- ಅಡಕೆ ಬೆಳೆಗಾರರ ಸೌಹಾರ್ದ ಸಹಕಾರಿ ಸಂಘ ನಿ.ಹೊಸ ದಾಸ್ತಾನು ಮಳಿಗೆ ಸ್ಥಳಾಂತರ ಪೂಜಾ ಕಾರ್ಯ.ಕ್ರಮ
ಪಟ್ಟಣದ ಟ್ಯಾಗ್ ಕೋಸ್ ಸಂಸ್ಥೆಯಿಂದ ರೈತರು ಬೆಳೆದ ಹಸಿ ಅಡಕೆಗೂ ಸಹ ಮಾರುಕಟ್ಟೆ ಸೌಲಭ್ಯ ಒದಗಿಸಲಾಗುವುದು ಎಂದು ಸಂಸ್ಥೆ ಅಧ್ಯಕ್ಷ ಜಿ.ಟಿ.ಶಶಾಂಕ ಹೇಳಿದ್ದಾರೆ.ತರೀಕೆರೆ ಟ್ಯಾಗ್ ಕೋಸ್ ಸಂಸ್ಥೆಯಿಂದ 1000 ಮೆಟ್ರಿಕ್ ಟನ್ ಅಡಕೆ ಸಂಗ್ರಹ ಸಾಮರ್ಥ್ಯವುಳ್ಳ ಗೋದಾಮು ಮಳಿಗೆ ಸ್ಥಳಾಂತರ ಪೂಜಾ ಕಾರ್ಯಕ್ರಮದ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯದ ಪ್ರಮುಖು ಅಡಕೆ ಖರೀದಿ ಸಂಸ್ಥೆಗಳಾದ ಮಂಗಳೂರು, ಕ್ಯಾಂಕೋ ಲಿಮಿಟೆಡ್, ಮಂಗಳೂರು, ಶಿವಮೊಗ್ಗ ಮ್ಯಾಮ್ ಕೋಸ್, ಹಾಸನ ಹಾಪ್ ಕೋಸ್, ಸಾಗರ ಎಂಎನ್ ಎಚ್ ಸಂಸ್ಥೆ ಶಿವಮೊಗ್ಗ ಎಸ್.ವಿ.ಟಿ. ಸಂಸ್ಥೆಗಳಲ್ಲಿ ನಮ್ಮ ರೈತರ ಅಡಕೆಯನ್ನು ಸ್ಪರ್ಧಾತ್ಮಕ ದರದಲ್ಲಿ ಖರೀದಿಗೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅಹ್ವಾನ ನೀಡಲಾಗಿದೆ ಎಂದು ಹೇಳಿದರು.
ರೈತರು ಬೆಳೆದ ಅಡಕೆಗೆ ಉತ್ತಮ ಬೆಲೆ ದೊರೆಯುತ್ತದೆ, ಮುಂದಿನ ದಿನಗಳಲ್ಲಿ ತರೀಕೆರೆ ಮತ್ತು ಅಜ್ಜಂಪುರ ಭಾಗದ ಅಡಕೆ ಬೆಳೆಯುವ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಸಂಸ್ಕರಣದ ಪೂರ್ವ ಹಸಿ ಅಡಕೆಗೆ ಮಾರುಕಟ್ಟೆ ಒದಗಿಸಲು ಸಂಸ್ಥೆ ಮುಂದಾಗಿದ್ದು, ರೈತರಿಗೆ ಬೇಕಾದ ಗುಣಮಟ್ಟದ ಕೃಷಿ ಉಪಕರಣಗಳನ್ನು ಕೂಡ ಉತ್ಪಾದಕರಿಂದ ನೇರವಾಗಿ ಖರೀದಿಸಿ ರೈತರಿಗೆ ರಿಯಾಯತಿ ದರದಲ್ಲಿ ಒದಗಿಸಲು ಕ್ರಮ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ರೈತರು ಬೆಳೆದ ಇತರೆ ವಾಣಿಜ್ಯ ಬೆಳೆಗಳಾದ ತೆಂಗು, ಮೆಣಸು ಮತ್ತಿತರರ ವಾಣಿಜ್ಯ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ ಒದಗಿಸಲಾಗುವುದು, ರೈತರು ಬೆಳೆದ ಬೆಳೆಗಳ ಬೆಲೆ ಕುಸಿತ ಸಂದರ್ಭದಲ್ಲಿ ರೈತರು ತರಾತುರಿಯಲ್ಲಿ ಬೆಳೆಗಳನ್ನು ಮಾರದೆ ರೈತರಿಗೆ ಹಣಕಾಸು ಸೌಲಭ್ಯಕ್ಕಾಗಿ ಅಡಮಾನ ಸಾಲದ ನೆರವು ನೀಡಿ ರೈತರನ್ನು ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು.ಇಲ್ಲಿಯವರೆಗೂ 220ಕ್ಕೂ ಹೆಚ್ಚು ರೈತರಿಂದ ಒಂದು ಕೋಟಿ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಷೇರು ಹಣ ಸಂಗ್ರಹಿಸಿದ್ದು 2024ರ ವರೆಗೆ ಐದು ಕೋಟಿಗೂ ಹೆಚ್ಚು ಷೇರು ಹಣ ಸಂಗ್ರಹಿಸುವ ಗುರಿ ಹೊಂದಿದೆ. ಐದು ಸಾವಿರಕ್ಕೂ ಹೆಚ್ಚು ರೈತರನ್ನು ಸಂಸ್ಥೆ ಸದಸ್ಯರನ್ನಾಗಿ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, ರೈತರು ಮುಂದೆ ಬಂದು ಸದಸ್ಯತ್ವ ಪಡೆದು ಸಂಸ್ಥೆ ಕಾರ್ಯ ಚಟುವವಟಿಕೆಗಳಲ್ಲಿ ಭಾಗವಹಿಸಿ ಪ್ರೋತ್ಸಾಹಿಸಿ ಇದರ ಸದುಪಯೋಗಪಡೆಯಬೇಕೆಂದು ಮನವಿ ಮಾಡಿದರು.ಸಂಸ್ಥೆ ಪ್ರಾರಂಭವಾಗಿ ಎರಡನೆ ವರ್ಷದಲ್ಲಿದ್ದು ಎಪಿ,ಎಂಸಿ ಗೋದಾಮನ್ನು ರಿಯಾಯತಿ ದರದಲ್ಲಿ ಬಾಡಿಗೆಗೆ ಪಡೆಯ ಲಾಗಿದ್ದು ಹೆಚ್ಚಿನ ಅಡಕೆ ಸಂಗ್ರಹಿಸಡಲು ಈ ಗೋದಾಮು ಅನುಕೂಲವಾಗಿದೆ. ಸಂಸ್ಥೆಗೆ ರಿಯಾಯಿತಿ ಬಾಡಿಗೆ ದರದಲ್ಲಿ ಬೃಹತ್ ಗೋದಾಮು ನೀಡಿದ್ದಕ್ಕಾಗಿ ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದ ಅವರು ರೈತರಿಗೆ ಸಂಸ್ಥೆಯಿಂದ ಇನ್ನೂ ಹೆಚ್ಚು ಸೇವೆ ಸಲ್ಲಿಸಲು ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನ ವಿವಿಧ ಭಾಗ ಗಳಲ್ಲಿ ಉಪಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದರು.
19ಕೆಟಿಆರ್.ಕೆ.10ಃ
ತರೀಕೆರೆಯಲ್ಲಿ ಅಡಕೆ ಬೆಳೆಗಾರರ ಸೌಹಾರ್ದ ಸಹಕಾರಿ ಸಂಘ ನಿ. ಹೊಸ ದಾಸ್ತಾನು ಮಳಿಗೆ ಸ್ಥಳಾಂತರ ಸಂದರ್ಭದಲ್ಲಿ ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ಟಿ.ಜಿ.ಶಶಾಂಕ, ಸಂಸ್ಥೆ ಉಪಾಧ್ಯಕ್ಷ ಕೆ.ಜಿ.ತಿಪ್ಪೇಶ್, ಕಾರ್ಯದರ್ಶಿ ಟಿ.ಜೆ.ಪ್ರಕಾಶ್, ಜಿಪಂ ಮಾಜಿ ಅಧ್ಯಕ್ಷ ಕೆ.ಆರ್.ದೃವಕುಮಾರ್, ಮಾಜಿ ಪುರಸಭಾಧ್ಯಕ್ಷ ಟಿ.ಎಸ್.ರಮೇಶ್, ಯಶೋದಮ್ಮ ಬಸವರಾಜ್, ಟಿ.ಆರ್.ಶ್ರೀಧರ್, ಟಿ.ಎನ್.ಆನಂದ್ ಭಾಗವಹಿಸಿದ್ದರು.