ಕನ್ನಡ ಭವನ ಸರ್ವರ ಹೃನ್ಮನಗಳನ್ನುಅರಳಿಸಲಿಃ ಶಾಸಕ ಜಿ.ಎಚ್.ಶ್ರೀನಿವಾಸ್

KannadaprabhaNewsNetwork |  
Published : Mar 05, 2026, 01:15 AM IST
ತರೀಕೆರೆಯಲ್ಲಿ ಕನ್ನಡ ಭವನ ನಿರ್ಮಾಣದ ಶಂಕುಸ್ಥಾಪನಾ ಸಮಾರಂಭ | Kannada Prabha

ಸಾರಾಂಶ

ತರೀಕೆರೆಪಟ್ಟಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ದಾನಿ ಶ್ಯಾಮಲ ಟಿ.ಬಿ.ಮಂಜುನಾಥ್ ದಾನವಾಗಿ ನೀಡಿರುವ ನಿವೇಶನದಲ್ಲಿ ನಿರ್ಮಾಣವಾಗಲಿರುವ ಕನ್ನಡ ಭವನ ಸರ್ವರ ಹೃನ್ಮನಗಳನ್ನುಅರಳಿಸಲಿ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

- ತರೀಕೆರೆಯಲ್ಲಿ ಕನ್ನಡ ಭವನ ನಿರ್ಮಾಣದ ಶಂಕುಸ್ಥಾಪನಾ ಸಮಾರಂಭ

ಕನ್ನಡಪ್ರಭ ವಾರ್ತೆ, ತರೀಕೆರೆ

ಪಟ್ಟಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ದಾನಿ ಶ್ಯಾಮಲ ಟಿ.ಬಿ.ಮಂಜುನಾಥ್ ದಾನವಾಗಿ ನೀಡಿರುವ ನಿವೇಶನದಲ್ಲಿ ನಿರ್ಮಾಣವಾಗಲಿರುವ ಕನ್ನಡ ಭವನ ಸರ್ವರ ಹೃನ್ಮನಗಳನ್ನುಅರಳಿಸಲಿ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ಬುಧವಾರ ತಾಲೂಕು ಕಸಾಪದಿಂದ ಪಟ್ಟಣದ ಎಸ್,ಎಂ.ಎನ್,ಲೇಔಟ್.ನಲ್ಲಿ ನಿರ್ಮಾಣವಾಗಲಿರುವ ಕನ್ನಡ ಭವನಕ್ಕೆ

ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಕನ್ನಡ ಭವನ ಉದಾರ ದಾನಿ ಮತ್ತು ಸರ್ವರ ಸಹಕಾರದಿಂದ ಪೂರ್ಣ ಗೊಳ್ಳಲಿ, ಶಾಸಕರ ನಿಧಿಯಿಂದ ಹಾಗೂ ಸರ್ಕಾರದ ವಿವಿಧ ಮಂತ್ರಾಲಯಗಳಿಂದ ನಿಧಿ ಸಂಗ್ರಹಕ್ಕೆ ಸಹಕರಿಸುವುದಾಗಿ ತಿಳಿಸಿದ ಅವರು ದಾನಿ ಶ್ಯಾಮಲ ಮಂಜುನಾಥ್ ಮತ್ತು ನವೀನ್ ಕುಮಾರ್ ಅವರನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.ಶ್ಯಾಮಲ ಮಂಜುನಾಥ್ ಮಾತನಾಡಿ ತಾವು ಕಸಾಪ ಹಿರಿಯ ಸದಸ್ಯೆ ಹಾಗೂ ದತ್ತಿ ದಾನಿಗಳಾಗಿ ಕನ್ನಡ ಪರ ವಿಷಯಗಳ

ಬಗ್ಗೆ ಅತೀವ ಆಸಕ್ತಿ ಹೊಂದಿದ್ದು, ನಮ್ಮ ಕುಟುಂಬ ಇಂತಹ ಅನೇಕ ನೆರವು ಸಮಾಜಕ್ಕೆ ನೀಡುತ್ತಾ ಬಂದಿದೆ, ಕನ್ನಡ ಭವನ ನಿರ್ಮಾಣಕ್ಕೆ ಸ್ಥಳ ನೀಡಿರುವುದು ಸಂತೋಷ ತಂದಿದೆ. ಭವನ ಶೀಘ್ರವಾಗಿ ತಲೆ ಎತ್ತಲಿ ಕನ್ನಡ ಪರ ಸಾಹಿತ್ಯ ಸಂಸ್ಕೃತಿ ಕಲೆ ಬಗ್ಗೆ ಕಾರ್ಯಕ್ರಮ ನಿರಂತರವಾಗಿ ನಡೆಯಲೆಂದು ಆಶಿಸಿದರು.ಟಿ.ಎಂ.ನವೀನ್ ಕುಮಾರ್ ಮಾತನಾಡಿ ಬಡಾವಣೆಗೆ ಕನ್ನಡ ಭವನ ನಿರ್ಮಾಣ ವಿಶೇಷ ಮೆರಗು ತರಲಿದೆ ಹಾಗೂ ಬಡಾವಣೆ ರಸ್ತೆಗಳಿಗೆ ಕನ್ನಡದ ಹಿರಿಯ ಸಾಧಕರ ಹೆಸರನ್ನು ನಾಮಕರಣ ಮಾಡಬೇಕೆಂದು ಅವರು ಶಾಸಕರು, ಪುರಸಭೆ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷೆ ಗೀತಾ ಟಿ.ವಿ.ಗಿರಿರಾಜ್ ಅವರಲ್ಲಿ ಮನವಿ ಮಾಡಿದರು.ಕನ್ನಡಶ್ರೀ ಬಿ.ಎಸ್.ಭಗವಾನ್ ಮಾತನಾಡಿ ಜಿಲ್ಲೆಯ ಎಲ್ಲಾ ತಾಲೂಕುಗಳು ಕನ್ನಡ ಭವನ ಹೊಂದಿದ್ದು, ಇಂದು ತರೀಕೆರೆ ಪಟ್ಟಣದಲ್ಲಿ ದಾನಿಗಳ ನೆರವಿನಿಂದ ಕನ್ನಡ ಭವನ ನಿರ್ಮಾಣಗೊಂಡು ಕನ್ನಡ ಪರ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿ ಕಾರ್ಯಾರಂಭ ಮಾಡುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ ಎಂದರು.ಪುರಸಭೆ ಅಧ್ಯಕ್ಷ ವಸಂತಕುಮಾರ್, ಉುಪಾಧ್ಯಕ್ಷೆ ಗೀತಾ ಟಿ.ವಿ.ಗಿರಿರಾಜ್ ,ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ , ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಆರ್.ಆನಂತಪ್ಪ, ತಾ.ಕಸಾಪ ಅಧ್ಯಕ್ಷ ರವಿ ದಳವಾಯಿ , ನಿಕಟಪೂರ್ವಅಧ್ಯಕ್ಷ ನವೀನ್ ಪೆನ್ನಯ್ಯ, ಮಹಿಳಾ ಘಟಕದ ಅದ್ಯಕ್ಷೆ ಸುನಿತಾ ಕಿರಣ್, ಕೋಶಾಧ್ಯಕ್ಷ ಕೆ.ಎಸ್.ಶಿವಣ್ಣ, ನಗರ ಘಟಕ ಅಧ್ಯಕ್ಷ ಟಿ.ಸಿ.ದರ್ಶನ್, ಹೋಬಳಿ ಕಸಾಪ ಅಧ್ಯಕ್ಷ ಟಿ.ಎನ್.ಜಗದೀಶ್, ಪ್ರಧಾನ ಕಾರ್ಯದರ್ಶಿ ಮಿಲಿಟರಿ ಶ್ರೀನಿವಾಸ್, ಶಂಕರಪ್ಪ, ಡಾ.ಹೆಚ್.ಎಂ.ಮರುಳಸಿದ್ದಯ್ಯ ಪಟೇಲ್, ಹೆಚ್.ಸಿ.ಗೋಪಾಲಕೃಷ್ಣ, ಚಕ್ರವರ್ತಿ, ಆರ್.ತಮ್ಮಯ್ಯ, ಉಮಾ ಪ್ರಕಾಶ್, ರೋಹಿಣಿ ನರಸಿಂಹಮೂರ್ತಿ, ಕಸಾಪ ಪದಾದಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.-

4ಕೆಟಿಆರ್.ಕೆ.6ಃ

ತರೀಕೆರೆಯಲ್ಲಿ ತಾ.ಕಸಾಪ ವತಿಯಿಂದ ಏರ್ಪಾಡಾಗಿದ್ದ ಕಾರ್ಯಕ್ರಮದಲ್ಲಿ ಶಾಸಕ ಜಿ.ಹೆಚ್.ಶ್ರೀನಿವಾಸ್ ಅವರು ಕನ್ನಡ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ದಾನಿ ಶ್ಯಾಮಲ ಟಿ.ಬಿ.ಮಂಜುನಾಥ್, ನವೀನ್ ಕುಮಾರ್, ಸೂರಿ ಶ್ರೀನಿವಾಸ್, ರವಿ ದಳವಾಯಿ, ಕನ್ನಡಶ್ರೀ ಬಿ.ಎಸ್.ಭಗವಾನ್,ನವೀನ್ ಪೆನ್ನಯ್ಯ,ಮಿಲಿಟರಿ ಶ್ರೀನಿವಾಸ್ ಮತ್ತಿತರರು ಇದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇನ್ನೂ ನಿರ್ಮಾಣವಾಗದ ಹೈಟೆಕ್‌ ಮಾರುಕಟ್ಟೆ
ಕೆಎಸ್‌ಐಸಿ ಕಾರ್ಖಾನೆ ಆವರಣದಲ್ಲೇ ಕ್ರೀಡಾಂಗಣ