ಧಾರವಾಡ: ಕಾರ್ಗಿಲ್ ವಿಜಯೋತ್ಸವದ ಪ್ರೇರಣೆ ಪಡೆದು ಯುವಕರು ದೇಶಭಕ್ತಿ ಮೆರೆಯಬೇಕಾದ ಅಗತ್ಯತೆ ಇದೆ. ದುರ್ಗಮ ಸ್ಥಳದಲ್ಲಿ ಪರಾಕ್ರಮ ಮೆರೆದಿದ್ದ ದೇಶದ ಭೂ ಭಾಗವನ್ನು ಮರುವಶ ಮಾಡಿಕೊಂಡ ಅಂದಿನ ವೀರ ಯೋಧರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದು ಮೇಜರ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.
ದೇಶದ ಭದ್ರತೆಗೋಸ್ಕರ ಗಡಿಯಲ್ಲಿ ಜೀವ ಸವೆಸುವ ಯೋಧರ ಬಗ್ಗೆ ದೇಶದೊಳಗಿನ ಜನರಿಗೆ ಅಷ್ಟಾಗಿ ಮಾಹಿತಿ ಇರುವುದಿಲ್ಲ. ಅವರ ಕಷ್ಟ-ನಷ್ಟಗಳನ್ನು ಅರಿತು ಯೋಧರಿಗೆ ಗೌರವ ಸಲ್ಲಿಸುವ ಕಾರ್ಯವಾಗಬೇಕು ಎಂದರು.
ಬ್ರಿಗೇಡಿಯರ್ ಎಸ್.ಜಿ. ಭಾಗವತ, ತಾವು ಸೇವೆ ಸಲ್ಲಿಸಿದ ಕಾರ್ಗಿಲ್ ಪ್ರದೇಶದ ಕಠಿಣ ವಾತಾವರಣ ವಿವರಿಸಿ, ಯೋಧರ ಶೌರ್ಯವನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಶಾಸಕ ಎನ್.ಎಚ್. ಕೋನರೆಡ್ಡಿ ಪುಷ್ಪ ನಮನ ಸಲ್ಲಿಸಿ, ಭಾರತೀಯ ಯೋಧರು ಸದಾ ಸ್ಮರಣೀಯರು ಎಂದರು.ಕೆಎಎಸ್ ಅಧಿಕಾರಿ ಅನುರಾಧಾ ವಸ್ತ್ರದ, ಬೈರನಟ್ಟಿಯ ಶಾಂತಲಿಂಗ ಸ್ವಾಮೀಜಿ, ಅಥಣಿ ದೇವದಾಸಿ ವಿಮೋಚನಾ ಸಂಸ್ಥೆಯ ಅಧ್ಯಕ್ಷ ಬಿ.ಎಲ್. ಪಾಟೀಲ್, ಚಂದ್ರಶೇಖರ ಅಮೀನಗಡ, ಪಂಡಿತ ಮುಂಜಿ, ಎಂ.ಜಿ. ತಿಮ್ಮಾಪುರ, ನಿವೃತ್ತ ಸೈನಿಕ ಎನ್.ಎಂ. ಗೌಡನಾಯಕ, ಉದಯ ಯಂಡಿಗೇರಿ, ಮಲ್ಲಿಕಾರ್ಜುನ ಚಿಕ್ಕಮಠ, ಶಿವಯೋಗಿ ಅಮಿನಗಡ, ಮೋಹನ ಅಷ್ಟಗಿ, ಕಾರ್ತಿಕ ಆಕಳವಾಡಿ, ಗೋವರ್ಧನ ಭಟ್ಟ, ಪ್ರಿಮಿಯರ್ ಸಿಟಿಜನ್ ಹಾಗೂ ರೋಟರಿ ಕ್ಲಬ್ ಸದಸ್ಯರು ಹಾಗೂ ಬುದ್ಧರಕ್ಕಿತ ಶಾಲಾ ಮಕ್ಕಳು ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, 24 ಎನ್‌ಸಿಸಿ ಬಟಾಲಿಯನ್‌ನ ಅಧಿಕಾರಿಗಳು, ಕೆಡೆಟ್‌ಗಳು, ಮಾಜಿ ಸೈನಿಕರು ಇದ್ದರು.