ಕುದೂರು: ಒತ್ತಡದ ಬದುಕಿನಿಂದ ಹೊರಗೆ ಬರಲು ಇರುವ ಒಂದೇ ಒಂದು ಹೆಬ್ಬಾಗಿಲೆಂದರೆ ಅದು ಧ್ಯಾನಮಾರ್ಗ ಮಾತ್ರ. ಇದರಿಂದ ಪರಿಣಾಮಕಾರಿ ಬದಲಾವಣೆಯನ್ನು ನೋಡಿ ಆನಂದಿಸಬಹುದು. ಇದು ಯಾವುದೇ ರೀತಿಯ ಪವಾಡಗಳಲ್ಲ. ಇದೊಂದು ವಿಜ್ಞಾನ ಎಂದು ಧ್ಯಾನಸಿದ್ದಿ ಮಾಸ್ಟರ್ ಪಾರ್ಶ್ವನಾಥ್ ತಿಳಿಸಿದರು.
ಆಜ್ಞಾಚಕ್ರವನ್ನು ಜಾಗೃತಿ ಮಾಡಿಕೊಳ್ಳುವುದರಿಂದ ನಮ್ಮ ಒಳಗಣ್ಣಿನ ದೃಷ್ಟಿ ಸ್ಪಷ್ಟವಾಗುತ್ತದೆ. ಕುಂಡಲೀನಿ ಪ್ರಾಣಾಯಾಮದ ಮಾರ್ಗದ ಮೂಲಕ ನಮ್ಮ ಎಲ್ಲಾ ಒತ್ತಡಗಳನ್ನು ಕಡಿಮೆ ಮಾಡಿಕೊಂಡು ದಿವ್ಯವಾದ ಆನಂದವನ್ನು ಅನುಭವಿಸುವುದನ್ನು ಕೆಲವೇ ಗಂಟೆಗಳ ಸಾಧನೆಯಲ್ಲೇ ಅನುಭವಿಸಬಹುದು. ಓಶೋ ಡೈನಾಮಿಕ್ ಪ್ರಾಣಾಯಾಮ ಮತ್ತು ನಾದಬ್ರಹ್ಮ ಪ್ರಾಣಾಯಾಮದ ಮೂಲಕ ನಮ್ಮ ದೇಹ ಮತ್ತು ಮನಸನ್ನು ತಿಂಗಳುಗಟ್ಟಲೆ ಉಲ್ಲಾಸವಾಗಿಟ್ಟುಕೊಳ್ಳಬಹುದಾಗಿದೆ ಎಂದು ಹೇಳಿದರು.
ಅನುಮಾನಿಸುವುದು ಮತ್ತು ಅದರ ನಿವಾರಣೆಗೆ ಪ್ರಶ್ನಿಸುವುದು ತಪ್ಪಿನ ಮಾರ್ಗವಲ್ಲ. ಆದರೆ ಅನುಮಾನ ಪರಿಹಾರವಾದ ನಂತರವೂ ಗೊಂದಲದಲ್ಲಿ ಬಿದ್ದು ಒದ್ದಾಡುವುದರಿಂದ ನಮ್ಮಲ್ಲಿನ ಸಂತೋಷ ಬಹುದೂರ ಓಡುತ್ತದೆ. ಶಿವಗಂಗೆ ತಪ್ಪಲಿನಲ್ಲಿನ ಪ್ರಶಾಂತ ವಾತಾವರಣದಲ್ಲಿ ಈ ಪ್ರಾಣಾಯಾಮದ ತರಬೇತಿ ಮತ್ತಷ್ಟು ಸುಂದರ ಅನುಭೂತಿಯನ್ನು ಶಿಬಿರಾರ್ಥಿಗಳಿಗೆ ನೀಡುತ್ತದೆ ಎಂದು ತಿಳಿಸಿದರು.4ಕೆಆರ್ ಎಂಎನ್ 6.ಜೆಪಿಜಿ
ಮಾಗಡಿ ತಾಲೂಕು ಹೊಸಹಳ್ಳಿ ಗ್ರಾಮದ ಮೌಂಟ್ ಜೆನ್ ಎಸೆನ್ಸ್ ಸಭಾಂಗಣದಲ್ಲಿ ಓಶೋ ಮೆಡಿಟೇಷನ್ ತರಬೇತಿ ಕಾರ್ಯಾಗಾರ ನಡೆಯಿತು.