ಬಡವರ್ಗಕ್ಕೆ ಸಾಮೂಹಿಕ ವಿವಾಹ ಆಸರೆ: ಕಳಕಪ್ಪ ಕಂಬಳಿ

KannadaprabhaNewsNetwork |  
Published : Jan 31, 2025, 12:46 AM IST
30ಕೆಕೆಆರ್1:   ಕುಕನೂರು ಪಟ್ಟಣದ ಶ್ರೀಅನ್ನದಾನೇಶ್ವರಮಠದಲ್ಲಿ ಜಗದ್ಗುರು ಅನ್ನದಾನೇಶ್ವರ ಧರ್ಮ ಸಂಸ್ಕೃತಿ ಪ್ರಸಾರ ಸಂಸ್ಥೆ ವತಿಯಿಂದ ಡಾ.ಮಹಾದೇವ ಸ್ವಾಮೀಜಿ ಅವರ ದ್ವೀತಿಯ ವರ್ಷದ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಉಚಿತ ಸಾಮೂಹಿಕ ವಿವಾಹಗಳು ಮತ್ತು ಧರ್ಮಸಭೆ ಕಾರ್ಯಕ್ರಮವನ್ನು ತಾ.ಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಉದ್ಘಾಟಿಸಿದರು.  | Kannada Prabha

ಸಾರಾಂಶ

ವಿಶೇಷಚೇತನರ ವಿವಾಹ ಕಾರ್ಯ ಅವರ ಬಾಳಿನಲ್ಲಿ ಭರವಸೆಯ ಆಸರೆ ನೀಡಿದೆ.

ಉಚಿತ ವಿಶೇಷಚೇತನರ ವಿವಾಹ, ಧರ್ಮಸಭೆ ಕಾರ್ಯಕ್ರಮದಲ್ಲಿ ತಾಪಂ ಉಪಾಧ್ಯಕ್ಷ

ಕನ್ನಡಪ್ರಭ ವಾರ್ತೆ ಕುಕನೂರು

ವಿಶೇಷಚೇತನರ ವಿವಾಹ ಕಾರ್ಯ ಅವರ ಬಾಳಿನಲ್ಲಿ ಭರವಸೆಯ ಆಸರೆ ನೀಡಿದೆ ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.

ಪಟ್ಟಣದ ಅನ್ನದಾನೇಶ್ವರಮಠದಲ್ಲಿ ಅನ್ನದಾನೇಶ್ವರ ಧರ್ಮ ಸಂಸ್ಕೃತಿ ಪ್ರಸಾರ ಸಂಸ್ಥೆ ವತಿಯಿಂದ ಜರುಗಿದ ಡಾ. ಮಹಾದೇವ ಸ್ವಾಮೀಜಿ ಅವರ ದ್ವೀತಿಯ ವರ್ಷದ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಉಚಿತ ವಿಶೇಷಚೇತನರ ಹಾಗು ಅಂತರ್‌ಜಾತಿ ಸಾಮೂಹಿಕ ವಿವಾಹಗಳು ಮತ್ತು ಧರ್ಮಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶೇಷಚೇತನರನ್ನು ಯಾರೂ ಕಡೆಗಣಿಸಬಾರದು. ಅವರು ನಿಜಕ್ಕೂ ದೇವರ ಮಕ್ಕಳು. ನಾವು ದೇವರನ್ನು ಅವರ ಮಂದಹಾಸದಲ್ಲಿ ಕಾಣಬಹುದು ಎಂದರು.

ಬಡವರ್ಗಕ್ಕೆ ಸಾಮೂಹಿಕ ವಿವಾಹ ಆಸರೆಯಾಗಿವೆ. ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಸಹ ಬೀಳುತ್ತದೆ. ಸ್ಥಳೀಯ ಶ್ರೀಮಠಕ್ಕೆ ಮಹಾದೇವ ಸ್ವಾಮೀಜಿ ಅವರು ಬಂದ ಮೇಲೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಸದಾ ಕ್ರೀಯಾಶೀಲರಾಗಿರುವ ಅವರು ಬಡವರಿಗಾಗಿ, ದುರ್ಬಲರಿಗಾಗಿ ಜೊತೆಗೆ ಕಲಾವಿದರನ್ನು ಬೆಳೆಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಮಾಡಿದ್ದಾರೆ. ಹೊಸದಾಗಿ ಉಚಿತ ಅಂಗವೀಕಲರ ವಿವಾಹ ಹಾಗೂ ಅಂತರ್‌ಜಾತಿಗಳ ವಿವಾಹ ಹಮ್ಮಿಕೊಂಡಿದ್ದಾರೆ. ಇಂತಹ ಸ್ವಾಮೀಜಿಗಳಿಂದ ಮಠಗಳು ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತವೆ ಎಂದರು.

ಶ್ರೀಮಠದ ಡಾ. ಮಹಾದೇವ ಸ್ವಾಮೀಜಿ ಮಾತನಾಡಿ, ಇಂತಹ ದೊಡ್ಡಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾದರೆ ಸುತ್ತಮುತ್ತಲಿನ ೬೨ಕ್ಕೂ ಹೆಚ್ಚು ಗ್ರಾಮಸ್ಥರ ಸಹಾಯ ಸಹಕಾರ ನೀಡಿದ್ದಾರೆ. ಜನರಿಗೆ ಒಳ್ಳೆಯದನ್ನು ಮಾಡುವ ಮನಸ್ಸು ಇರಬೇಕು ಎಂದರು.

ಯಲಬುರ್ಗಾದ ಶ್ರೀಧರ ಮುರುಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ, ಇಟಗಿಯ ಶಿವಶರಣ ಶ್ರೀಗದಿಗೆಪ್ಪಜ್ಜನವರ್ ಸಾನಿಧ್ಯ ವಹಿಸಿದ್ದರು. ಉದ್ಯಮಿ ಅಂದಪ್ಪ ಜವಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ವೀರಣ್ಣ ಅಣ್ಣಿಗೇರಿ, ಜಂಬಣ್ಣ ಅಂಗಡಿ, ಎಂ.ಬಿ. ಅಳವಂಡಿ, ಪಪಂ ಉಪಾಧ್ಯಕ್ಷ ಪ್ರಶಾಂತ ಆರುಬೆರಳ್ಳಿನ್, ಈರಣ್ಣ ಯಲಬುರ್ಗಿ, ಈರಪ್ಪ ಕರೆಕುರಿ, ರಶೀದಸಾಬ್ ಹಣಜಗಿರಿ, ಶಿವಕುಮಾರ ನಾಗಲಾಪೂರಮಠ, ವೀರಯ್ಯ ತೊಂಟದಾರ್ಯಮಠ, ಹನುಮಯ್ಯ ಹಂಪನಾಳ, ದೇವಪ್ಪ ಸೋಭಾನದ್, ಅಬ್ದುಲ್‌ಸಾಬ ತಳಕಲ್, ನಿಂಗಪ್ಪ ಗೊರ್ಲೆಕೊಪ್ಪ, ರಾಜೇಂದ್ರಗೌಡ ಪೋ.ಪಾಟೀಲ್, ಭರಮಪ್ಪ ತಳವಾರ, ರಾಮಣ್ಣ ಹೊಸಮನಿ, ಗದಿಗೆಪ್ಪ ಪವಾಡ್‌ಶೆಟ್ಟರ್, ಲಕ್ಷ್ಮಣ ಕಾಳಿ ಇತರರಿದ್ದರು. 6 ಜೋಡಿ ವಿಶೇಷಚೇತನರ ವಿವಾಹ ಹಾಗೂ ಮೂರು ಜೋಡಿ ಅಂತರ್‌ಜಾತಿ ವಿವಾಹ ಜರುಗಿದವು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ