ಕನ್ನಡಪ್ರಭ ವಾರ್ತೆ ಹರಿಹರ
ನಗರದ ಎಸ್‌ಜೆವಿಪಿ ಕಾಲೇಜಿನ ಸಭಾಂಗಣದಲ್ಲಿ ಕನ್ನಡಪ್ರಭ, ಸುವರ್ಣ ನ್ಯೂಸ್ ಹಾಗೂ ಕರ್ನಾಟಕ ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ‘ಕರ್ನಾಟಕದ ಅರಣ್ಯ ಅಥವಾ ಕರ್ನಾಟಕದ ವನ್ಯಜೀವಿ’ ಚಿತ್ರಕಲಾ ಸ್ಪರ್ಧೆ 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ತಂದೆಯ ಕಾಲದಲ್ಲಿ ನಮ್ಮ ತಂದೆಯವರಾದ ಬಸವನಗೌಡ ಅವರು ಮೊದಲು ನೋಡುತ್ತಿದದ್ದೆ ಕನ್ನಡಪ್ರಭ ದಿನ ಪತ್ರಿಕೆಯನ್ನು, ಕಾರಣ ಸಮಾಜದ ರಾಜಕಾರಣಿಗಳ ಅಂಕುಡೊಂಕುಗಳನ್ನು ನಿರ್ಭೀತಿಯಿಂದ ಪ್ರಕಟಿಸುತ್ತಿದ್ದರು. ಈಗಲೂ ನನ್ನ ನೆಚ್ಚಿನ ಪತ್ರಿಕೆಯಾಗಲು ಕನ್ನಡಪ್ರಭದ ಸಾಮಾಜಿಕ ಕಾರ್ಯಗಳು. ಆ ಪರಂಪರೆಯನ್ನು ಪತ್ರಿಕೆಯ ಸಂಪಾದಕ ರವಿ ಹೆಗಡೆಯವರು ಮುಂದುವರಿಸಿಕೊಂಡು ಹೊರಟಿದ್ದಾರೆ ಎಂದರು.ಬಾತಿ ತಪೋವನ ಮುಖ್ಯಸ್ಥ, ಎಸ್‌ಎಸ್‌ಕೆ ಸಮಾಜದ ರಾಜ್ಯಾಧ್ಯಕ್ಷ ಡಾ.ಶಶಿಕುಮಾರ್ ಮೆಹರ್ವಾಡೆ ಮಾತನಾಡಿ, ನಶಿಸುತ್ತಿರುವ ವನ್ಯ ಪ್ರಾಣಿಗಳನ್ನು ಉಳಿಸಲು ಪರಿಸರ ಸಂರಕ್ಷಣೆ ಅಂಥಹ ಕಾರ್ಯ ಮಾಡಲು ಕನ್ನಡಪ್ರಭ ಸದಾ ಒಂದು ಹೆಜ್ಜೆ ಮುಂದಿದೆ. ಇಂಥಹ ಕಾರ್ಯಗಳಿಂದಾಗಿ ಕನ್ನಡಪ್ರಭ ಪತ್ರಿಕೆಗೆ ನನ್ನ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು.
ಪ್ರತಿಯೊಬ್ಬ ವಿದ್ಯಾರ್ಥಿಗಳು ಪರಿಸರ ಪ್ರೇಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳು ತಿಂಗಳಿಗೊಂದು ಅಥವಾ ವರ್ಷದಲ್ಲಿ ಒಂದೆರಡು ಗಿಡಗಳನ್ನು ನೆಟ್ಟು, ಅವುಗಳನ್ನು ಪೋಷಣೆ ಮಾಡುವ ಕಾರ್ಯ ಮಾಡಿದಾಗ ದೇಶ ಸುಭಿಕ್ಷವಾಗಲು ಸಾಧ್ಯ ಎಂದರು.ಕನ್ನಡಪ್ರಭದ ದಾವಣಗೆರೆ ಜಿಲ್ಲಾ ವರದಿಗಾರ ನಾಗರಾಜ್ ಬಡದಾಳ್ ಮಾತನಾಡಿ, ಪತ್ರಿಕೆಯ ಇಂಥಹ ಕಾರ್ಯಗಳಿಗೆ, ದಾನಿಗಳು, ಶಿಕ್ಷಣ ಸಂಸ್ಥೆಗಳು ಮುಂದೆ ಬಂದಾಗ ಸಾಮಾಜಿಕ ಕಳಕಳಿಯ ಕಾರ್ಯಗಳು ನಡೆಯಲು ಸಾಧ್ಯ. ಹುಬ್ಬಳ್ಳಿಯ ಗಾಜಿನಮನೆಯಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮವನ್ನು ರಾಜ್ಯಮಟ್ಟಕ್ಕೆ ಪರಿಚಯಿಸಿದ ಕೀರ್ತಿ ಕನ್ನಡಪ್ರಭ ಸಂಪಾದಕರಾದ ರವಿ ಹೆಗಡೆಗೆ ಸಲ್ಲುತ್ತದೆ ಎಂದರು.
ಚಿತ್ರಕಲಾ ತೀರ್ಪುಗಾರರಾಗಿ ಎ. ರಿಯಾಜ್ ಅಹ್ಮದ್, ಪಿ. ನಾಗರಾಜ್ ಕಾರ್ಯ ನಿರ್ವಹಿಸಿದರು. ಹರಿಹರ ತಾಲೂಕು ಕನ್ನಡಪ್ರಭ ವರದಿಗಾರ ರವಿಶಂಕರ್ ಗದ್ಗಿಮಠ ಸ್ವಾಗತಿಸಿದರು.ಕನ್ನಡಪ್ರಭ ಜಿಲ್ಲಾ ಜಾಹಿರಾತು ಮುಖ್ಯಸ್ಥ ಟಿ.ಆರ್. ಸುದೀಂದ್ರ, ಪತ್ರಿಕೆಯ ಜಿಲ್ಲಾ ಸರ್ಕೂಲೇಷನ್ ಮುಖ್ಯಸ್ಥ ಶಿವರಾಜ್, ತಾಲೂಕು ಅ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ವಿ.ನಾಗೇಂದ್ರಪ್ಪ, ಭಾನುವಳ್ಳಿ ಪತ್ರಿಕಾ ವಿತರಕ ಎಸ್. ಭೀಮಣ್ಣ ಇತರರು ಹಾಜರಿದ್ದರು.