ಯಲಬುರ್ಗಾ: ಸಮಾಜದಲ್ಲಿ ಎಲ್ಲರೂ ಶಾಂತಿ-ಸೌಹಾರ್ದತೆಯಿಂದ ಬಾಳಬೇಕು. ನವ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹೊಸ ಬದುಕು ಕಟ್ಟಿಕೊಳ್ಳಬೇಕು ಎಂದು ಸ್ಥಳೀಯ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಸಂಸ್ಥಾನ ಹಿರೇಮಠದ ಪೀಠಾಧಿಪತಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಇಂತಹ ಸಾಮೂಹಿಕ ವಿವಾಹಗಳಿಂದ ಮಧ್ಯಮ ಹಾಗೂ ಬಡ ಹಿಂದುಳಿದ ವರ್ಗದ ಜನತೆಗೆ ಹೆಚ್ಚು ಅನುಕೂಲಕರವಾಗಿದೆ. ನಮ್ಮ ನಾಡು ಐತಿಹಾಸಿಕ ಕೊಡುಗೆಗಳನ್ನು ನೀಡಿದ್ದು, ಪ್ರತಿಯೊಬ್ಬರೂ ನಮ್ಮ ಸಂಸ್ಕೃತಿ ಉಳಿಸಿ, ಬೆಳೆಸುವಲ್ಲಿ ಮುಂದಾಗಬೇಕಿದೆ ಎಂದರು.
೧೩ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಗೇಡ್-೨ ತಹಸೀಲ್ದಾರ್ ನಾಗಪ್ಪ ಸಜ್ಜನ್, ಜಾತ್ರಾ ಸಮಿತಿ ಆಧ್ಯಕ್ಷ ಅಮರಪ್ಪ ಕಲಬುರ್ಗಿ, ಅಂದಾನಗೌಡ ಉಳ್ಳಾಗಡ್ಡಿ, ಸುರೇಶಗೌಡ ಶಿವನಗೌಡ್ರ, ಬಸವರಾಜ ಅಧಿಕಾರಿ, ಅಡಿವೆಯ್ಯ ಕಳ್ಳಿಮಠ, ಷಣ್ಮಖಪ್ಪ ರಾಂಪುರ, ವೀರಣ್ಣ ಹುಬ್ಬಳ್ಳಿ, ದಾನನಗೌಡ ತೊಂಡಿಹಾಳ, ಕೆ.ಜಿ. ಪಲ್ಲೇದ, ಸಂಗಣ್ಣ ಟೆಂಗಿನಕಾಯಿ, ವೀರನಗೌಡ ಮೇಟಿ, ಸಿದ್ದರಾಮೇಶ ಬೇಲೇರಿ, ಶರಣಪ್ಪ ರಾಂಪುರ, ಮಂಜುನಾಥ ಅಧಿಕಾರಿ, ದೊಡ್ಡಬಸವ ಹಕಾರಿ, ವಿರೂಪಾಕ್ಷ ಗಂಧದ, ಮಹಾಂತೇಶ ಭಾಸ್ಕರ್, ಹನುಮಂತಗೌಡ ಪಾಟೀಲ ಇದ್ದರು.