ಮಸಬಿನಾಳದ ಸಮಗ್ರ ಪ್ರಗತಿಗೆ ಮಸಬಿನಾಳ ಚಲೋ ಪಾದಯಾತ್ರೆ

KannadaprabhaNewsNetwork |  
Published : Aug 31, 2024, 01:37 AM IST
ವಿಜಯಪುರ ಕಂದಗಲ್ ಶ್ರೀ ಹನುಮಂತರಾಯ ರಂಗಮAದಿರದಲ್ಲಿ ನಡೆದ ಶ್ರೀ ಹಡಪದ ಅಪ್ಪಣ್ಣ ಜಯಂತೋತ್ಸವ ಹಾಗೂ ಜನಜಾಗೃತಿ ಸಮಾವೇಶಕ್ಕೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಜ್ಞಾನದ ಮೇರು ಪರ್ವತ, ಶರಣ ಹಡಪದ ಅಪ್ಪಣ್ಣ ಜನ್ಮಭೂಮಿ ಮಸಬಿನಾಳದ ಸಮಗ್ರ ಪ್ರಗತಿಗೆ ಮಸಬಿನಾಳ ಚಲೋ ಪಾದಯಾತ್ರೆ ನಡೆಸಲಾಗುವುದು ಎಂದು ತಂಗಡಗಿಯ ಅನ್ನದಾನಿ ಅಪ್ಪಣ್ಣ ಮಹಾಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜ್ಞಾನದ ಮೇರು ಪರ್ವತ, ಶರಣ ಹಡಪದ ಅಪ್ಪಣ್ಣ ಜನ್ಮಭೂಮಿ ಮಸಬಿನಾಳದ ಸಮಗ್ರ ಪ್ರಗತಿಗೆ ಮಸಬಿನಾಳ ಚಲೋ ಪಾದಯಾತ್ರೆ ನಡೆಸಲಾಗುವುದು ಎಂದು ತಂಗಡಗಿಯ ಅನ್ನದಾನಿ ಅಪ್ಪಣ್ಣ ಮಹಾಸ್ವಾಮೀಜಿ ನುಡಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ವಿಜಯಪುರ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಹಾಗೂ ಹಡಪದ ಅಪ್ಪಣ್ಣ ಸಮಾಜದ ಬೃಹತ್ ಜನಜಾಗೃತಿ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದ ಅವರು, ಶರಣ ಹಡಪದ ಅಪ್ಪಣ್ಣನವರು ಕಾಯಕದ ಮಹತ್ವವನ್ನು ಸಾರಿದವರು. ಬಸವಣ್ಣನವರ ಒಡನಾಡಿಯಾಗಿದ್ದ ಹಡಪದ ಅಪ್ಪಣ್ಣನವರ ಜನ್ಮಭೂಮಿ ಎಂದೋ ಅಭಿವೃದ್ಧಿಯಾಗಬೇಕಿತ್ತು. ಆದರೆ, ಸರ್ಕಾರಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಮಸಬಿನಾಳ ಇಂದಿಗೂ ಅಭಿವೃದ್ಧಿಯಾಗಿಲ್ಲ. ಹೀಗಾಗಿ ಸರ್ಕಾರದ ಗಮನ ಸೆಳೆಯಲು ಮಸಬಿನಾಳ ಚಲೋ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಸಮಾಜದ ಪ್ರಗತಿಗೆ ಸಂಘಟನೆಗಳು ಅವಶ್ಯ. ಸಮಾಜ ಸಂಘಟಿತವಾಗಬೇಕು. ಅದೇ ತೆರನಾಗಿ ಶಿಕ್ಷಣವಂತವಾಗಬೇಕು. ಹೀಗಾಗಿ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ದೊರಕಿಸುವ ಗುರುತರ ಜವಾಬ್ದಾರಿಯನ್ನು ಪಾಲಕರು ನಿಭಾಯಿಸಬೇಕು ಎಂದರು.

ಸಂಘದ ರಾಜ್ಯಾಧ್ಯಕ್ಷ ಸಿದ್ಧಣ್ಣ ಮುಂಡಗೋಡ ಮಾತನಾಡಿ, ಹಡಪದ ಅಪ್ಪಣ್ಣ ಸಮಾಜ ಇನ್ನೂ ಪರಿಣಾಮಕಾರಿಯಾಗಿ ಸಂಘಟನೆಯಾಗಬೇಕಿದೆ. ಇನ್ನೂ ಅನೇಕ ಜಿಲ್ಲೆಗಳಲ್ಲಿ ಸಂಘಟನೆ ಆಮೆಗತಿಯಲ್ಲಿ ಸಾಗಿದೆ. ಹೀಗಾಗಿ ಸಮಾಜ ಸಂಘಟನೆಯ ಈ ಪವಿತ್ರ ಕಾರ್ಯದಲ್ಲಿ ಸಮಾಜ ಬಾಂಧವರು ಸ್ವಯಂಪ್ರೇರಿತವಾಗಿ ಭಾಗವಹಿಸಿ ಸಂಘಟನೆಯ ಭಾಗವಾಗಬೇಕು. ಸಂಘಟನೆಯಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯ. ಹಡಪದ ಅಪ್ಫಣ್ಣನವರ ಜನ್ಮಭೂಮಿ ಮಸಬಿನಾಳ ಪ್ರಗತಿಗೆ ವಿವಿಧ ಹಂತದ ಹೋರಾಟ ಮಾಡಲು ಸಂಘಟನೆ ಬದ್ಧವಾಗಿದೆ ಎಂದರು.ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲೋಡಗಿ ಮಾತನಾಡಿ, ಹಡಪದ ಅಪ್ಪಣ್ಣವರು ಕಾಯಕ ನಿಷ್ಠೆಗೆ ಹೆಸರುವಾಸಿ. ಅವರ ವಿಚಾರ, ಚಿಂತನೆಗಳನ್ನು ನಾವು ಜೀವನದಲ್ಲಿ ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದರು.ಉಪನ್ಯಾಸ ಮಂಡಿಸಿದ ಭೀಮಾಶಂಕರ ಮಾತನಾಡಿ, ಶಿಕ್ಷಣದಿಂದ ಪ್ರಗತಿ ಸಾಧ್ಯ. ಹೀಗಾಗಿ ಸಮಾಜ ಬಾಂಧವರು ಶಿಕ್ಷಣಕ್ಕೆ ಪ್ರಥಮಾದ್ಯತೆ ನೀಡಬೇಕು ಎಂದರು.ಉಪಮೇಯರ್ ದಿನೇಶ ಹಳ್ಳಿ, ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ಮುಖಂಡ ಅಬ್ದುಲ್‌ರಜಾಕ್ ಹೊರ್ತಿ, ಬಸನಗೌಡ ಪಾಟೀಲ ಚಬನೂರ, ವಿಡಿಎ ಸದಸ್ಯೆ ಕಾಶೀಬಾಯಿ ಹಡಪದ, ಸಂತೋಷ ತಳಕೇರಿ, ಸಂಜು ಕುಮಶಿ, ಡಾ.ಎಚ್.ಡಿ.ವೈದ್ಯ, ದಯಾನಂದ ಕೆಲೂರ, ನಾಗರಾಜ ಸರ್ಜಾಪುರ, ಎನ್.ಜಿ.ಯರನಾಳ, ನಿಂಗಪ್ಪ ನಾವಿ, ಮಲ್ಲೇಶಿ ಅರ್ಜುಣಗಿ, ವಿರುಪಾಕ್ಷಿ ಕತ್ನಳ್ಳಿ, ಪ್ರಕಾಶ ಉತ್ನಾಳ, ರಾಮು ಹಡಪದ, ಮಹಾಂತೇಶ ಮೂಲಿಮನಿ, ಚಂದ್ರಶೇಖರ ಅಮಲಿಹಾಳ, ನಟರಾಜ ಗವಳಿ, ಸಂಗಣ್ಣವರ, ಸದಾನಂದ ನಿಂಬರಗಿ ಇದ್ದರು. ಸಂಜೀವ ಶಿವಣಗಿ ಸ್ವಾಗತಿಸಿದರು. ಓಂಕಾರ ನಾವಿ ಕಾರ್ಯಕ್ರಮ ನಿರೂಪಿಸಿದರು. ಅನನ್ಯ ಹಡಪದ ಹಾಗೂ ದಾನೇಶ್ವರಿ ಹಡಪದ ರಿಂದ ಭರತನಾಟ್ಯ ಪ್ರದರ್ಶನ ನಡೆಸಿದರು.

ಮೆರವಣಿಗೆ:

ಸಮಾರಂಭಕ್ಕೂ ಮುನ್ನ ಹಡಪದ ಅಪ್ಪಣ್ಣವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ವಿವಿಧ ಕಲಾ ವಾದ್ಯ ವೈಭವ ಮೆರವಣಿಗೆಯ ಮೆರಗು ಹೆಚ್ಚಿಸಿತು. ಸಿದ್ದೇಶ್ವರ ದೇವಾಲಯದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ