6 ರಂದು ವಿಶ್ವಕರ್ಮ ಸಮಾಜ ಸಂಘದಿಂದ ಸಾಮೂಹಿಕ ಉಪನಯನ, ವಿವಾಹ ಮಹೋತ್ಸವ

KannadaprabhaNewsNetwork |  
Published : May 04, 2026, 01:45 AM IST
ಕ್ಯಾಪ್ಷನ3ಕೆಡಿವಿಜಿ ದಾವಣಗೆರೆಯಲ್ಲಿ ವಿಶ್ವಕರ್ಮ ಸಮಾಜ ಸಂಘದಿಂದ ರಂದು ಸಾಮೂಹಿಕ ಉಪನಯನ, ವಿವಾಹ ಮಹೋತ್ಸವ ಹಮ್ಮಿಕೊಂಡಿರುವ ಕುರಿತು ಆರ್. ವಿಜಯಕುಮಾರ, ವಿ.ಎಂ.ಕೊಟ್ರೇಶಾಚಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. | Kannada Prabha

ಸಾರಾಂಶ

ವಿಶ್ವಕರ್ಮ ಸಮಾಜ ಸಂಘ, ದಾವಣಗೆರೆ ಮತ್ತು ಜಿಲ್ಲೆಯ ವಿಶ್ವಕರ್ಮ ಸಮಾಜದ ಎಲ್ಲ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 43ನೇ ವರ್ಷದ ಸಾಮೂಹಿಕ ಉಪನಯನ ಮತ್ತು ವಿವಾಹ ಮಹೋತ್ಸವವನ್ನು ಮೇ 6ರಂದು ಇಲ್ಲಿನ ಶ್ರೀ ಕಾಳಿಕಾ ದೇವಿ ರಸ್ತೆಯ ಶ್ರೀ ಕಾಳಿಕಾಂಬ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಆರ್. ವಿಜಯಕುಮಾರ ಹಾಗೂ ಪ್ರಧಾನ ಕಾರ್ಯದರ್ಶಿ ವಿ.ಎಂ. ಕೊಟ್ರೇಶಾಚಾರ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ ವಿಶ್ವಕರ್ಮ ಸಮಾಜ ಸಂಘ, ದಾವಣಗೆರೆ ಮತ್ತು ಜಿಲ್ಲೆಯ ವಿಶ್ವಕರ್ಮ ಸಮಾಜದ ಎಲ್ಲ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 43ನೇ ವರ್ಷದ ಸಾಮೂಹಿಕ ಉಪನಯನ ಮತ್ತು ವಿವಾಹ ಮಹೋತ್ಸವವನ್ನು ಮೇ 6ರಂದು ಇಲ್ಲಿನ ಶ್ರೀ ಕಾಳಿಕಾ ದೇವಿ ರಸ್ತೆಯ ಶ್ರೀ ಕಾಳಿಕಾಂಬ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಆರ್. ವಿಜಯಕುಮಾರ ಹಾಗೂ ಪ್ರಧಾನ ಕಾರ್ಯದರ್ಶಿ ವಿ.ಎಂ. ಕೊಟ್ರೇಶಾಚಾರ್ ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಬೆಳಗ್ಗೆ 6.30 ರಿಂದ 8.25 ರವರೆಗೆ ಯಜ್ಞೋಪವೀತ ಧಾರಣೆ ಮತ್ತು ಬ್ರಹೋಪದೇಶದ ನಂತರ 8.30 ರಿಂದ 9.30 ರವರೆಗೆ ಸಾಮೂಹಿಕ ವಿವಾಹಗಳು, ಮಾಂಗಲ್ಯಧಾರಣೆ, ಲಾಜಹೋಮ ಹಾಗೂ ಸಪ್ತಪದಿ ನಾಗವಲ್ಲಿ ಮುಂತಾದ ವಿವಾಹ ವಿಧಿವಿಧಾನಗಳು ಜರುಗಲಿವೆ ಎಂದು ತಿಳಿಸಿದರು.

ಬೆಳಗ್ಗೆ 11 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮವು ಕೊಪ್ಪಳ ಜಿಲ್ಲೆಯ ಶ್ರೀಮದ್ ಆನೇಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಶ್ರೀಮಠ ಗಿಣಿಗೇರಾದ ಅಭಿನವ ಶ್ರೀಕಂಠಸ್ವಾಮಿಗಳು, ಅವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯಲಿದೆ. ಅಧ್ಯಕ್ಷತೆಯನ್ನು ವಿಶ್ವಕರ್ಮ ಸಮಾಜ ಸಂಘದ ಅಧ್ಯಕ್ಷ ಆರ್.ವಿಜಯಕುಮಾರ ವಹಿಸುವರು ಎಂದು ತಿಳಿಸಿದರು.

ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ಮಾಲೀಕ ಬಿ.ಸಿ.ಉಮಾಪತಿ, ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಸಾಪುರದ ಬಿ.ನಾಗೇಂದ್ರಜಾರ್, ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ಕಮಿಟಿ ಶ್ರೀಕ್ಷೇತ್ರ ವರವಿಯ ಅಧ್ಯಕ್ಷ ಮೋಹನ್ ಎಸ್.ನರಗುಂದ, ಶೈಕ್ಷಣಿಕ ಬಹುಮಾಧ್ಯಮ ಸಂಶೋಧನ ಕೇಂದ್ರದ ಪ್ರಾಧ್ಯಾಪಕ ಡಾ. ಬಿ.ಶ್ರೀಕಂಠಾಚಾರ್, ಶ್ರೀ ಮಹಿಷಮರ್ದಿನಿ ಶ್ರೀ ರೇಣುಕ ಯಲ್ಲಮ್ಮದೇವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸರ್ವೇಶಾಚಾರ್, ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ನಿರ್ದೇಶಕ ಎಚ್.ಪಿ. ರಾಜೇಂದ್ರಚಾರ್, ಸಿದ್ದಾಪುರದ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿಯ ತರಬೇತಿದಾರ ಪ್ರಶಾಂತ್ ಜಿ. ಆಚಾರ್ಯ, ಮುಖ್ಯಶಿಕ್ಷಕ ಬಿ.ಮಂಜುನಾಥಾಚಾರ್ ಇತರರು ಭಾಗವಹಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ವಿಶ್ವಕರ್ಮ ಸಮಾಜದ ಕೆ.ಎ.ಮನೋಹರ, ಸಿ.ಪಿ.ಪೂರ್ವಾಚಾರ್, ಎಂ.ಡಿ. ಮೌನೇಶ್ವರಚಾರ್, ಬಿ.ವಿ.ರಾಜಶೇಖರ, ಎ.ಆರ್. ಮುರುಳಿಧರಾಚಾರ್, ಬಿ.ಟಿ.ಸತೀಶ್ ಕುಮಾರ, ಕೆ.ಎಂ.ಬಸವರಾಜ, ವರದಾಚಾರ್ ಪುಟಗನಾಳ್, ಜಿ.ಎನ್.ಗಣೇಶ್, ಎಂ.ಪಿ.ರಮೇಶಾಚಾರ್ ಮುದಹದಡಿ, ಬಿ.ಸಿ.ರಮೇಶಾಚಾರ್ ದೊಡ್ಡಬಾತಿ, ರಾಘವೇಂದ್ರಚಾರ್ ಶಿಲ್ಪಿ, ಈ. ಲಿಂಗರಾಜ್ ಇದ್ದರು.

- - -

-3ಕೆಡಿವಿಜಿ:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬುದ್ಧನ ಪ್ರೀತಿ, ಬಸವಣ್ಣನ ಸಮಾನತೆ, ಅಂಬೇಡ್ಕರ್ ಸಂವಿಧಾನದಿಂದ ಸಮ ಸಮಾಜ ನಿರ್ಮಾಣ
ಬೆಳೆದು ನಿಂತಿರುವ ಬೆಳೆಗಳ ರಕ್ಷಣೆಗೆ ಆಗ್ರಹಿಸಿ ರೈತಸಂಘದಿಂದ ಪ್ರತಿಭಟನೆ