ಸಮೃದ್ಧಿ ಮಳೆಯಾಗಿ ರೈತರ ಬದುಕಿನಲ್ಲಿ ಹರ್ಷ ತರಲಿ: ನಿಶ್ಚಲಾನಂದನಾಥ ಸ್ವಾಮೀಜಿ

KannadaprabhaNewsNetwork |  
Published : Nov 20, 2025, 12:30 AM IST
19ಕೆಎಂಎನ್ ಡಿ15,16 | Kannada Prabha

ಸಾರಾಂಶ

ಪ್ರತಿ ವರ್ಷ ನಡೆಯುವ ಲಕ್ಷದೀಪೋತ್ಸವದಲ್ಲಿ ಈ ಬಾರಿ ನಾನು ಪಾಲ್ಗೊಂಡಿರುವುದು ಪುಣ್ಯದ ಕೆಲಸವಾಗಿದೆ. ಎಲ್ಲಾ ವರ್ಗದ ಜನರು ಬಂದು ಭಕ್ತಿ ಭಾವ ಪೂರಕವಾಗಿ ದೀಪವನ್ನು ಬೆಳಗಿಸಿ ಭಕ್ತಿ ಸಮರ್ಪಿಸಿದ್ದಾರೆ. ದೇವರು ಎಲ್ಲರಿಗೂ ಆರೋಗ್ಯ, ಐಶ್ವರ್ಯ ನೀಡಿ ಸಕಾಲಕ್ಕೆ ಮಳೆಯಾಗಿ ರೈತರು ಸಮೃದ್ಧಿಯಾಗಿ ಜೀವನ ನಡೆಸುವಂತಾಗಲಿ.

ಕನ್ನಡಪ್ರಭ ವಾರ್ತೆ ಹಲಗೂರು

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸಕಾಲಕ್ಕೆ ಸಮೃದ್ಧಿ ಮಳೆಯಾಗಿ ರೈತರ ಬದುಕಿನಲ್ಲಿ ಸದಾ ಹರ್ಷ ತರಲಿ ಎಂದು ಗುಂಡಾಪುರದ ಬೆಟ್ಟದರಸಮ್ಮ ಮತ್ತು ಹಲಗೂರು ನಡಕೇರಿ ವೀರಭದ್ರಸ್ವಾಮಿ ದೇವರಗಳಲ್ಲಿ ಪ್ರಾರ್ಥಿಸುವುದಾಗಿ ಶ್ರೀ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದರು.

ಗುಂಡಾಪುರದ ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ಆರಾಧ್ಯ ದೇವತೆ ಬೆಟ್ಟದರಸಮ್ಮನ ಸನ್ನಿಧಿಯಲ್ಲಿ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ, ಹಲಗೂರು ನಡುಕೇರಿ ವೀರಭದ್ರ ದೇವಸ್ಥಾನದಲ್ಲಿ ಶ್ರೀವಿನಾಯಕ ಯುವಕ ಮಿತ್ರ ಮಂಡಳಿಯಿಂದ ಹಮ್ಮಿಕೊಂಡಿದ್ದ ದೀಪೋತ್ಸವ ಹಾಗೂ ವೀರಭದ್ರ ದೇವರ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರತಿ ವರ್ಷ ನಡೆಯುವ ಲಕ್ಷದೀಪೋತ್ಸವದಲ್ಲಿ ಈ ಬಾರಿ ನಾನು ಪಾಲ್ಗೊಂಡಿರುವುದು ಪುಣ್ಯದ ಕೆಲಸವಾಗಿದೆ. ಎಲ್ಲಾ ವರ್ಗದ ಜನರು ಬಂದು ಭಕ್ತಿ ಭಾವ ಪೂರಕವಾಗಿ ದೀಪವನ್ನು ಬೆಳಗಿಸಿ ಭಕ್ತಿ ಸಮರ್ಪಿಸಿದ್ದಾರೆ. ದೇವರು ಎಲ್ಲರಿಗೂ ಆರೋಗ್ಯ, ಐಶ್ವರ್ಯ ನೀಡಿ ಸಕಾಲಕ್ಕೆ ಮಳೆಯಾಗಿ ರೈತರು ಸಮೃದ್ಧಿಯಾಗಿ ಜೀವನ ನಡೆಸುವಂತಾಗಲಿ ಎಂದರು.

ನಡುಕೇರಿ ವೀರಭದ್ರೇಶ್ವರ ದೇವಸ್ಥಾನ ಅರ್ಚಕ ಹಾಗೂ ಅಘೋರ ಭದ್ರಕಾಳಿ ಶಕ್ತಿ ಪೀಠದ ವಿದ್ವಾಂಸ ಪ್ರಸಾದ್ ಮಾತನಾಡಿ, ಕಾರ್ತಿಕ ಮಾಸದ ಅಂಗವಾಗಿ ದೇವರಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನಡೆಸಿ ಕಮಲದ ಹೂವಿನಿಂದ ಅಲಂಕರಿಸಿ ವಿಶೇಷವಾಗಿ ಪೂಜೆ ನೆಡಸಲಾಗಿದೆ ಎಂದರು.

ವೀರಭದ್ರೇಶ್ವರ ದೇವರ ಉತ್ಸವ ಪ್ರಮುಖ ರಸ್ತೆಗಳಲ್ಲಿ ಬಸಪ್ಪನ ಜೊತೆಯಲ್ಲಿ ಮೆರವಣಿಗೆ ನಡೆಸಿದ ನಂತರ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು.

ಹಲಗೂರು ವಿನಾಯಕ ಯುವಕ ಮಿತ್ರ ಮಂಡಳಿ ರಾಕೇಶ್ ಮಾತನಾಡಿ, ಪ್ರತಿ ವರ್ಷವೂ ಸಹ ಹೆಬ್ಬೆಟ್ಟದ ಬಸವೇಶ್ವರ ದೇವಸ್ಥಾನ ಹಾಗೂ ವೀರಭದ್ರೇಶ್ವರ ದೇವಸ್ಥಾನದಲ್ಲಿ ಅರ್ಚಕ ಪ್ರಸಾದ್ ನೇತೃತ್ವದಲ್ಲಿ ವಿಶೇಷ ಪೂಜೆ ಸಡೆಸಲಾಗುತ್ತಿದೆ ಎಂದರು.

ಈ ವೇಳೆ ಅರ್ಚಕರಾದ ನಾಗರಾಜು, ಚಂದ್ರು ,ಸೇರಿದಂತೆ ಶ್ರೀ ವಿನಾಯಕ ಯುವಕ ಮಂಡಳಿಯ ಸದಸ್ಯರು ಹಾಗೂ ಗ್ರಾಮಸ್ಥರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ನಾಳೆ ವಿದ್ಯುತ್ ವ್ಯತ್ಯಯ

ಮಂಡ್ಯ: 66/11 ಕೆ.ವಿ ವಿ.ಸಿ.ಫಾರ್ಮ್ ಮತ್ತು ಕೋಲಕಾರನದೊಡ್ಡಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈ ಮಾಸಿಕ ಕಾರ್ಯ ನಿರ್ವಹಣೆ ಹಮ್ಮಿಕೊಂಡಿರುವುದರಿಂದ ನ.21ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ತಾಲೂಕಿನ ವಿ.ಸಿ.ಫಾರ್ಮ್, ಶಿವಳ್ಳಿ, ದುದ್ದ, ಬಿ.ಹಟ್ನ, ಬೇವಕಲ್ಲು, ಹುಲಿಕೆರೆ, ಚಂದಗಾಲು, ಹುಲ್ಲೇನಹಳ್ಳಿ, ಬಿಳಗುಲಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳು ಹಾಗೂ ತಾಲೂಕಿನ ತಗ್ಗಹಳ್ಳಿ, ಕೋಲಕಾರನದೊಡ್ಡಿ, ಹೆಮ್ಮಿಗೆ, ಸೂನಗನಹಳ್ಳಿ, ಪುರ, ಲೋಕಸರ, ಹಳುವಾಡಿ, ಕಮ್ಮನಾಯಕನಹಳ್ಳಿ, ಟಿ.ಮಲ್ಲಿಗೆರೆ, ಕಬ್ಬನಹಳ್ಳಿ, ತಿಮ್ಮನಹೊಸೂರು, ಬಿ.ಹೊಸೂರು, ಗೋಪನಹಳ್ಳಿ ಯಡಗನಹಳ್ಳಿ, ಮಾದರಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸೆಸ್ಕ್, ಕಾ ಮತ್ತು ಪಾ ಮಂಡ್ಯ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ಜೈಲೊಳಗಿನ ವಿಡಿಯೋ ಲೀಕ್‌ ಕೇಸಲ್ಲಿ ದರ್ಶನ್‌ ಪತ್ನಿಗೆ ಸಂಕಷ್ಟ?
ಬಡವರನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡಿದ ಇಂದಿರಾ ಗಾಂಧಿ: ಶಾಸಕ ಸಿ.ಪುಟ್ಟರಂಗಶೆಟ್ಟಿ