ದೇಶದ ಪ್ರಗತಿಗೆ ಹಲವು ಯೋಜನೆ ಜಾರಿ

KannadaprabhaNewsNetwork |  
Published : Dec 29, 2025, 02:00 AM IST
ಪುಟ್ಟರಂಗಶೆಟ್ಟಿ | Kannada Prabha

ಸಾರಾಂಶ

ಕಾಂಗ್ರೆಸ್ ಪಕ್ಷದಿಂದ ದೇಶದ ಪ್ರಗತಿಗಾಗಿ ಹಲವಾರು ಜನಪರ ಯೋಜನೆಗಳು ಜಾರಿ ಮಾಡಲಾಗಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಕಾಂಗ್ರೆಸ್ ಪಕ್ಷದಿಂದ ದೇಶದ ಪ್ರಗತಿಗಾಗಿ ಹಲವಾರು ಜನಪರ ಯೋಜನೆಗಳು ಜಾರಿ ಮಾಡಲಾಗಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಭಾನುವಾರ ೧೪೧ ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವಾತಂತ್ರ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ದೇಶಕ್ಕಾಗಿ ಹೋರಾಡಿ ಪ್ರಾಣ ತೆತ್ತ ಅನೇಕ ಹಿರಿಯರಿದ್ದಾರೆ. ಇವರು ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ತಮ್ಮ ಜೀವ ಸವೆಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ತ್ಯಾಗ ಮಾಡಿ ಸಂಘಟನೆಯನ್ನು ಬಲಪಡಿಸಿದ ಪಕ್ಷದ ಹಿರಿಯ ಮುಖಂಡರು, ಮಹನೀಯರನ್ನು ಸನ್ಮಾನಿಸುವ ಮೂಲಕ ಪಕ್ಷದ ವತಿಯಿಂದ ಗೌರವಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಾಡಾ ಅಧ್ಯಕ್ಷ ಪಿ,ಮರಿಸ್ವಾಮಿ ಮಾತನಾಡಿ, ಕಾಂಗ್ರೆಸ್ ಇತಿಹಾಸವನ್ನು ಹೊಂದಿರುವ ಪಕ್ಷವಾಗಿದ್ದು, ಕಾಂಗ್ರೆಸ್ ದಿಂದ ಪ್ರಧಾನಿಗಳಾಗಿರುವ ಅನೇಕರು ದೇಶದ ಪ್ರಗತಿಗಾಗಿ ಹಲವಾರು ಯೋಜನೆಗಳನ್ನು ಕಾರ್ಯಗತ ಮಾಡಿದ್ದಾರೆ. ಹಸಿರು ಕ್ರಾಂತಿ, ಪಂಚವಾರ್ಷಿಕ ಯೋಜನೆ, ಆಹಾರ ಭದ್ರತೆ, ಉದ್ಯೋಗ ಖಾತರಿ ಯೋಜನೆ, ಅನ್ನದಾಸೋಹ ಸೇರಿದಂತೆ ಹಲವಾರು ಪ್ರಗತಿಪರ ಕಾರ್ಯಕ್ರಮ ರೂಪಿಸಿದ್ದಾರೆ ಎಂದು ಹೇಳಿದರು.

ಪಕ್ಷದ ಹಿರಿಯ ಮುಖಂಡರಾದ ಶತಾಯುಷಿ ಬಿಸಲವಾಡಿ ಚನ್ನಬಸಪ್ಪ, ಕೆ.ಕೆ.ಹುಂಡಿ ದೊಡ್ಡೇಗೌಡ, ರಾಚಯ್ಯ ಚಿಕ್ಕಕೆಂಪಿಹುಂಡಿ, ರಂಗಸ್ವಾಮಿ ವೆಂಕಟಯ್ಯನಛತ್ರ, ಅನ್ವರ್‌ಪಾಷ ಹೆಬ್ಬಸೂರು, ಹೊನ್ನಯ್ಯ ಅವರನ್ನು ಸನ್ಮಾನಿಸಿಲಾಯಿತು.

ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಜಿಲ್ಲಾ ಕಾಂಗ್ರೆಸ್‌ಮಹಿಳಾ ಅಧ್ಯಕ್ಷೆ ಆರ್.ನಾಗರತ್ನ, ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಆರ್.ಮಹದೇವ್, ಜಿಲ್ಲಾ ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಎ,ಎಸ್,ಗುರುಸ್ವಾಮಿ, ನಾಮನಿರ್ದೇಶಿತ ಸದಸ್ಯ ಸ್ವಾಮಿ, ಕೆಡಿಪಿಸದಸ್ಯ ಶ್ರೀನಿವಾಸ್, ನಗರಸಭೆ ಮಾಜಿ ಅಧ್ಯಕ್ಷೆ ಚಿನ್ನಮ್ಮ, ಸದಸ್ಯೆ ಕಲಾವತಿ, ಗ್ರಾಮಾಂತರ ಮಹಿಳಾ ವಿಭಾಗದ ಅಧ್ಯಕ್ಷೆ ಶಕುಂತಲಾ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಧು ಸೂಧನ್, ಬಿಸಲವಾಡಿ ರವಿ, ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು, ಗ್ರಾಪಂ ಮಾಜಿ ಅಧ್ಯಕ್ಷ ಶಿವಣ್ಣ, ನಾಗಯ್ಯ ನಾಗವಳ್ಳಿ, ನಸ್ರುಲಾಖಾನ್,ಸಿದ್ದರಾಜು, ಅಕ್ಷಯ್, ಜಿ.ಡಿ.ಪ್ರಕಾಶ್,ರಾಮಸಮುದ್ರ ಶಿವಕುಮರ್, ಶಿವಮೂರ್ತಿ, ಚನ್ನಬಸವಯ್ಯ, ಆಯುಬ್ ಖಾನ್, ಇಬ್ರಾನ್‌ಅಹಮದ್ , ಸುಹೇಲ್ ಅಲಿಖಾನ್, ಮಹದೇವಸ್ವಾಮಿ, ಹೆಗ್ಗವಾಡಿ ಕೆಂಪರಾಜು, ಶೇಷಣ್ಣ, ಪಕ್ಷದ ಕಾರ್ಯಕರ್ತರು ಮುಖಂಡರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಹೋರಾಟಗಾರರ ಪ್ರಕರಣ ವಾಪಸ್‌: ಸಿದ್ದರಾಮಯ್ಯ
ರಾಜ್ಯದಲ್ಲಿ ಡ್ರಗ್ಸ್‌ ಫ್ಯಾಕ್ಟರಿ ಪತ್ತೆಯಾಗಿದ್ದಕ್ಕೆ ಬಿಜೆಪಿ ಕಿಡಿ