ಜ್ಞಾನ ಹಂಚುವ ಗುಣ ಎಲ್ಲರಲ್ಲೂ ಬರಲಿ: ಸಹನಾ ಪೈಕೋಟಿ

KannadaprabhaNewsNetwork |  
Published : Jul 29, 2026, 02:30 AM IST
ರೋಟರಿ ಕ್ಲಬ್ ಹಾಗೂ ಇನ್ನರ್‌ವೀಲ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ನಡೆಯಿತು. | Kannada Prabha

ಸಾರಾಂಶ

ಧರ್ಮ, ನ್ಯಾಯದಡಿ ಎಲ್ಲರೂ ಜೀವನ ಸಾಗಿಸಬೇಕು. ನಾವು ಬೆಳೆದು, ಮತ್ತೊಬ್ಬರನ್ನು ಬೆಳೆಸಲು ಮುಂದಾಗಬೇಕು. ಸ್ನೇಹ ಬೆಳೆಸಿ, ಸೇವೆ ನೀಡುವುದು ಇನ್ನರ್‌ವೀಲ್ ಕ್ಲಬ್‌ನ ಉದ್ದೇಶವಾಗಿದೆ.

ನರಗುಂದ: ನಾಯಕರ ಗುಣ ಮತ್ತೊಬ್ಬರನ್ನು ಬೆಳೆಸುವುದು ಆಗಿದೆ. ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪೌರಾಣಿಕ ಪಾತ್ರಗಳಾದ ರಾಮ, ಕೃಷ್ಣರ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಜ್ಞಾನ ಹಂಚುವ ಗುಣ ಎಲ್ಲರಲ್ಲಿಯೂ ಬರಬೇಕು ಎಂದು ಇನ್ನರ್‌ವೀಲ್ ಜಿಲ್ಲಾ ನಾಯಕಿ ಸಹನಾ ಪೈಕೋಟಿ ಹೇಳಿದರು.

ಭಾನುವಾರ ಪಟ್ಟಣದ ಸಮೃದ್ಧಿ ಭವನದಲ್ಲಿ ನಡೆದ 2026- 27ನೇ ಸಾಲಿನ ರೋಟರಿ ಕ್ಲಬ್ ಹಾಗೂ ಇನ್ನರ್‌ವೀಲ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಧರ್ಮ, ನ್ಯಾಯದಡಿ ಎಲ್ಲರೂ ಜೀವನ ಸಾಗಿಸಬೇಕು. ನಾವು ಬೆಳೆದು, ಮತ್ತೊಬ್ಬರನ್ನು ಬೆಳೆಸಲು ಮುಂದಾಗಬೇಕು. ಸ್ನೇಹ ಬೆಳೆಸಿ, ಸೇವೆ ನೀಡುವುದು ಇನ್ನರ್‌ವೀಲ್ ಕ್ಲಬ್‌ನ ಉದ್ದೇಶವಾಗಿದೆ. ಅದನ್ನು ಸಾರ್ಥಕಗೊಳಿಸಬೇಕೆಂದರು.

ಅಸಿಸ್ಟೆಂಟ್ ಗೌರ್ನರ್ ಶ್ರೀಧರಗೌಡ ಧರ್ಮಾಯತ ಮಾತನಾಡಿ, ಸಮಾಜಸೇವೆಯೆ ರೋಟರಿ ಉದ್ದೇಶ. ಅದರಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.

ಜಿಲ್ಲಾ ರೋಟರಿ ಕಾರ್ಯದರ್ಶಿ ಮಹಿಮಾ ದಂಡ ಮಾತನಾಡಿ, ನರಗುಂದ ರೋಟರಿ ಕ್ಲಬ್ ಸೇವೆ ಜಿಲ್ಲೆಯಲ್ಲಿಯೇ ಮಾದರಿಯಾಗಿದೆ. ಎಲ್ಲ ರೀತಿಯ ಆರೋಗ್ಯ ತಪಾಸಣೆ ಉಚಿತ ಮಾಡಿಕೊಳ್ಳಲು ಅವಕಾಶವಿದೆ. ಜುಲೈ ತಿಂಗಳಲ್ಲಿ ಐದು ಸಾವಿರ ರಕ್ತದ ಯುನಿಟ್ ದೊರೆತಿದೆ. ಇದೊಂದು ಮಹಾನ್ ಕಾರ್ಯ ರೋಟರಿ ಕ್ಲಬ್ ಮೂಲಕ ನಡೆದಿರುವುದು ಹೆಮ್ಮೆಯ ಸಂಗತಿ ಎಂದರು.

ರೋಟರಿ ಕ್ಲಬ್ ಜಿಲ್ಲಾ ಗೌರ್ನರ್ ವಾಸುಕಿ ಸಂಜಿ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ರೋಟರಿ ಕ್ಲಬ್ ಪ್ರಮುಖ ಪಾತ್ರ ವಹಿಸುತ್ತಿದೆ. ಪಟ್ಟಣದ ರೋಟರಿ ಕ್ಲಬ್ ಉತ್ತಮ ಸೇವೆ ನೀಡುತ್ತಿದೆ. ಅದರ ಮಹತ್ವ ಎಲ್ಲೆಡೆ ತಿಳಿಯಬೇಕು ಎಂದರು.

ಸಮಾರಂಭದಲ್ಲಿ ನರಗುಂದ ರೋಟರಿ ಕ್ಲಬ್ ಅಧ್ಯಕ್ಷ ಆಶೋಕ ಗೋವೇಶ್ವರ, ಕಾರ್ಯದರ್ಶಿ ಕಾರ್ಯದರ್ಶಿ ಜಿ.ವಿ. ಹೊಂಗಲ, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಶೈಲಾ ಗೋವೇಶ್ವರ, ಪ್ರಾಸ್ತಾವಿಕವಾಗಿ ಮಾತನಾಡಡಿದರು. ಕಾರ್ಯದರ್ಶಿ ಶೀಲಾ ಹೊಂಗಲ, ಭಾಗ್ಯಶ್ರೀ ಚಿಂತಾ, ಶೀತಲ್ ರೋಖಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅನಿತಾ ಗುಡಿಸಾಗರ ಸ್ನೇಹಾ ಒಳಸಂಗಿ ಪರಿಚಯಿಸಿದರು. ಹಿಂದಿನ ರೋಟರಿ ಕ್ಲಬ್ ಅಧ್ಯಕ್ಷ ಬಿ.ಎಂ. ಗೊಜನೂರ ಸ್ವಾಗತಿಸಿದರು. ರೋಟರಿ ಕ್ಲಬ್ ಖಜಾಂಚಿ ಮಂಜುನಾಥ್ ಆನೇಗುಂದಿ, ಅನಿತಾ ಗುಡಿಸಾಗರ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೈನಿಕರನ್ನು ಗೌರವಿಸುವ ಕಾರ್ಯವಾಗಲಿ
ಶೆಟ್ಟಿಗೇರಿ: ಮಾಜಿ ಸೈನಿಕರ ಸಂಘದಿಂದ ಕಾರ್ಗಿಲ್ ವಿಜಯ ದಿನ ಆಚರಣೆ