ನದಿ ಸಂರಕ್ಷಣೆ ಪಟ್ಟಣ ಸ್ವಚ್ಛತೆ ಬಗ್ಗೆ ಬೃಹತ್ ಜಾಥಾ

KannadaprabhaNewsNetwork |  
Published : Mar 02, 2026, 03:15 AM IST
ಪಟ್ಟಣದಲ್ಲಿ ಜಾಥಾ ಸಂದರ್ಭ | Kannada Prabha

ಸಾರಾಂಶ

ರೋಟರಿ ಕುಶಾಲನಗರ ಸುವರ್ಣ ಮಹೋತ್ಸವ ಅಂಗವಾಗಿ ಪಟ್ಟಣದ ನಾಗರಿಕರಿಗೆ ನದಿ ಸಂರಕ್ಷಣೆ ಹಾಗೂ ಪಟ್ಟಣ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಬೃಹತ್ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ ರೋಟರಿ ಕುಶಾಲನಗರ ಸುವರ್ಣ ಮಹೋತ್ಸವ ಅಂಗವಾಗಿ ಪಟ್ಟಣದ ನಾಗರಿಕರಿಗೆ ನದಿ ಸಂರಕ್ಷಣೆ ಹಾಗೂ ಪಟ್ಟಣ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಬೃಹತ್ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ರೋಟರಿ ಅಧ್ಯಕ್ಷರಾದ ಮನು ಪೆಮ್ಮಯ್ಯ ನೇತೃತ್ವದಲ್ಲಿ ರೋಟರಿ ಸಭಾಂಗಣದಿಂದ ಹೊರಟ ಜಾಥಾ ಕುಶಾಲನಗರ ಪಟ್ಟಣ ಮೂಲಕ ಮುಖ್ಯ ರಸ್ತೆಯಲ್ಲಿ ತೆರಳಿ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಲಿರುವ ಎಸ್ಎಲ್ಎನ್ ಗ್ರಾಂಡ್ ತನಕ ಸಾಗಿತು.ಚೆಂಡೆ ಮೇಳದೊಂದಿಗೆ ರೋಟರಿ ಸದಸ್ಯರು ಕುಟುಂಬ ಸದಸ್ಯರು ಜಾಥಾದಲ್ಲಿ ಪಾಲ್ಗೊಂಡು ನದಿ ಸ್ವಚ್ಛತೆ ಪ್ರಕೃತಿ ಸಂರಕ್ಷಣೆ ಬಗ್ಗೆ ಫಲಕಗಳನ್ನು ಹೊತ್ತು ಸಾಗಿದರು. ಪಟ್ಟಣದ ಗಣಪತಿ ದೇವಾಲಯ ಮುಂಭಾಗ ಸ್ವಲ್ಪ ಕಾಲ ಮಾನವ ಸರಪಳಿ ರಚಿಸಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು.ರೋಟರಿ ಕಾರ್ಯದರ್ಶಿ ಎಚ್ ಪಿ ಮಂಜುನಾಥ, ಖಜಾಂಚಿ ಕೆ ಎಂ ಜಾಕಬ್, ಪ್ರಮುಖರಾದ ಎಸ್ ಕೆ ಸತೀಶ್ ಡಾ ಹರಿ ಎ ಶೆಟ್ಟಿ ಮಹೇಶ್ ಕುಮಾರ್ ನಾಲ್ವಡೆ, ಕೃಜ್ವಲ್ ಕೋಟ್ಸ್, ರಾಜಶೇಖರ್, ಉಲ್ಲಾಸ್ ಕೃಷ್ಣ ಮಹಿಳಾ ಸದಸ್ಯರು ಸೇರಿದಂತೆ ರೋಟರಿ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರ ಸೈನ್ಯ ಕಟ್ಟಿ ನಾಡರಕ್ಷಿಸಿದ್ದ ಮಲ್ಲಮ್ಮ
ಜನಸ್ನೇಹಿ‌ ಪೊಲೀಸ್ ಅಧಿಕಾರಿಗೆ ಸಹಸ್ರಾರು ಅಭಿಮಾನಿಗಳ ಕಂಬನಿ