ಗದಗ: ಸ್ವಸ್ಥ ನಾರಿ ಸಶಕ್ತ ಪರಿವಾರ ಉಪಯುಕ್ತ ಆರೋಗ್ಯ ಅಭಿಯಾನ ಆಗಿದ್ದು, ಇದರ ಸದುಪಯೋಗವನ್ನು ಮಹಿಳಾ ಸಂಕುಲ ಪಡೆಯಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜಯಪುರ ವಲಯದ ಸಮೀಕ್ಷಾ ಆರೋಗ್ಯ ಅಧಿಕಾರಿ ಡಾ. ಮುಕುಂದ ಗಲಗಲಿ ತಿಳಿಸಿದರು.
ಅಧ್ಯಕ್ಷತೆಯನ್ನು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಕಾಶ ಕಬ್ಬರಿಗೆ ವಹಿಸಿದ್ದರು. ಡಾ. ಸಚಿನ, ಡಾ. ರಾಘವೇಂದ್ರ, ಡಾ. ಶ್ರೀದೇವಿ, ಡಾ. ಓಂಕಾರ್, ಡಾ. ಮಂಜುನಾಥ, ಡಾ. ಪ್ರವೀಣ, ಡಾ. ಸ್ಪರ್ಷಾ ಚನ್ನಪ್ಪಗೌಡರ, ವೈ.ವೈ. ಹಕ್ಕಿ, ಎಸ್.ಬಿ. ಗಡಾದ, ಶ್ವೇತಾ ದೇಸಾಯಿ, ಮಂಜುನಾಥ ಭಂಡಾರಿ, ಸುನಂದ ಶಿಶುವಿನಹಳ್ಳಿ, ಶಕುಂತಲಾ ಎನ್. ಹೊಸಮನಿ ಸೇರಿದಂತೆ ಅನೇಕರು ಇದ್ದರು. ಆರೋಗ್ಯ ನಿರೀಕ್ಷಣಾಧಿಕಾರಿ ಸಿದ್ದಪ್ಪ ಲಿಂಗದಾಳ ಸ್ವಾಗತಿಸಿ, ನಿರೂಪಿಸಿದರು. ಪ್ರವೀಣ ರಾಮಗಿರಿ ವಂದಿಸಿದರು.
ಇಂದು ಜಿಲ್ಲಾಮಟ್ಟದ ದಸರಾ ಕವಿಗೋಷ್ಠಿ
ಗದಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕೆಎಲ್ಇ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ವತಿಯಿಂದ ಜಿಲ್ಲಾ ಮಟ್ಟದ ದಸರಾ ಕವಿಗೋಷ್ಠಿಯನ್ನು ಸೆ. 29ರಂದು ಬೆಳಗ್ಗೆ 10ಕ್ಕೆ ನಗರದ ಕೆಎಲ್‌ಇ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.ಕವಿಗೋಷ್ಠಿಯನ್ನು ಹಿರಿಯ ಸಾಹಿತಿ ಡಿ.ವಿ. ಬಡಿಗೇರ ಉದ್ಘಾಟಿಸುವರು. ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೆಎಲ್ಇ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾ. ಡಾ. ಎ.ಕೆ. ಮಠ, ಶಿರಹಟ್ಟಿ ಸರ್ಕಾರಿ ಪಪೂ ಮಹಾವಿದ್ಯಾಲಯದ ಪ್ರಾ. ಬಿ.ಜಿ. ಗಿರಿತಿಮ್ಮಣ್ಣವರ ಆಗಮಿಸುವರು ಎಂದು ಕಿಶೋರಬಾಬು ನಾಗರಕಟ್ಟಿ, ದತ್ತಪ್ರಸನ್ನ ಪಾಟೀಲ, ಡಿ.ಎಸ್. ಬಾಪುರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.