ತುಮಕೂರು ವಿವಿಯಲ್ಲಿ ಮೇ 18,19ಕ್ಕೆ ಮಾಧ್ಯಮ ಉತ್ಸವ

KannadaprabhaNewsNetwork |  
Published : Apr 29, 2026, 01:15 AM IST
9999 | Kannada Prabha

ಸಾರಾಂಶ

ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಮೇ 18 ಮತ್ತು 19 ರಂದು ಇಂಪ್ರೆಷನ್-2026 ರಾಜ್ಯಮಟ್ಟದ ಮಾಧ್ಯಮ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ, ತುಮಕೂರು

ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಮೇ 18 ಮತ್ತು 19 ರಂದು ಇಂಪ್ರೆಷನ್-2026 ರಾಜ್ಯಮಟ್ಟದ ಮಾಧ್ಯಮ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಇದರ ಪೋಸ್ಟರ್ ಅನ್ನು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಂಗಳವಾರ ಅನಾವರಣಗೊಳಿಸಿದರು.

ಮಾಧ್ಯಮ ಹಬ್ಬವು ವಿಶ್ವವಿದ್ಯಾನಿಲಯದ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಸೃಜಿಸಿ, ಸಂವಹಿಸಿ, ಆಕರ್ಷಿಸಿ - ಮಾಧ್ಯಮದ ಧ್ವನಿಯಾಗಿ ಎಂಬ ಘೋಷವಾಕ್ಯದೊಂದಿಗೆ ನಡೆಯಲಿದೆ. ಹನ್ನೆರಡು ವಿವಿಧ ಬಗೆಯ ಏಕವ್ಯಕ್ತಿ ಮತ್ತು ಗುಂಪು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸ್ಪರ್ಧೆಗಳ ವಿವರ: ಏಕವ್ಯಕ್ತಿ ಸ್ಪರ್ಧೆಗಳು: ವರದಿಗಾರಿಕೆ, ಟಿವಿ ಸುದ್ದಿ ಪ್ರಸ್ತುತಿ, ರೇಡಿಯೋ ಜಾಕಿ, ಛಾಯಾಗ್ರಹಣ, ಪೋಸ್ಟರ್ ವಿನ್ಯಾಸ, ಪುಟ್ಟಕತೆ, ರೀಲ್ಸ್ ಮೇಕಿಂಗ್, ಪೀಸ್ ಟು ಕ್ಯಾಮೆರಾ. ಗುಂಪು ಸ್ಪರ್ಧೆಗಳು: ಚರ್ಚಾ ಸ್ಪರ್ಧೆ, ರಸಪ್ರಶ್ನೆ, ಜಾಹೀರಾತು ನಿರ್ಮಾಣ, ಸಮೂಹ ನೃತ್ಯ ಸ್ಪರ್ಧೆ. ಈ ಸ್ಪರ್ಧೆ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸೀಮಿತವಾಗಿಲ್ಲ. ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ವಿಜೇತರಿಗೆ ಆಕರ್ಷಕ ನಗದು ಬಹುಮಾನ, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ವಿಭಾಗದ ಸಂಯೋಜಕರಾದ ಡಾ. ಸಿಬಂತಿ ಪದ್ಮನಾಭ ಕೆ.ವಿ 9449525854 ಅಥವಾ ವಿದ್ಯಾರ್ಥಿ ಸಂಚಾಲಕ ಪ್ರದೀಪ್ ಡಿ. ಎಸ್. 6362099062 ಇವರನ್ನು ಸಂಪರ್ಕಿಸಬಹುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟ್ರಾಫಿಕ್‌ ಸಮಸ್ಯೆ ನಿಯಂತ್ರಣ ಕ್ರಮ ವಹಿಸಿ
ಇತ್ತೀಚಿನ ಖಾಯಿಲೆಗಳಿಗೆ ಕ್ರೀಡೆಗಳು ರಾಮಬಾಣ: ಅಶೋಕ ಮೆಹ್ತಾ