- ಪ್ರಗತಿಪರ ಬರಹಗಾರರ ಒಕ್ಕೂಟ ಕಾರ್ಯಕ್ರಮದಲ್ಲಿ ವಾಮದೇವಪ್ಪ
ಕನ್ನಡಪ್ರಭ ವಾರ್ತೆ ಹರಿಹರ
ಸರ್ವ ಪ್ರಕಾರಗಳ ಸಾಹಿತ್ಯ ರೂಪಗಳು ಕನ್ನಡದ ಸಾಹಿತ್ಯ ವೇದಿಕೆಗಳಲ್ಲಿ ನಿರಂತರ ಹರಿಯುತ್ತಿರಲಿ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.ನಗರದ ಬಿರ್ಲಾ ಕಲ್ಯಾಣ ಮಂಟಪದಲ್ಲಿ ಪ್ರಗತಿಪರ ಬರಹಗಾರರ ಒಕ್ಕೂಟ ಚಿಂತನ ಪ್ರತಿಷ್ಠಾನ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಒಕ್ಕೂಟದ ೩೦ನೇ ವಾರ್ಷಿಕೋತ್ಸವ ಮತ್ತ ಜಿಲ್ಲಾಮಟ್ಟದ ಕವಿಗೋಷ್ಠಿ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತ್ಯ ಕ್ಷೇತ್ರದಲ್ಲಿ ಉತ್ಪನನ, ಸಮಯಪ್ರಜ್ಞೆ, ಶಿಷ್ಟಚಾರ, ನಿರಂತರ ಗ್ರಹಿಕೆ ಸಂವಾದಗಳಿಗೆ ವಿಶೇಷ ಸ್ಥಾನವಿದೆ. ಅವುಗಳಲ್ಲಿ ಪರಿಣತರದಲ್ಲಿ ಪರಿಪೂರ್ಣ ಸಾಹಿತ್ಯ ಹೊರಹೊಮ್ಮಲು ಸಾಧ್ಯ ಎಂದರು.
ದಾವಣಗೆರೆ ಜಿಲ್ಲಾ ಕಲೇಸಂ ಅಧ್ಯಕ್ಷೆ ವೀಣಾ ಕೃಷ್ಣಮೂರ್ತಿ ಮಾತನಾಡಿ, ನಾಗಮ್ಮ ಕೇಶವಮೂರ್ತಿ, ಟಿ.ಗಿರಿಜಾ, ಲಲಿತಮ್ಮನವರು ಸ್ತ್ರೀಯರಿಗೆ ಶಕ್ತಿ ತುಂಬಿದ ಮೂರು ರತ್ನಗಳು. ಅವರು ನೀಡಿದ ಮಾರ್ಗದರ್ಶನ ಪಾಲಿಸುವುದು ನಮಗೆಲ್ಲಾ ಅಗತ್ಯ ಎಂದರು.
ಜಿಲ್ಲಾಮಟ್ಟದ ಕವಿಗೋಷ್ಠಿಯಲ್ಲಿ ಜಿ.ಕೆ.ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ೨೬ಕ್ಕೂ ಹೆಚ್ಚು ಕವಿಗಳು ಕವಿತೆ ವಾಚಿಸಿದರು. ಎ.ಬಿ.ಮಂಜಮ್ಮ, ಬಿ.ನಾಗರತ್ಮ, ಜಯರಾಮನ್, ಸೌಮ್ಯ, ಚಂದನ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ತುಂಗಾಭದ್ರಾ ನದಿಗೆ ಒಕ್ಕೂಟ ಸದಸ್ಯರು ಬಾಗಿನ ಅರ್ಪಿಸಿದರು.
-04HRR02, 03: