ರಿಯಾಲ್ಟಿಯ ಮಹತ್ವಾಕಾಂಕ್ಷೆಯ ಪ್ರೀಮಿಯಂ ವಸತಿ ಯೋಜನೆ ‘ರುದ್ರಾಕ್ಷ್’ ಹೈ ಲಿವಿಂಗ್ ಲಕ್ಸುರಿ ಹೋಮ್ಸ್ ಕೊಟ್ಟಾರದ ಇನ್ಫೋಸಿಸ್ ಸಮೀಪ ನಿರ್ಮಾಣವಾಗುತ್ತಿದೆ. ವೇಗವಾಗಿ ಬೆಳೆಯುತ್ತಿರುವ ಮಂಗಳೂರಿನ ವಸತಿ ಮತ್ತು ಐಟಿ ಕಾರಿಡಾರ್ ಪ್ರದೇಶದಲ್ಲಿ ನೂತನ ಯೋಜನೆಯನ್ನು ಇತ್ತೀಚೆಗೆ ಅನಾವರಣಗೊಳಿಸಲಾಗಿತ್ತು. ಈ ಮೂಲಕ ಆಧುನಿಕ ಶೈಲಿಯಲ್ಲಿ ನಗರ ಜೀವನದ ಹೊಸ ಅಧ್ಯಾಯ ಆರಂಭವಾಗುತ್ತಿದೆ. ವೃತ್ತಿಪರರು ಮತ್ತು ಕುಟುಂಬಗಳ ಅಗತ್ಯಗಳನ್ನು ಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ರುದ್ರಾಕ್ಷ್, ಉತ್ತಮ ಸಂಪರ್ಕ ಮತ್ತು ಜೀವನ ಶೈಲಿಯ ಸೌಲಭ್ಯಗಳನ್ನು ಒಟ್ಟುಗೂಡಿಸಿದೆ. ನಾರಾಯಣ ಗುರು ವೃತ್ತ ಮತ್ತು ಲೇಡಿಹಿಲ್ ಪ್ರದೇಶದ ಸಮೀಪದಲ್ಲಿರುವ ಈ ಯೋಜನೆ ಶಿಕ್ಷಣ ಸಂಸ್ಥೆಗಳು, ಆರೋಗ್ಯ ಕೇಂದ್ರಗಳು, ವಾಣಿಜ್ಯ ಕೇಂದ್ರಗಳು ಮತ್ತು ಪ್ರಮುಖ ರಸ್ತೆಗಳಿಗೆ ಸುಲಭ ಸಂಪರ್ಕ ವ್ಯವಸ್ಥೆ ಹೊಂದಿದೆ.

ವೆಲ್‌ನೆಸ್ ಆಧಾರಿತ ವಸತಿ ಸಮುದಾಯವಾಗಿ ರೂಪುಗೊಂಡಿರುವ ರುದಾಕ್ಷ್ಷ, ಮನರಂಜನೆ, ವಿಶ್ರಾಂತಿ ಮತ್ತು ದೈನಂದಿನ ಸೌಲಭ್ಯಗಳನ್ನು ಒಂದೇ ಕಡೆ ಒದಗಿಸುತ್ತದೆ. ಮುಖ್ಯವಾಗಿ ಮಂಗಳೂರಿನ ಮೊದಲ ೨೪/೭ ಕ್ಲೌಡ್ ಕಿಚನ್ ಅನ್ನು ವಸತಿ ಸಮುಚ್ಚಯದ ಒಳಗೆ ಪರಿಚಯಿಸಿರುವುದು ವಿಶೇ?ತೆಯಾಗಿದೆ.

ಈ ಯೋಜನೆಯಲ್ಲಿ ರೂಫ್‌ಟಾಪ್ ಇನ್ಫಿನಿಟಿ ಪೂಲ್ ವಿದ್ ಸಿಟಿ ಮತ್ತು ಸೀ ವ್ಯೂ, ವೆಲ್‌ನೆಸ್ ಕ್ಲಬ್‌ನಲ್ಲಿ ಜಕುಝಿ ಮತ್ತು ಸೌನಾ, ಜಿಮ್ನೇಶಿಯಂ, ಜಾಗಿಂಗ್ ಟ್ರ್ಯಾಕ್, ಒಳಾಂಗಣ ಆಟಗಳ ಪ್ರದೇಶ, ಬ್ಯಾಡ್ಮಿಂಟನ್ ಮತ್ತು ಬಾಸ್ಕೆಟ್‌ಬಾಲ್ ಕೋರ್ಟ್‌ಗಳು ಸೇರಿವೆ. ಮಿನಿ ಥಿಯೇಟರ್, ಮಕ್ಕಳ ಆಟದ ಮೈದಾನ ಮತ್ತು ಬಹು ಉದ್ದೇಶ ಸಭಾಂಗಣವು ಇಲ್ಲಿನ ನಿವಾಸಿಗಳಿಗೆ ಸ್ವಾವಲಂಬಿ ಜೀವನಶೈಲಿ ಗುರಿಯನ್ನಾಗಿಸಿದೆ.ಮಂಗಳೂರು ಶಿಕ್ಷಣ, ಆರೋಗ್ಯ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳೆಯುತ್ತಿರುವ ತಾಣವಾಗಿ ರೂಪುಗೊಳ್ಳುತ್ತಿರುವಾಗ ರುದ್ರಾಕ್ಷ್‌ನಂತಹ ಯೋಜನೆಗಳು ಸ್ಥಳ ಮತ್ತು ಜೀವನ ಶೈಲಿಯ ಸೌಲಭ್ಯಗಳನ್ನು ಒಟ್ಟುಗೂಡಿಸಿದ ಮನೆಗಳತ್ತ ಹೆಚ್ಚುತ್ತಿರುವ ಆಸಕ್ತಿಯನ್ನು ಪ್ರತಿಬಿಂಬಿಸುತ್ತವೆ. ಈ ಯೋಜನೆಯಲ್ಲಿ ೨ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳು ೯೮ ಲಕ್ಷ ರೂ. ದಿಂದ ಪ್ರಾರಂಭವಾಗುತ್ತವೆ. ಹೆಚ್ಚಿನ ಮಾಹಿತಿಗಾಗಿ ೭೦೯೦೯೩೩೭೦೦ಗೆ ಸಂಪರ್ಕಿಸಿ ಅಥವಾ www.mukundmgmrealty.com ಗೆ ಭೇಟಿ ನೀಡಲು ಪ್ರವರ್ತಕರು ತಿಳಿಸಿದ್ದಾರೆ.

ರುದ್ರಾಕ್ಷ್ ಯೋಜನೆಯ ಮುಖ್ಯ ವೈಶಿಷ್ಟ್ಯಗಳುಪ್ರೀಮಿಯಂ ೨ಬಿಎಚ್‌ಕೆ, ೩ಬಿಎಚ್‌ಕೆ, ೪ ಬಿಎಚ್‌ಕೆ ಡ್ಯುಪ್ಲೆಕ್ಸ್ ಮನೆಗಳು, ಇನ್ಫೋಸಿಸ್ ಸಮೀಪದ ಪ್ರಮುಖ ಸ್ಥಳ ಕೊಟ್ಟಾರ, ನಗರ ನೋಟಗಳೊಂದಿಗೆ ರೂಫ್‌ಟಾಪ್ ಇನ್ಫಿನಿಟಿ ಪೂಲ್, ಜಕುಝಿ ಮತ್ತು ಸೌನಾ ಹೊಂದಿದ ವೆಲ್‌ನೆಸ್ ಕ್ಲಬ್, ಜಿಮ್ನೇಶಿಯಂ, ಜಾಗಿಂಗ್ ಟ್ರಾಕ್ ಮತ್ತು ಕ್ರೀಡಾಂಗಣಗಳು, ಮಿನಿ ಥಿಯೇಟರ್ ಮತ್ತು ಬಹುಉದ್ದೇಶ ಸಭಾಂಗಣ, ಮಂಗಳೂರಿನ ಮೊದಲ ೨೪/೭ ಕ್ಲೌಡ್ ಕಿಚನ್ ಸೌಲಭ್ಯ.

---------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೆಲಕ್ಕೆ ಬೇಕಾಗುವ ಚಿಂತನೆ ಮಾಡೋದು ಸಾಹಿತ್ಯದ ಕೆಲಸ; ವೈ.ಎಂ.ಯಾಕೊಳ್ಳಿ
ನಿಡಗುಂದಿಯಲ್ಲಿ ಬೃಹತ್‌ ಶೋಭಾಯಾತ್ರೆ, ಕೇಸರಿಮಯ