ರಂಜಾನ್‌ ಹಬ್ಬ ಹಿನ್ನೆಲೆ ಸಾಮೂಹಿಕ ಪ್ರಾರ್ಥನೆ

KannadaprabhaNewsNetwork |  
Published : Mar 22, 2026, 01:30 AM IST
21ಎಚ್ಎಸ್ಎನ್8 : ಹಾಸನ ನಗರದ ಹೊಸಲೈನ್‌ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಜಾಗ ಸಾಲದೆ ಈದ್ಗಾ ಮುಂದಿನ ಹೊಸಲೈನ್‌ ರಸ್ತೆಯಲ್ಲೇ ನಮಾಜ್‌ ಮಾಡಿದ ಮುಸಲ್ಮಾನ್‌ ಬಾಂಧವರು. | Kannada Prabha

ಸಾರಾಂಶ

ರಂಜಾನ್ ಮಾಸದ ಕೊನೆಯ ದಿನದ ಅಂಗವಾಗಿ ನಗರದ ಹೊಸಲೈನ್ ರಸ್ತೆ ಬಳಿ ಇರುವ ಹಳೆ ಈದ್ಗಾ, ಹೊಸ ಈದ್ಗಾ ಸೇರಿದಂತೆ ವಿವಿಧ ಮಸೀದಿಗಳು ಹಾಗೂ ಈದ್ಗಾ ಮೈದಾನಗಳಲ್ಲಿ ಶನಿವಾರ ಮುಸ್ಲಿಂ ಸಮುದಾಯದವರು ಭಕ್ತಿಭಾವದಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಹಬ್ಬವನ್ನು ಆಚರಿಸಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಂಜಾನ್ ಮಾಸದಲ್ಲಿ ಮುಸ್ಲಿಂ ಸಮುದಾಯದವರು ಕಟ್ಟುನಿಟ್ಟಾಗಿ ಉಪವಾಸ ಆಚರಿಸುವುದು ವಿಶೇಷ. ಪುಟ್ಟ ಮಕ್ಕಳಿಂದ ಹಿಡಿದು ಮಹಿಳೆಯರು, ವಯೋವೃದ್ಧರು ಎಲ್ಲರೂ ಬೆಳಿಗ್ಗೆ ೫ ಗಂಟೆಯಿಂದ ಸಂಜೆ ೭ ಗಂಟೆಯವರೆಗೆ ಉಪವಾಸವಿದ್ದು, ದೇವರ ಆರಾಧನೆ, ಪ್ರಾರ್ಥನೆ ಹಾಗೂ ಧಾರ್ಮಿಕ ಚಿಂತನೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.

ಕನ್ನಡಪ್ರಭ ವಾರ್ತೆ ಹಾಸನ

ರಂಜಾನ್ ಪವಿತ್ರ ಮಾಸ ಮತ್ತು ಯುಗಾದಿ ಹಬ್ಬ ಒಂದೇ ಸಂದರ್ಭದಲ್ಲಿ ಬಂದಿರುವುದು ಸಮಾಜದಲ್ಲಿ ಸೌಹಾರ್ದ, ಸಹಿಷ್ಣುತೆ ಮತ್ತು ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ವಿಶೇಷ ಸಂದರ್ಭವಾಗಿದೆ ಎಂದು ಹಳೆ ಈದ್ಗಾ ಸಮಿತಿ ಅಧ್ಯಕ್ಷ ಸಮೀರ್‌ ಖಾನ್ ತಿಳಿಸಿದ್ದಾರೆ. ರಂಜಾನ್ ಮಾಸದ ಕೊನೆಯ ದಿನದ ಅಂಗವಾಗಿ ನಗರದ ಹೊಸಲೈನ್ ರಸ್ತೆ ಬಳಿ ಇರುವ ಹಳೆ ಈದ್ಗಾ, ಹೊಸ ಈದ್ಗಾ ಸೇರಿದಂತೆ ವಿವಿಧ ಮಸೀದಿಗಳು ಹಾಗೂ ಈದ್ಗಾ ಮೈದಾನಗಳಲ್ಲಿ ಶನಿವಾರ ಮುಸ್ಲಿಂ ಸಮುದಾಯದವರು ಭಕ್ತಿಭಾವದಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಹಬ್ಬವನ್ನು ಆಚರಿಸಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಂಜಾನ್ ಮಾಸದಲ್ಲಿ ಮುಸ್ಲಿಂ ಸಮುದಾಯದವರು ಕಟ್ಟುನಿಟ್ಟಾಗಿ ಉಪವಾಸ ಆಚರಿಸುವುದು ವಿಶೇಷ. ಪುಟ್ಟ ಮಕ್ಕಳಿಂದ ಹಿಡಿದು ಮಹಿಳೆಯರು, ವಯೋವೃದ್ಧರು ಎಲ್ಲರೂ ಬೆಳಿಗ್ಗೆ ೫ ಗಂಟೆಯಿಂದ ಸಂಜೆ ೭ ಗಂಟೆಯವರೆಗೆ ಉಪವಾಸವಿದ್ದು, ದೇವರ ಆರಾಧನೆ, ಪ್ರಾರ್ಥನೆ ಹಾಗೂ ಧಾರ್ಮಿಕ ಚಿಂತನೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಉಪವಾಸವು ಕೇವಲ ದೇಹದ ನಿಯಂತ್ರಣವಷ್ಟೇ ಅಲ್ಲ, ಮನಸ್ಸಿನ ಶುದ್ಧೀಕರಣಕ್ಕೂ ಕಾರಣವಾಗುತ್ತದೆ ಎಂದು ಸಮೀರ್ ಖಾನ್ ಅಭಿಪ್ರಾಯಪಟ್ಟರು. ಈ ಪವಿತ್ರ ತಿಂಗಳಲ್ಲಿ ಸಮಾಜಮುಖಿ ಚಟುವಟಿಕೆಗಳು ಹೆಚ್ಚಾಗುತ್ತವೆ. ಬಡವರು, ಅನಾಥರು ಹಾಗೂ ಅಗತ್ಯವಿರುವವರನ್ನು ಗುರುತಿಸಿ ಅವರಿಗೆ ಆಹಾರ, ಹಣ ಹಾಗೂ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಮಾನವೀಯತೆ ತೋರಲಾಗುತ್ತದೆ. ಜಕಾತ್ ಮತ್ತು ದಾನಧರ್ಮಗಳ ಮೂಲಕ ಸಮಾಜದಲ್ಲಿ ಸಮಾನತೆ ಹಾಗೂ ಸಹಾನುಭೂತಿ ಬೆಳೆಸುವ ಪ್ರಯತ್ನ ನಡೆಯುತ್ತದೆ ಎಂದು ಅವರು ಹೇಳಿದರು.ಪ್ರವಾದಿ ಮೊಹಮ್ಮದ್ ಉಪದೇಶಿಸಿದಂತೆ, ಉಪವಾಸ ಎಂದರೆ ಕೇವಲ ಹಸಿವು, ದಾಹವನ್ನು ಸಹಿಸುವುದಲ್ಲ, ನಮ್ಮ ಜೀವನದಲ್ಲಿ ಇರುವ ಕೆಟ್ಟ ಗುಣಗಳು, ದುರ್ವ್ಯಸನಗಳು, ದ್ವೇಷ, ಅಸೂಯೆಗಳನ್ನು ತೊರೆದು ಒಳ್ಳೆಯ ಜೀವನ ನಡೆಸುವ ಸಂಕಲ್ಪ ಮಾಡುವುದು ಮುಖ್ಯ. ಮಾನವೀಯ ಮೌಲ್ಯಗಳನ್ನು ಪಾಲಿಸುವುದು, ಸತ್ಯ, ಸಹನೆ ಮತ್ತು ಪ್ರೀತಿ ಎಂಬ ಗುಣಗಳನ್ನು ಬೆಳೆಸುವುದು ರಂಜಾನ್ ಮಾಸದ ಪ್ರಮುಖ ಸಂದೇಶವಾಗಿದೆ ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಯುದ್ಧಗಳು, ಹಿಂಸಾಚಾರ ಮತ್ತು ಮಾನವ ವಿರೋಧಿ ಕೃತ್ಯಗಳು ಅಂತ್ಯವಾಗಲಿ ಎಂದು ದೇಶ, ವಿದೇಶಗಳಲ್ಲೂ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ವಿಶ್ವದಲ್ಲಿ ಶಾಂತಿ ನೆಲೆಸಲಿ, ಎಲ್ಲರೂ ನೆಮ್ಮದಿಯಿಂದ ಬದುಕುವ ಪರಿಸರ ನಿರ್ಮಾಣವಾಗಲಿ ಎಂಬ ಆಶಯದೊಂದಿಗೆ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಮಾಡಿದ್ದಾರೆ. ಯುಗಾದಿ ಹಬ್ಬದ ಸಂಭ್ರಮದ ನಡುವೆ ರಂಜಾನ್ ಆಚರಣೆ ನಡೆದಿರುವುದು ಧರ್ಮೀಯ ಸೌಹಾರ್ದತೆಗೆ ಉತ್ತಮ ಉದಾಹರಣೆಯಾಗಿದ್ದು, ಹಾಸನದಲ್ಲಿ ಎಲ್ಲ ಧರ್ಮದ ಜನರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಒಗ್ಗಟ್ಟಿನ ಸಂದೇಶವನ್ನು ಸಾರಿದ್ದಾರೆ. ಇಂತಹ ಸಂದರ್ಭಗಳು ಸಮಾಜದಲ್ಲಿ ಏಕತೆ, ಸಹಬಾಳ್ವೆ ಮತ್ತು ಪರಸ್ಪರ ಗೌರವವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಸಮೀರ್‌ ಖಾನ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕಕಲ್ಯಾಣಕ್ಕಾಗಿ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆ
ಜೀವನದ ಉನ್ನತಿಗೆ ಧರ್ಮ ಪಾಲನೆ ಮುಖ್ಯ: ರಂಭಾಪುರಿ ಶ್ರೀ