ಸಿಂದಗಿ ಅಭಿವೃದ್ಧಿಗೆ ಎಂಸಿಎಂ ದೂರದೃಷ್ಟಿ ಕಾರಣ

KannadaprabhaNewsNetwork |  
Published : Aug 16, 2026, 04:00 AM IST
ಪಾಟೀಲ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿಬೇರೆ ತಾಲೂಕಿನಲ್ಲಿ 1 ಅಥವಾ 2 ಸಕ್ಕರೆ ಕಾರ್ಖಾನೆಗಳಿದ್ದು, ದಿ.ಎಮ್.ಸಿ.ಮನಗೂಳಿ ಅವರ ದೂರ ದೃಷ್ಠಿಯಿಂದ ಇಂದು ಸಿಂದಗಿ ತಾಲೂಕಿನಲ್ಲಿ 4 ಸಕ್ಕರೆ ಕಾರ್ಖಾನೆಗಳು ನಿರ್ಮಾಣವಾಗಿವೆ. ಇದರಲ್ಲಿ ಅವರದ್ದಲ್ಲದೇ ಬೇರೆ ಯಾರ ಕೊಡುಗೆಯೂ ಇಲ್ಲ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಬೇರೆ ತಾಲೂಕಿನಲ್ಲಿ 1 ಅಥವಾ 2 ಸಕ್ಕರೆ ಕಾರ್ಖಾನೆಗಳಿದ್ದು, ದಿ.ಎಮ್.ಸಿ.ಮನಗೂಳಿ ಅವರ ದೂರ ದೃಷ್ಠಿಯಿಂದ ಇಂದು ಸಿಂದಗಿ ತಾಲೂಕಿನಲ್ಲಿ 4 ಸಕ್ಕರೆ ಕಾರ್ಖಾನೆಗಳು ನಿರ್ಮಾಣವಾಗಿವೆ. ಇದರಲ್ಲಿ ಅವರದ್ದಲ್ಲದೇ ಬೇರೆ ಯಾರ ಕೊಡುಗೆಯೂ ಇಲ್ಲ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಗೋಲಗೇರಿ ರಸ್ತೆಯ 52 ಎಕರೆ ಪ್ರದೇಶದ ಕೆರೆಗೆ ದಿ.ಎಮ್.ಸಿ.ಮನಗೂಳಿ ಕೆರೆ ಹಾಗೂ ಸಿಂದಗಿಯ ಸಿರಿ ಶ್ರೀಶಾಂತವೀರ ಪಟ್ಟಾಧ್ಯಕ್ಷರ ಉದ್ಯಾನವನ ನಾಮಕರಣ ಹಾಗೂ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ, 196 ವಿದ್ಯುದ್ದೀಪ ಉದ್ಘಾಟನೆ, ಕೃಷ್ಣಾ ಆರತಿ, ಬಾಗಿನ ಸಮರ್ಪಿಸಿ ಮಾತನಾಡಿದರು. ಸಿಂದಗಿ ಔದ್ಯೋಗಿಕ, ಕೃಷಿ, ಶಿಕ್ಷಣ, ತೋಟಗಾರಿಕೆ, ಹೈನುಗಾರಿಕೆಯಿಂದ ಅತಿ ವೇಗದಲ್ಲಿ ಬೆಳೆಯುತ್ತಿದೆ. ಇದಕ್ಕೆಲ್ಲ ಕಾರಣ ಈ ಭಾಗ ನೀರಾವರಿಯಾಗುತ್ತಿದೆ. ದಿ.ಎಮ್.ಸಿ.ಮನಗೂಳಿ ಅವರು ನೀರಿಗಾಗಿ ಕ್ರಾಂತಿ ಮಾಡದಿದ್ದರೆ ಇದೆಲ್ಲವು ಕ್ಷೀಣಿಸುತ್ತಿದ್ದವು. ಆಲಮಟ್ಟಿ ಡ್ಯಾಂ ನಿರ್ಮಾಣ ಮಾಡಿದ್ದು ನಾವು, ಆದರೆ, ಅದರ ನೀರನ್ನು ಸಿಂದಗಿಗೆ ಹರಿಸಿದ್ದು ಅವರ ಸೃಜನಶೀಲತೆಯಾಗಿದೆ ಎಂದರು.ದಿ.ಮನಗೂಳಿ ಅವರ ಅಧಿಕಾರದ ಅವಧಿಯಲ್ಲಿ ತೋಟಗಾರಿಕೆ ಕಾಲೇಜು ಮಂಜೂರು ಮಾಡಿದ್ದರು. ಆದರೆ ಅದು ವಿವಿಧ ಕಾರಣಗಳಿಂದ ಸ್ಥಾಪನೆಯಾಗಲಿಲ್ಲ. ನಾವು 6 ಬಾರಿ ಶಾಸಕರಾದರು ಇನ್ನು ಯಾವ ಇಲಾಖೆಯಲ್ಲಿ ಎನಿದೇ ಎನ್ನುವುದನ್ನು ತಿಳಿಯಬೇಕಿದೆ. ಆದರೆ, ಶಾಸಕ ಅಶೋಕ ಮನಗೂಳಿ ಅದನ್ನು ತೀವ್ರ ಅಧ್ಯಯನ ಮಾಡಿ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ದಿ ಪಡಿಸುತ್ತಿದ್ದಾರೆ. ನಾವು ಅವರನ್ನು ನೋಡಿ ಕಲಿಯಬೇಕು ಎಂದು ನಗೆ ಚಟಾಕಿ ಹಾರಿಸಿದರು. ಶಾಸಕ ಅಶೋಕ ಮನಗೂಳಿ ಮಾತನಾಡಿ, ಸಿಂದಗಿ ಕೆರೆಗೆ ಎಮ್.ಸಿ.ಮನಗೂಳಿ ಎಂದು ನಾಮಕರಣ ಮಾಡಿದ್ದು ಸಿಂದಗಿಯ ಜನತೆ. ಅವರಿಗೆ ನಾನು ಕೃತಜ್ಞತೆ. ಸಿಂದಗಿ ಕೆರೆಗೆ 1997 ರಲ್ಲಿ ದಿ.ಎಮ್.ಸಿ.ಮನಗೂಳಿ ಅವರು ₹ 6.54 ಕೋಟಿ ಹಣ ಮಂಜೂರು ಮಾಡಿಸಿ ಕೆರೆಗೆ ನೀರು ಹರಿಸಿದರು. ನಂತರ 2018 ರಲ್ಲಿ ಸಚಿವರಾದಾಗ ₹ 17.15 ಕೋಟಿ ಅನುದಾನಲ್ಲಿ ಬಳಗಾನೂರು ಕೆರೆಯಿಂದ ನೀರು ಹರಿಸಿದರು. ಇದೆಲ್ಲ ಸಾರ್ವಜನಿಕರ ಹಿತಾಸಕ್ತಿಗೆ. ಸತತ ಅವರು ಸೋತರು ಯಾವತ್ತು ಅವರು ಕುಂದಿಲ್ಲ. ನಮ್ಮ ತಂದೆಯ ಹಾಗೆ ನಾನು ಶಾಶ್ವತ ಯೋಜನೆ ರೂಪಿಸಲು ಸದಾ ಸಿದ್ದನಾಗಿದ್ದಾನೆ ಎಂದು ಭರವಸೆ ನೀಡಿದರು.ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಸಿಂದಗಿಯಲ್ಲಿ ಅನೇಕ ಯೋಜನೆಗಳು ನಿರ್ಮಾಣಗೊಳ್ಳುತ್ತಿವೆ. ಕೆರೆಗೆ ಮನಗೂಳಿ ಅವರ ಹೆಸರು ಇಟ್ಟಿದ್ದು ಸೂಕ್ತವಾಗಿದೆ. ಉದ್ಯಾನವನಕ್ಕೆ ಶ್ರೀ ಶಾಂತವೀರ ಶ್ರೀಗಳ ನಾಮಕರಣಗೊಂಡಿದ್ದು, ಆ ಉದ್ಯಾನವನವನ್ನು ಸರಿಯಾಗಿ ಉಪಯೋಗಿಸಬೇಕು ಎಂದರು.

ಈ ವೇಳೆ ಮಠದ ಶಿವಾನಂದ ಶಿವಾಚಾರ್ಯರು, ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಭೀಮಾಶಂಕರ ಮಠದ ಸದ್ಗುರು ದತ್ತಪ್ಪಯ್ಯ ಸ್ವಾಮಿಗಳು ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜಯೋಗಿನಿ ಈಶ್ವರಿ ವಿಶ್ವವಿದ್ಯಾಲಯದ ಪವಿತ್ರಾ ಅಕ್ಕನವರು ವೇದಿಕೆ ಮೇಲಿದ್ದರು. ಕಾರ್ಯಕ್ರಮ ಪ್ರಯುಕ್ತ ಸುಮಂಗಲೆಯಲು ಸಾರಂಗಮಠದಿಂದ ಮೆರವಣಿಗೆ ಮೂಲಕ ಕೆರೆಗೆ ಆಗಮಿಸಿ ದೀಪ ಬೆಳಗಿ ಕೃಷ್ಣಾರತಿ ಮಾಡಿದರು. ಕಾರ್ಯಕ್ರಮದಲ್ಲಿ ಪೂಜಾ ಹಿರೇಮಠ ಸಂಗಡಿಗರು ಪ್ರಾರ್ಥಿಸಿದರು, ಡಾ.ರವಿ ಗೋಲಾ ಸ್ವಾಗತಿಸಿದರು, ಉಪನ್ಯಾಸಕ ಸಿದ್ದಲಿಂಗ ಕಿಣಗಿ ನಿರೂಪಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಚಿವ ಸ್ಥಾನ ತಪ್ಪಲು ಎಂ.ಬಿ.ಪಾಟೀಲ ಕಾರಣ
ಹುನ್ನಾರಗಳಿಗೆ ಜನರೇ ಕಡಿವಾಣ ಹಾಕಲಿ