ಕನ್ನಡಪ್ರಭ ವಾರ್ತೆ ಮೈಸೂರು
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ನಾಲ್ಕನೇ ದಿನವಾದ ಶುಕ್ರವಾರವೂ ವರ್ಣಮಯವಾಗಿತ್ತು.ಭೂಮಿಗೀತದಲ್ಲಿ ಶುಕ್ರವಾರ ಸಂಜೆ ಮಧ್ಯ ಪ್ರದೇಶದ ಉಜ್ಜೈನಿಯ ಆಂಕೂರ್ರಂಗಮಂಚ್ಸಮಿತಿ ಕಲಾವಿದರು ಮುರ್ದಾ ಫರ್ಹಿಂದಿ ನಾಟಕವನ್ನು ಇವಾನ್ಖಾನ್ನಿರ್ದೇಶನದಲ್ಲಿ ಪ್ರಸ್ತುತಪಡಿಸಿದರು. ಕಿರುರಂಗ ಮಂದಿರದಲ್ಲಿ ಅತುಲ್ಫುಗಾರ್ಡ್ರಚನೆಯ ಅನಾಮಿಕನ ಸಾವು ಕನ್ನಡ ನಾಟಕವನ್ನು ವಿಜಯಪುರದ ಸ್ಪಿನ್ನಿಂಗ್ಟ್ರೀ ಥಿಯೋಟರ್ಕಲಾವಿದರು, ಶಕೀಲ್ಅಹ್ಮದ್ನಿರ್ದೇಶನದಲ್ಲಿ ಪ್ರದರ್ಶಿಸಿದರು.
ವನರಂಗದಲ್ಲಿ ಅರುಣ್ಲಾಲ್ರಚನೆ ಮತ್ತು ನಿರ್ದೇಶನದಲ್ಲಿ ಮತ್ತಾಯ ನಾಟಕವನ್ನು ಮಂಗಲೂರಿನ ಅಸ್ತಿತ್ವ ಕಲಾವಿದರು ಪ್ರಸ್ತುತಪಡಿಸಿದರು. ಕಲಾಮಂದಿರದಲ್ಲಿ ಕಲಾಭಿ ಥಿಯೇಟರ್ತಂಡದವರು ಶ್ರವಣ್ಹೆಗ್ಗೋಡು ನಿರ್ದೇಶನದ ಎ ಫ್ರೆಂಡ್ಬಿಯಾಂಡ್ದ ಫೆನ್ಸ್ಕನ್ನಡ ನಾಟಕವನ್ನು ಪ್ರದರ್ಶಿಸಿದರು.ಇದಕ್ಕೂ ಮುನ್ನ ಕಿಂದರಿಜೋಗಿ ಆವರಣದಲ್ಲಿ ಮಂಗಳೂರಿನ ದಪ್ಕಲಾವಿದರು ಕಂಜರಿ ಬಾರಿಸುತ್ತ ನರ್ತಿಸಿದರು. ಮಂಡ್ಯದ ಕ್ರೀತನಾ ಮತ್ತು ತಂಡದವರು ಪೂಜಾ ಕುಣಿತ ಪ್ರದರ್ಶನ ಮೈನವಿರೇಳಿಸಿತು.
ಬಹುರೂಪಿಯಲ್ಲಿಂದು/ 18.01.2025ಬಹುರೂಪಿ: ರಾಷ್ಟ್ರೀಯ ನಾಟಕೋತ್ಸವ, ಸುಗ್ಗಿ ಕುಣಿತ ಮತ್ತು ಹುತ್ತರಿ ಕೋಲು- ಅಭಿನಯ ಕಲಾ ಮಿಲನ ಚಾರಿಟಬಲ್ ಟ್ರಸ್ಟ್, ಭಾಗಮಂಡಲ, ಕಿಂದರಿಜೋಗಿ ಆವರಣ, ಸಂಜೆ 5.30. ಬಹುರೂಪಿ ಮಕ್ಕಳ ಚಲನಚಿತ್ರೋತ್ಸವ- ದ ಬಾಯ್ ದ ಮೊಲ್, ದ ಫಾಕ್ಸ್, ಅಂಡ್ ದ ಹಾರ್ಸ್, ಪ್ಯಾಡಿಂಗ್ಟನ್ ಇನ್ ಪೆರು, ಕವಿ, ರ್ಯಾಗ್ ಡಾಲ್, ಸ್ಪರಿಟ್: ಸ್ಟಾಲಿಯನ್ ಆಫ್, ಸ್ಪಿರಿಟ್ : ಸ್ಟಾಲಿಯನ್ ಆಫ್ ದ ಸಿಮರಾನ್, ಬೆಳಗ್ಗೆ 10.30.
ಭೂಮಿಗೀತ: ದಶಾನನ ಸ್ವಪ್ನಸಿದ್ದಿ- ಕನ್ನಡ, ನಿರ್ದೇಶಕ- ಮಂಜು ಕೊಡಗು, ಸಂಜೆ 6.30.ಕಿರುರಂಗಮಂದಿರ: ತಮಾಷಾ - ಮಲಯಾಳಂ- ನಿರ್ದೇಶನ- ಡಾ. ನೀಲಂ ಮಾನ್ ಸಿಂಗ್ ಚೌಧರಿ, ಸಂಜೆ 7.
ವನರಂಗ: ತಲ್ಕಿ-ಟ್ರುಥ್ ಡ್ರೀಮ್ ವಯಾ ಬೆಂಗಳೂರ- ಕನ್ನಡ, ನಿರ್ದೇಶನ- ಶ್ರೀಜಿತ್ ಸುಂದರಂ, ಸಂಜೆ 7.ಕರ್ನಾಟಕ ಕಲಾಮಂದಿರ: ಕಾಬುಲಿವಾಲಾ ಕಾಲಿಂಗ್- ಇಂಗ್ಲಿಷ್, ಸಂಜೆ 7.30.
ರಾಷ್ಟ್ರೀಯ ವಿಚಾರ ಸಂಕಿರಣ: ರಾಷ್ಟ್ರೀಯ ವಿಚಾರ ಸಂಕಿರಣ, ಸಾಮಾಜಿಕ ನ್ಯಾ- ಚಳವಳಿಗಳು ಮತ್ತು ರಂಗಭೂಮಿ, ಉದ್ಘಾಟನಾ ಸಮಾರಂಭ, ಉದ್ಘಾಟನೆ- ಎ. ರೇವತಿ, ಮುಖ್ಯಅತಿಥಿ- ಬಾನು ಮುಷ್ತಾಕ್, ಅಧ್ಯಕ್ಷತೆ- ಡಾ. ನಾಗಲ್ಮಿ ಚೌಧರಿ, ಬೆಳಗ್ಗೆ 10, ಗೋಷ್ಠಿ- 1- ಸಂವಿಧಾನ ಮತ್ತು ಸಾಮಾಜಿಕ ನ್ಯಾಯ, ಅಧ್ಯಕ್ಷತೆ ದಿನೇಶ್ ಅಮೀನ್ ಮಟ್ಟು, ಗೋಷ್ಠಿ-2- ಲೈಂಗಿಕ ಅಲ್ಪಸಂಖ್ಯಾತರ ಅಸ್ಮಿತೆ, ಅಧ್ಯಕ್ಷತೆ- ಎನ್. ಮಂಗಳಾ, ಗೋಷ್ಠಿ- 3, ಬಹುಜನ ಸಂಸ್ಕೃತಿಯ ಬಹುತ್ವದ ನೆಲೆಗಳು, ಅಧ್ಯಕ್ಷತೆ- ಬಂಜಗೆರೆ ಜಯಪ್ರಕಾಶ್, ಗೋಷ್ಠಿ-4 - ಮಹಿಳಾ ಹೋರಾಟಗಳು, ಅಧ್ಯಕ್ಷತೆ- ಡಾ.ದು. ಸರಸ್ವತಿ, ಬಿ.ವಿ. ಕಾರಂತ ರಂಗಚಾವಡಿ, ಸಂಜೆ 4.