ಮರ್ಣೆ ಗ್ರಾಮ ಪಂಚಾಯಿತಿ, ಸ್ಥಳೀಯರ ಸಹಕಾರ । 50 ಸೆಂಟ್ಸ್ ವ್ಯಾಪ್ತಿಯ ಜಲಮೂಲ ಈಗ ‘ಅಮೃತಕೆರೆ’
ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದಲ್ಲಿ ಮುಚ್ಚಿಹೋಗಿದ್ದ ಕೆರೆ ಪುನಶ್ಚೇತನಗೊಳಿಸಲು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗು ಮರ್ಣೆ ಗ್ರಾಮ ಪಂಚಾಯಿತಿ ಹಾಗು ಸ್ಥಳೀಯರ ಸಹಕಾರದಿಂದ ಯೋಜನೆ ಕಾರ್ಯಗತಗೊಳಿಸಲಾಗಿದೆಮರ್ಣೆ ಗ್ರಾಮ ವ್ಯಾಪ್ತಿಯ ರಾಧನಾಯಕ್ ಶಾಲಾ ಬಳಿ ಮುಚ್ಚಿ ಹೋಗಿಸುವ ಸುಮಾರು 50 ಸೆಂಟ್ಸ್ ಜಾಗದಲ್ಲಿ ಗುರುತಿಸಿಕೊಂಡಿರುವ ‘ಪೊಟ್ಟುಕೆರೆ’ಗೆ ಅಮೃತಕೆರೆ ಎಂದು ಮರು ನಾಮಕರಣ ಮಾಡಲಾಗಿದೆ. ಈ ಕೆರೆ 50 ವರ್ಷಗಳ ಹಿಂದೆಯೆ ಹೂಳು ತುಂಬಿ ಮುಚ್ಚಿಹೋಗಿತ್ತು . ಜೊತೆಗೆ ಈ ಭಾಗದಲ್ಲೊ ನೀರಿನ ಒರತೆಯು ಕಮ್ಮಿಯಾಗಿತ್ತು.
ಅಮೃತಕೆರೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ನಮ್ಮಗ್ರಾಮ ನಮ್ಮ ಕೆರೆ’ ಯೋಜನೆಯಲ್ಲಿ ಪುನಶ್ಚೇತನಗೊಳಿಸಲಾಗುತ್ತಿದೆ. ಅದರಲ್ಲೂ ಮರ್ಣೆ ಗ್ರಾಮ ಪಂಚಾಯಿತಿ ಹಾಗು ಸ್ಥಳೀಯರು ಸಹಕಾರ ನೀಡುತಿದ್ದಾರೆ.
ಹತ್ತಿರದಲ್ಲಿ ಮರ್ಣೆ ಗ್ರಾಮ ಪಂಚಾಯಿತಿ ವತಿಯಿಂದ ಕೊಳವೆ ಬಾವಿ ಕೊರೆಯಲಾಗಿದ್ದು ನೀರು ಲಭ್ಯವಾಗಿಲ್ಲ. ಈ ಕೆರೆಯ ನೀರು ಬಳಸಿಕೊಂಡು ಜಲಮರುಪೂರಣಗೊಳಿಸಿ ಅಭಿವೃದ್ಧಿಪಡಿಸುವ ಯೋಜನೆ ಹಾಕಲಾಗಿದೆ. ಅದರಲ್ಲೂ ಈ ಕೆರೆಯ ಸುತ್ತಲೂ ವಾಕಿಂಗ್ ಟ್ರ್ಯಾಕ್ ನಿರ್ಮಾಣ ಹಾಗೂ ಸುತ್ತಲೂ ತಡೆಗೋಡೆ ನಿರ್ಮಾಣವನ್ನು ಸ್ಥಳೀಯಾಡಳಿತ ಮಾಡಲಿದೆ.
.......................
-ಉಮೇಶ್, ಹೆಬ್ರಿ ವಲಯ ಕೃಷಿ ಅಧಿಕಾರಿ. ಕೆರೆ ಅಭಿವೃದ್ದಿಯಿಂದ ಸ್ಥಳೀಯ ಕೃಷಿ ಚಟುವಟಿಕೆಗಳಿಗೆ ವೇಗ ದೊರೆಯಲಿದೆ. ಅದರಲ್ಲೂ 500 ಕುಟುಂಬಗಳು ಸರ್ವ ಋತು ಕೃಷಿ ಬೆಳೆಯಲು ಸಹಕಾರಿ.
ಮರ್ಣೆ ಗ್ರಾಮ ಪಂಚಾಯಿತಿ ವತಿಯಿಂದ ಈಗಾಗಲೆ ಮೋರಿ ಅಳವಡಿಕೆ ಕಾರ್ಯ ಮಾಡಲಾಗಿದೆ. ಮುಂದೆ ವಾಕಿಂಗ್ ಟ್ರ್ಯಾಕ್ ಸೇರಿದಂತೆ ಸುತ್ತಲೂ ಬೇಲಿ ನಿರ್ಮಾಣ, ಕೆರೆಯ ಪಕ್ಕದಲ್ಲಿರುವ ಬೋರ್ ವೆಲ್‌ಗೆ ಜಲಮರುಪೂರಣ ಕಾರ್ಯ ನಡೆಯಲಿದೆ.