ರೋಣ: ಸಾಮೂಹಿಕ ವಿವಾಹಗಳು ಬಡವರ ಕಣ್ಣೀರು ಒರೆಸಲು ಸಹಾಯಕವಾಗಿದ್ದು, ದುಂದುವೆಚ್ಚಕ್ಕೆ ಕಡಿವಾಣ ಹಾಕುತ್ತವೆ ಎಂದು ಬಳಗಾನೂರಿನ ಶಿವಶಾಂತವೀರ ಶರಣರು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಕಿಲ್ಲಾತೋರಗಲ್ಲ ಚನ್ನಮಲ್ಲಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಬೆಳವಣಕಿಯ ವಿದ್ಯಾರ್ಥಿನಿಯರು ವಾರ್ಷಿಕ ಪರೀಕ್ಷೆಗಳಲ್ಲಿ ಅಧಿಕ ಅಂಕ ಗಳಿಸುವ ಮೂಲಕ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. ಇಂದಿನದು ಕಂಪ್ಯೂಟರ್ ಹಾಗೂ ಪೈಪೋಟಿಯ ಯುಗವಾಗಿದ್ದು, ವಿದ್ಯಾರ್ಥಿಗಳು ಒಳ್ಳೆಯ ಅಂಕ ಸಂಪಾದಿಸಿ ಜೀವನ ರೂಪಿಸಿಕೊಳ್ಳಬೇಕೆಂದರು.
ಈ ವೇಳೆ 5 ಜೊತೆ ಸಾಮೂಹಿಕ ವಿವಾಹಗಳು ಜರುಗಿದವು. ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು.ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ವಿ.ಎನ್. ಮೇಟಿ, ಆನಂದಯ್ಯ ಭೂಪಳಾಪೂರಮಠ, ಬಸವರಾಜ ಕಟಗೇರಿ, ಮಲ್ಲಿಕಾರ್ಜುನ ಹಿರೇಮಠ ಮುಂತಾದವರು ಇದ್ದರು. ಶಿವಕುಮಾರ ಹಾಲಭಾವಿ ಸ್ವಾಗತಿಸಿದರು. ಮಲ್ಲಣ್ಣ ದಾದ್ಮಿ ವಂದಿಸಿದರು. ಸಂಕಪ್ಪ ಕುರಹಟ್ಟಿ ವಂದಿಸಿದರು. 421 ಬೆಳೆವಿಮೆ ಪ್ರಸ್ತಾವನೆ ತಿರಸ್ಕೃತ
ನರಗುಂದ: ಮುಂಗಾರು ಮತ್ತು ಹಿಂಗಾರು ಹಂಗಾಮಿನ 2024- 25ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಬೆಳೆ ಸಮೀಕ್ಷೆಯೊಂದಿಗೆ ಹೊಂದಾಣಿಕೆ ಆಗದೆ ಇರುವ ತಾಲೂಕಿನ ಮುಂಗಾರು ಹಂಗಾಮಿನ 233, ಹಿಂಗಾರು ಹಂಗಾಮಿನ 188 ಸೇರಿ ಒಟ್ಟು 421 ಬೆಳೆವಿಮೆ ಪ್ರಸ್ತಾವನೆಗಳು ವಿಮಾ ಸಂಸ್ಥೆಯಿಂದ ತಿರಸ್ಕೃತಗೊಂಡಿವೆ.ಗ್ರಾಮವಾರು ತಿರಸ್ಕೃತಗೊಂಡಿರುವ ಪ್ರಸ್ತಾವನೆಗಳ ಮಾಹಿತಿಯನ್ನು ನರಗುಂದ ಹಾಗೂ ತಾಲೂಕಿನ ಕೊಣ್ಣೂರಿನ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿಗಳ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ರೈತರು ಆಕ್ಷೇಪಣೆಗಳಿದ್ದರೆ ಮೇ 12ರೊಳಗಾಗಿ ಸಲ್ಲಿಸಬೇಕು ಎಂದು ತಾಲೂಕು ಸಹಾಯಕ ನಿರ್ದೇಶಕ ಎಂ.ಎಸ್. ಕುಲಕರ್ಣಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.