ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 5 ಲಕ್ಷ ರು. ಮೌಲ್ಯದ 10 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
ಬಂಗಾರಪೇಟೆ: ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 5 ಲಕ್ಷ ರು. ಮೌಲ್ಯದ 10 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
ಪಟ್ಟಣದ ಹುಣಸನಹಳ್ಳಿ ಗ್ರಾಮದಿಂದ ಸೆಲಂ ಗುಡಿಸಲು ಕಡೆ ಹೋಗುವ ತಿರುವಿನ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದಂತಹ ಖಚಿತ ಮಾಹಿತಿಯನ್ನು ಆಧರಿಸಿ ಇನ್ಸ್‌ಪೆಕ್ಟರ್ ರವಿಕುಮಾರ್.ಸಿ ಮತ್ತು ಸಿಬ್ಬಂದಿ ಕೂಡಲೆ ದಾಳಿ ನಡೆಸಿ, ಒಡಿಸ್ಸಾ ರಾಜ್ಯದ ಗಂಜಮ್ ಜಿಲ್ಲೆಯ ನಬೀನ್ ಕುಮಾರ್ ಬಾರೀಕ್ ಮತ್ತು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸಂದೀಪ್ ಎಂಬಾತನನ್ನು ಬಂಧಿಸಿ, ಅವರಿಂದ 5ಲಕ್ಷ ರು. ಮೌಲ್ಯದ 10ಕೆಜಿ ಗಾಂಜಾವನ್ನು ವಶಪಡಿಸಿಕೊಂಡು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.ಡಿವೈಎಸ್‌ಪಿ ವಿ.ಲಕ್ಷ್ಮಯ್ಯ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಿ, ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಪಿ.ಐ ರವಿಕುಮಾರ್, ಸಿ, ಪಿ.ಎಸ್.ಐ ಪ್ರಕಾಶ್ ನರಸಿಂಗ್, ಎ.ಎಸ್.ಐ ರಮೇಶ್ ಹಾಗೂ ಸಿಬ್ಬಂದಿ ಗೋಪಾಲ್, ಚಲಪತಿ, ಸುನೀಲ್, ಮಹೇಂದ್ರ ಕುಮಾರ್, ಮಂಜುನಾಥ್, ರಾಜೇಶ್ ಬಾಬು, ವಿಶ್ವನಾಥ್ ಅವರುಗಳನ್ನೊಳಗೊಂಡ ತಂಡವು ಯಶಸ್ವಿಯಾಗಿದ್ದು, ತಂಡವನ್ನು ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಶ್ಲಾಘಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.