ಮೊದಲ ಕಂತಲ್ಲಿ ಹಲವು ಹಿರಿಯರಿಗೆ ಚಾನ್ಸ್‌ ಮಿಸ್‌

KannadaprabhaNewsNetwork |  
Published : Jun 04, 2026, 01:45 AM IST
ಯಡಿಯೂರಪ್ಪಗೆ ಡಿಕೆಶಿಯಿಂದ ಆಹ್ವಾನ | Kannada Prabha

ಸಾರಾಂಶ

ಡಿ.ಕೆ. ಶಿವಕುಮಾರ್‌ ಅವರ ಮೊದಲ ಹಂತದ ಸಂಪುಟದಲ್ಲಿ ಸಿದ್ದರಾಮಯ್ಯ ಸರ್ಕಾರದ ಹಲವು ಹಿರಿಯ ಸಚಿವರನ್ನು ಪರಿಗಣಿಸಲಾಗಿಲ್ಲ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಡಿ.ಕೆ. ಶಿವಕುಮಾರ್‌ ಅವರ ಮೊದಲ ಹಂತದ ಸಂಪುಟದಲ್ಲಿ ಸಿದ್ದರಾಮಯ್ಯ ಸರ್ಕಾರದ ಹಿರಿಯ ಸಚಿವರಾದ ಎಚ್‌.ಕೆ. ಪಾಟೀಲ್‌, ಎಚ್‌.ಸಿ. ಮಹದೇವಪ್ಪ, ಚಲುವರಾಯಸ್ವಾಮಿ, ಜಮೀರ್‌ ಅಹಮದ್‌ ಖಾನ್‌ ಸೇರಿದಂತೆ 18 ಜನರನ್ನು ಪರಿಗಣಿಸಲಾಗಿಲ್ಲ.

ವಿಶೇಷವಾಗಿ ಹೈಕಮಾಂಡ್‌ ಜೊತೆ ಉತ್ತಮ ಒಡನಾಟ ಹೊಂದಿರುವ ಎಚ್.ಕೆ. ಪಾಟೀಲ್, ಸಿದ್ದರಾಮಯ್ಯ ಅವರ ಆಪ್ತರಾದ ಎಚ್‌.ಸಿ. ಮಹದೇವಪ್ಪ, ಎನ್‌. ಚಲುವರಾಯಸ್ವಾಮಿ, ಜಮೀರ್‌ ಅಹಮದ್‌, ಶಿವರಾಜ ತಂಗಡಗಿ, ಆರ್‌. ಬಿ. ತಿಮ್ಮಾಪುರ ಅವರು ಮೊದಲ ಕಂತಿನ ಸಂಪುಟದಲ್ಲಿ ಸೇರ್ಪಡೆಯಾಗುವ ನಿರೀಕ್ಷೆ ಇಟ್ಟುಕೊಂಡಿದ್ದರು. ಮೊದಲ ಬಾರಿ ಸಚಿವರಾಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್, ರಹೀಂಖಾನ್‌, ಮಧು ಬಂಗಾರಪ್ಪ, ಮಂಕಾಳ ವೈದ್ಯ ಅವರು ಸಹ ಉಳಿದ ಅವಧಿಗೆ ತಮ್ಮನ್ನು ಪರಿಗಣಿಸಬಹುದೆಂದು ನಿರೀಕ್ಷೆ ಇಟ್ಟುಕೊಂಡಿದ್ದರು.

ಮೊದಲ ಪಟ್ಟಿಯಿಂದ ಹೊರಗುಳಿದ ಮಾಜಿ ಸಚಿವರು:

-ಎಚ್‌.ಕೆ. ಪಾಟೀಲ್‌

-ಎಚ್‌.ಸಿ. ಮಹದೇವಪ್ಪ

-ಶಿವಾನಂದ ಪಾಟೀಲ್‌

-ಎನ್‌.ಎಸ್‌. ಬೋಸರಾಜು

-ಆರ್‌.ಬಿ. ತಿಮ್ಮಾಪುರ

-ಬಿ.ಝಡ್‌, ಜಮೀರ್‌ ಅಹಮದ್‌ ಖಾನ್‌

-ಎನ್‌. ಚಲುವರಾಯಸ್ವಾಮಿ

-ಶಿವರಾಜ್‌ ತಂಗಡಗಿ

-ದಿನೇಶ್‌ ಗುಂಡೂರಾವ್‌

-ಎಸ್‌.ಎಸ್‌. ಮಲ್ಲಿಕಾರ್ಜುನ್‌

-ಸಂತೋಷ್ ಲಾಡ್‌

-ಶರಣಬಸಪ್ಪ ದರ್ಶನಾಪುರ

===

-ಕೆ. ವೆಂಕಟೇಶ್‌

-ಲಕ್ಷ್ಮೀ ಹೆಬ್ಬಾಳ್ಕರ್‌

-ಮಧು ಬಂಗಾರಪ್ಪ

-ಡಾ. ಎಂ.ಸಿ. ಸುಧಾಕರ್

-ಮಂಕಾಳ ವೈದ್ಯ

-ರಹೀಂ ಖಾನ್‌.ಮಾಜಿ ಸಿಎಂಗಳಿಗೆ ಆಹ್ವಾನ: ಡಿಕೆಶಿ ಸ್ಪೆಷಲ್‌!:

ಮಾಜಿ ಮುಖ್ಯಮಂತ್ರಿಗಳಿಗೆ ಖುದ್ದು ಆಹ್ವಾನ ನೀಡುವುದರಿಂದ ಎಐಸಿಸಿ ನಾಯಕರನ್ನು ವಿಮಾನನಿಲ್ದಾಣದಿಂದ ಲೋಕಭವನಕ್ಕೆ ಕರೆತರುವವರೆಗೆ...ಬುಧವಾರ ಬೆಳಗ್ಗೆಯಿಂದ ಸಂಜೆವರೆಗೆ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಉತ್ಸಾಹ, ಸಂಭ್ರಮದಿಂದ ಓಡಾಡಿದರು.ನೊಣವಿನಕೆರೆ ಅಜ್ಜಯ್ಯ ನೀಡಿದ ದಿನ, ಸಮಯದಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಡಿ.ಕೆ.ಶಿವಕುಮಾರ್‌ ರಾಜ್ಯ ರಾಜಕೀಯದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಮುಖ್ಯಮಂತ್ರಿಯಾಗಿ ತಾವು ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್‌.ಯಡಿಯೂರಪ್ಪ ಅವರಿಗೆ ತಾವೇ ಖುದ್ದು ಆಹ್ವಾನ ನೀಡಿದರು.ಮೊದಲಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ಜತೆಗೂಡಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ತೆರಳಿ ಪ್ರಮಾನವಚನ ಕಾರ್ಯಕ್ರಮಕ್ಕೆ ಆಗಮಿಸುವಂತೆ ಕೋರಿದರು. ನಂತರ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರ ಡಾಲರ್ಸ್‌ ಕಾಲೊನಿಯ ಧವಳಗಿರಿ ನಿವಾಸಕ್ಕೆ ಹಾಗೂ ಪದ್ಮನಾಭನಗರದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಲೋಕಭವನಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು. ಈ ವೇಳೆ ಎಚ್‌.ಡಿ.ದೇವೇಗೌಡ ಅವರ ಕಾಲಿಗೆ ಬಿದ್ದು ಆಶೀರ್ವಾದವನ್ನೂ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಸ ವೇತನ ಶ್ರೇಣಿ ಜಾರಿಗೆ ಒತ್ತಾಯಿಸಿ ಮನವಿ
ಜಿಲ್ಲೆಯಲ್ಲಿ ಎಸ್ಐಆರ್‌ ಪ್ರಕ್ರಿಯೆ ಆರಂಭ: ಡಿಸಿ