ಸಮಾಜದ ಬೆಂಬಲದಿಂದ ರಾಜಕೀಯ ಬದಲಾವಣೆಗೆ ಪ್ರಯತ್ನ

KannadaprabhaNewsNetwork |  
Published : Oct 29, 2026, 03:15 AM IST
61 | Kannada Prabha

ಸಾರಾಂಶ

2008ರಿಂದ ನಾಲ್ಕು ಚುನಾವಣೆಗಳಲ್ಲಿ ತಾಲೂಕಿನಲ್ಲಿ ಪ್ರವಾಸ ಮಾಡಿದ್ದರೂ, ಈ ಗ್ರಾಮದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನರು ಒಗ್ಗೂಡಿ ಬೆಂಬಲ ವ್ಯಕ್ತಪಡಿಸಿರುವುದು ಇದೇ ಮೊದಲು.

ಕನ್ನಡಪ್ರಭ ವಾರ್ತೆ ಬೆಟ್ಟದಪುರಸಮಾಜದ ಮುಖಂಡರು ಮತ್ತು ಜನರ ವಿಶ್ವಾಸಕ್ಕೆ ತಕ್ಕಂತೆ ನಡೆದುಕೊಂಡು, ಕ್ಷೇತ್ರದಲ್ಲಿ ರಾಜಕೀಯ ಬದಲಾವಣೆ ಹಾಗೂ ಸಮಾಜದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ. ಪ್ರಸನ್ನ ಹೇಳಿದರು.ಪಿರಿಯಾಪಟ್ಟಣ ತಾಲೂಕಿನ ಮರದೂರು ಮರಿಗೌಡನ ಕೊಪ್ಪಲು ಗ್ರಾಮದಲ್ಲಿ ನಡೆದ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಹಲವು ತಿಂಗಳಿಂದ ಸಮಾಜದ ಮುಖಂಡರು ತಮ್ಮ ನಾಯಕತ್ವಕ್ಕೆ ಬೆಂಬಲ ಸೂಚಿಸುತ್ತಿದ್ದು, ಗ್ರಾಮದಲ್ಲಿ ಒಗ್ಗಟ್ಟಿನಿಂದ ಸಹಕಾರ ನೀಡಿರುವುದು ಸಂತಸ ತಂದಿದೆ ಎಂದರು.2008ರಿಂದ ನಾಲ್ಕು ಚುನಾವಣೆಗಳಲ್ಲಿ ತಾಲೂಕಿನಲ್ಲಿ ಪ್ರವಾಸ ಮಾಡಿದ್ದರೂ, ಈ ಗ್ರಾಮದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನರು ಒಗ್ಗೂಡಿ ಬೆಂಬಲ ವ್ಯಕ್ತಪಡಿಸಿರುವುದು ಇದೇ ಮೊದಲು. ಸಮಾಜದ ಜನರ ವಿಶ್ವಾಸ ಉಳಿಸಿಕೊಂಡು, ಅವರ ಮುಖಂಡರಿಗೆ ರಾಜಕೀಯ ಅವಕಾಶ ಕಲ್ಪಿಸುವುದರ ಜತೆಗೆ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.ತಾಲೂಕಿನಲ್ಲಿ ಕೆಲವೇ ಕುಟುಂಬಗಳಿಗೆ ರಾಜಕೀಯ ಅಧಿಕಾರ ಮತ್ತು ಅವಕಾಶಗಳು ಸೀಮಿತವಾಗದೆ, ಎಲ್ಲ ಸಮಾಜಗಳ ಅರ್ಹ ವ್ಯಕ್ತಿಗಳಿಗೂ ಅವಕಾಶ ದೊರೆಯಬೇಕು. ಜಾತಿ, ಪಕ್ಷ ಹಾಗೂ ಸ್ವಾರ್ಥವನ್ನು ಬದಿಗಿಟ್ಟು ವ್ಯಕ್ತಿಯ ಗುಣ, ಸೇವಾ ಮನೋಭಾವ ಮತ್ತು ಅಭಿವೃದ್ಧಿಯ ಬದ್ಧತೆಯನ್ನು ಪರಿಗಣಿಸಬೇಕು ಎಂದು ಹೇಳಿದರು.ಇದೇ ವೇಳೆ 40ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ತೊರೆದು ಪಿ.ಎಂ ಪ್ರಸನ್ನ ಅವರ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಯಾದರು. ಪುರಸಭಾ ಸದಸ್ಯರಾದ ಕುಮಾರ್, ರಂಗಸ್ವಾಮಿ, ರಾಮು, ಮಲ್ಲಿಕಾರ್ಜುನ್, ರವಿ, ನವೀನ್, ಕುಮಾರ್, ಮರಿಗೌಡ, ತಮ್ಮೇಗೌಡ, ಮರಿಯಣ್ಣ, ಕಾಳಯ್ಯ, ರಘು, ಗುರುಮೂರ್ತಿ, ಪರಮೇಶ್, ತಮ್ಮೇಗೌಡ, ನಾಗರಾಜು, ರಮೇಶ, ರಾಜಶೇಖರ್, ಜವರೇಗೌಡ, ಪೂಜಾರಿ ಮಹಾದೇವ, ರಾಮಕೃಷ್ಣ, ಅಣ್ಣಯ್ಯಪ್ಪ, ಮಲ್ಲೇಗೌಡ, ಮಹೇಂದ್ರ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲ ನೀಡದ್ದಕ್ಕೆ ಬೇಕರಿ ಮಾಲೀಕರಿಗೆ ಧಮ್ಕಿ ಹಾಕಿ ದಾಂಧಲೆ : ಇಬ್ಬರ ಬಂಧನ
ಮೆಟ್ರೋದಲ್ಲಿ ಮಹಿಳೆಯ ವಿಡಿಯೋ ಮಾಡಿದ ಕಿಡಿಗೇಡಿ ವಿರುದ್ಧ ಕೇಸ್