ಮಣಿಪಾಲ ಇಂದಿರಾ ಕ್ಯಾಂಟೀನ್: ರಾಹುಲ್‌ ಗಾಂಧಿ ಜನ್ಮದಿನಾಚರಣೆ

KannadaprabhaNewsNetwork |  
Published : Jun 21, 2025, 12:49 AM IST
19ರಾಹುಲ್‌ | Kannada Prabha

ಸಾರಾಂಶ

ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬವನ್ನು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯತೀಶ್ ಕರ್ಕೆರಾ ನೇತೃತ್ವದಲ್ಲಿ ಮಣಿಪಾಲದ ಇಂದಿರಾ ಕ್ಯಾಂಟಿನ್ ನಲ್ಲಿ ಕೇಕ್ ಕತ್ತರಿಸಿ, ಅಲ್ಲಿಯೇ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಉಪಹಾರ ಸೇವಿಸುವುದರ ಮೂಲಕ ಗುರುವಾರ ವಿಶಿಷ್ಟವಾಗಿ ಆಚರಿಸಿದರು.

ಕನ್ನಡಪ್ರಭ ವಾರ್ತೆ ಮಣಿಪಾಲಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬವನ್ನು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯತೀಶ್ ಕರ್ಕೆರಾ ನೇತೃತ್ವದಲ್ಲಿ ಮಣಿಪಾಲದ ಇಂದಿರಾ ಕ್ಯಾಂಟಿನ್ ನಲ್ಲಿ ಕೇಕ್ ಕತ್ತರಿಸಿ, ಅಲ್ಲಿಯೇ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಉಪಹಾರ ಸೇವಿಸುವುದರ ಮೂಲಕ ಗುರುವಾರ ವಿಶಿಷ್ಟವಾಗಿ ಆಚರಿಸಿದರು. ಈ ಸಂದರ್ಭ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಎಂ. ಎ. ಗಫೂರ್, ರಾಹುಲ್ ಗಾಂಧಿ ಅವರು ಸದಾ ಸತ್ಯವನ್ನು ಮಾತನಾಡುತ್ತಾ ಸುಳ್ಳಿನ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದಾರೆ. ದೇಶದಲ್ಲಿ ನಿರುದ್ಯೋಗ ನಿವಾರಣೆ ನಿಟ್ಟಿನಲ್ಲಿ ಸದಾ ಕಾಳಜಿ ವ್ಯಕ್ತಪಡಿಸುವುದರೊಂದಿಗೆ ದೇಶದಲ್ಲಿ ಶಾಂತಿ ಸೌಹಾರ್ದತೆಯ ಸಂದೇಶವನ್ನು ಸಾರಿಕೊಂಡು ಬಂದಿರುತ್ತಾರೆ ಎಂದರು.ಕಾಲ್ನಡಿಗೆ ಮೂಲಕ ದೇಶದಾದ್ಯಂತ ಸಂಚಾರ ಮಾಡಿ ದ್ವೇಷವನ್ನು ಅಳಿಸಿ ಪ್ರೀತಿಯ ಸಂದೇಶವನ್ನು ಪ್ರಚಾರ ಮಾಡುವ ಬಹುದೊಡ್ಡ ಕೆಲಸವನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ದೇಶದ ಚುಕ್ಕಾಣಿಯನ್ನು ಹಿಡಿಯಲಿ ಎಂಬ ಹಾರೈಕೆ ಪ್ರತಿಯೊಬ್ಬ ನಾಗರಿಕನೂ ಕೂಡ ಬಯಸುತ್ತಿದ್ದಾರೆ ಎಂದರು.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯತೀಶ್ ಕರ್ಕೆರ ಅವರು, ಇಂದು ಇಂದಿರಾಜಿ ಮೊಮ್ಮಗನ ಹುಟ್ಟುಹಬ್ಬವನ್ನು ಇಂದಿರಾ ಕ್ಯಾಂಟಿನಿನಲ್ಲಿ ಆಚರಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರ ಹಸಿವನ್ನು ನೀಗಿಸಲು ಇಂದಿರಾ ಕ್ಯಾಂಟೀನ್ ಆರಂಭಿಸಿದ್ದು, ಈ ಯೋಜನೆಗೆ ಇನ್ನಷ್ಟು ಪ್ರಚಾರ ಲಭಿಸಬೇಕು ಎನ್ನುವ ನಿಟ್ಟಿನಲ್ಲಿ ಇಲ್ಲಿಯ ರಿಕ್ಷಾ ಚಾಲಕರೊಂದಿಗೆ ಸೇರಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಹುಲ್ ಗಾಂಧಿ ಇಡೀ ದೇಶವನ್ನು ಸಂಚಾರ ಮಾಡುವ ಮೂಲಕ ಜನರಿಗೆ ಅತೀ ಹೆಚ್ಚು ಹತ್ತಿರವಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ದೇಶದ ಪ್ರಧಾನಿಯಾಗಬೇಕು ಎನ್ನುವುದು ನಮ್ಮ ಹಾರೈಕೆಯಾಗಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ, ಮೀನುಗಾರ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್, ಮುಖಂಡರಾದ ಮುರಳಿ ಶೆಟ್ಟಿ, ಅಮೃತ್ ಶೆಣೈ, ಸುಕೇಶ್ ಆಚಾರ್ಯ, ಹಮ್ಮದ್, ನವೀನ್ ಸಾಲಿಯಾನ್, ಯಾದವ ಅಮೀನ್, ಸದಾನಂದ ಮೂಲ್ಯ ಸತೀಶ್ ಕೊಡವೂರು, ರಮೇಶ್ ತಿಂಗಳಾಯ, ರಾಮಪ್ಪ ಸಾಲಿಯಾನ್, ರೋಶನ್ ಶೆಟ್ಟಿ, ಪ್ರದೀಪ್ ಸ್ಯಾಮುವೆಲ್, ಅಬುಬಕ್ಕರ್ ಖಾಸಿಂ, ರಹೀಮ್, ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಮತ್ತಿತರರಿದ್ದರು.

PREV

Recommended Stories

ಸರ್ಕಾರಿ ನೌಕರರ ಸೊಸೈಟಿಗೆ 50.58 ಲಕ್ಷ ಲಾಭ
ಡಿಸಿಸಿ ಬ್ಯಾಂಕ್‌ಗೆ ಅಣ್ಣಾಸಾಹೇಬ್ ಜೊಲ್ಲೆ ಆಯ್ಕೆ ನಿಶ್ಚಿತ