ಕಿಕ್ಕೇರಿ ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ಸಾಮೂಹಿಕ ಯೋಗ ಕಲರವ

KannadaprabhaNewsNetwork |  
Published : Jun 22, 2025, 11:47 PM IST
22ಕೆಎಂಎನ್ ಡಿ25 | Kannada Prabha

ಸಾರಾಂಶ

ನಾಡಿಶೋಧನ, ಶೀಥಲಿ, ಭ್ರಮರಿ, ಪ್ರಾಣಾಯಾಮ, ವಕ್ರಾಸನ, ತಾಡಾಸನದಂತಹ ವಿವಿಧ ಆಸನದಲ್ಲಿ ತಲ್ಲೀನರಾಗಿದ್ದರು. ಸಾಮೂಹಿಕ ಕಂಠದಲ್ಲಿ ಏಕಕಾಲದಲ್ಲಿ ಮೂಡಿದ ‘ಓಂ’ಕಾರ ನಾದ ಮಕ್ಕಳ ಏಕಾಗ್ರತೆಗೆ ಸಾಕ್ಷಿಯಾಯಿತು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ನಡೆದ ಸಾಮೂಹಿಕ ಯೋಗದಲ್ಲಿ ಶಿಕ್ಷಕ ಸಮೂಹ ಮಕ್ಕಳಿಗೆ ವಿವಿಧ ಆಸನಗಳನ್ನು ತಿಳಿಸಿ ಮಕ್ಕಳನ್ನು ಸಮ್ಮೋಹನಗೊಳಿಸಲು ಯಶಸ್ವಿಯಾದರು.

ಶಾಲಾ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಯೋಗದಿನ ಅಂಗವಾಗಿ ಯೋಗಮುನಿ ಪತಾಂಜಲಿ ಮುನಿಗೆ ನಮಿಸಿದರು. ನಂತರ ಯೋಗನಿರತ ಮಕ್ಕಳು ವಜ್ರಾಸನದಲ್ಲಿ ಕುಳಿತು ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು.

ನಾಡಿಶೋಧನ, ಶೀಥಲಿ, ಭ್ರಮರಿ, ಪ್ರಾಣಾಯಾಮ, ವಕ್ರಾಸನ, ತಾಡಾಸನದಂತಹ ವಿವಿಧ ಆಸನದಲ್ಲಿ ತಲ್ಲೀನರಾಗಿದ್ದರು. ಸಾಮೂಹಿಕ ಕಂಠದಲ್ಲಿ ಏಕಕಾಲದಲ್ಲಿ ಮೂಡಿದ ‘ಓಂ’ಕಾರ ನಾದ ಮಕ್ಕಳ ಏಕಾಗ್ರತೆಗೆ ಸಾಕ್ಷಿಯಾಯಿತು.

ಕೆಪಿಎಸ್ ಶಾಲೆ ಪದವಿ ಪೂರ್ವಕಾಲೇಜು, ಪ್ರೌಢಶಾಲೆ, ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆ ವಿಭಾಗದ ಉಪನ್ಯಾಸಕ ವೃಂದ, ಮುಖ್ಯಶಿಕ್ಷಕರು, ಶಿಕ್ಷಕರು ಭಾಗವಹಿಸಿದ್ದರು. ಹೋಬಳಿಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಸಂಭ್ರಮದಿಂದ ಅಂತಾರಾಷ್ಟ್ರೀಯಯೋಗ ದಿನಾಚರಣೆ ನಡೆಯಿತು.

ಸ್ನೇಹ ವಿದ್ಯಾಸಂಸ್ಥೆಯಲ್ಲಿ ಯೋಗಭ್ಯಾಸ

ಕೆ.ಎಂ.ದೊಡ್ಡಿ: ಸ್ನೇಹ ವಿದ್ಯಾಸಂಸ್ಥೆಯಲ್ಲಿ ವಿಶ್ವಯೋಗ ದಿನಾಚರಣೆ ಅಂಗವಾಗಿ ಯೋಗಭ್ಯಾಸ ಮಾಡಲಾಯಿತು.

ಸಂಸ್ಥೆ ಸಂಸ್ಥಾಪಕ ದಾಸೇಗೌಡ ಮಾತನಾಡಿ, ಯೋಗದಿಂದ ಉತ್ತಮ ಆರೋಗ್ಯ ಲಭಿಸುವ ಜತೆಗೆ ಸದೃಢ ದೇಹ ಹೊಂದಲು ಸಾಧ್ಯ ಎಂದರು. ಈ ವೇಳೆ ಸಂಸ್ಥೆ ಅಧ್ಯಕ್ಷೆ ಶಶಿಕಲಾ ದಾಸೇಗೌಡ, ಮುಖ್ಯ ಶಿಕ್ಷಕ ರವಿಶಂಕರ್, ಸಹ ಶಿಕ್ಷಕರಾದ ಸ್ವರೂಪ, ಶ್ವೇತ, ಮಮತಾ, ರೂಪಿಣಿ, ಸವಿತಾ, ಮಾಲಾ, ಉಷಾರಾಣಿ, ಸಹನ, ತೇಜಸ್ವಿನಿ, ರಶ್ಮಿ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ