- ಗ್ರಾಮದ ರಾಜಬೀದಿಗಳಲ್ಲಿ ರಂಭಾಪುರಿ ಶ್ರೀಗಳ ಮೆರವಣಿಗೆ

- - -

ಹರಿಹರ: ತಾಲೂಕಿನ ದೊಗ್ಗಳ್ಳಿ ಗ್ರಾಮದಲ್ಲಿ ಏ.19ರಂದು ಗ್ರಾಮದೇವತೆ ಶ್ರೀ ಕರಿಯಮ್ಮದೇವಿ ದೇವಸ್ಥಾನದ ಗೋಪುರಕ್ಕೆ ಕಳಸಾರೋಹಣ ಅಂಗವಾಗಿ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಜನಜಾಗೃತಿ ಧಾರ್ಮಿಕ ಸಮಾರಂಭ ನಡೆಯಲಿದೆ.

ಶ್ರೀ ರಂಭಾಪುರಿ ಶ್ರೀ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಕಳಸಾರೋಹಣ ಸೇವಾ ಸಮಿತಿ ಹಾಗೂ ಗ್ರಾಮದ ಭಕ್ತರ ಸಹಯೊಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 19ರಂದು ಪ್ರಾತಃಕಾಲ ಗ್ರಾಮದ ಶ್ರೀ ಆದಿದೇವ ಈಶ್ವರ, ಶ್ರೀ ಆಂಜನೇಯ, ಶ್ರೀ ಕರಿಯಮ್ಮದೇವಿ, ಶ್ರೀ ದುರುಗಮ್ಮ ದೇವಿಗೆ ವಿಶೇಷ ರುದ್ರಾಭಿಷೇಕ, ವಿಶೇಷ ಅಲಂಕಾರ, ಪೂಜೆ ಹಾಗೂ ಕಳಸಕ್ಕೆ ಮಂತ್ರೋಪದೇಶ, ಮಹಾಮಂಗಳಾರತಿ ನಡೆಯುವುದು.

ಬೆಳಗ್ಗೆ 10 ಗಂಟೆಗೆ ಶ್ರೀ ರಂಭಾಪುರಿ ಡಾ. ಪ್ರಸನ್ನರೇಣುಕ ವೀರಸೋಮೇಶ್ವರ ರಾಜದೇಶಿ ಕೇಂದ್ರ ಶ್ರೀಗಳನ್ನು ಕಳಸ, ಪೂರ್ಣಕುಂಭ ಸಕಲ ವಾದ್ಯಗಳೊಂದಿಗೆ ದೊಗ್ಗಳ್ಳಿ ಕ್ಯಾಂಪ್ ಹರಿಹರ ರಸ್ತೆಯಿಂದ ಗ್ರಾಮದ ರಾಜಬೀದಿಗಳಲ್ಲಿ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ಬೆಳಗ್ಗೆ 11.30ಕ್ಕೆ ಶ್ರೀಗಳ ದೇವಿ ದೇವಸ್ಥಾನಕ್ಕೆ ಕಳಸಾರೋಹಣ ಮಾಡಲಿದ್ದಾರೆ. ಅನಂತರ ಜನಜಾಗೃತಿ ಧಾರ್ಮಿಕ ಸಮಾರಂಭ ನಡೆಯಲಿದೆ.


ಕಾರ್ಯಕ್ರಮದ ನೇತೃತ್ವ ಅವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಶ್ರೀ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಉಜ್ಜಂಗಿದುರ್ಗದ ರೇವಣಸಿದ್ದ ಶಿವಾಚಾರ್ಯ ವಹಿಸಲಿದ್ದಾರೆ. ವಿಶ್ವಾರಾಧ್ಯ ಶಿವಾಚಾರ್ಯ ಶ್ರೀ ಹಾಗೂ ರೇವಣಸಿದ್ದ ಶಿವಾಚಾರ್ಯ ಶ್ರೀ ಉಪದೇಶಾಮೃತ ನೀಡಲಿದ್ದಾರೆ.

ಸಮಾರಂಭ ಹಿನ್ನೆಲೆ ಲ್ಲಿ ಏ.18ರ ಸಂಜೆ ಹಳೇ ಬಾತಿ ನೀಲನಹಳ್ಳಿ ಶ್ರೀ ಆಂಜನೇಯ ಸ್ವಾಮಿಯನ್ನು ಬರಮಾಡಿ ಕೊಳ್ಳಲಾಗುವುದು. ಸಂಜೆ 5 ಗಂಟೆಗೆ ಗಂಗಾಪೂಜೆ ಪ್ರಧಾನ ಕಳಸ ಸ್ಥಾಪನೆ, ಪೂಜೆ ಹಾಗೂ ಹೋಮಗಳು ನಡೆಯಲಿದೆ. ಹಿಂದೂಸ್ಥಾನಿ ಗಾಯಕ ವಿದ್ವಾನ್ ಆನಂದ್ ಪಾಟೀಲ್ ಅವರಿಂದ ಸಂಗೀತ ಸೇವೆ ನಡೆಯಲಿದೆ. ಮಧ್ಯಾಹ್ನ 12.30 ರಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

- - -