ಪಿಎಚ್‌ಸಿ ಮೇಲ್ದರ್ಜೆ, ಪಟ್ಟಣ ಪಂಚಾಯತ್ ಘೋಷಣೆ ಆಶಯ । ಕುಂಟುತ್ತಿರುವ ಭದ್ರಾ ಸೇತುವೆ ಕಾಮಗಾರಿ ಪೂರ್ಣಕ್ಕೆ ಒತ್ತಾಯ
ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ಶನಿವಾರ ಬಾಳೆಹೊನ್ನೂರಿಗೆ ಭೇಟಿ ನೀಡುತ್ತಿರುವ ಸಿಎಂ ಡಿ.ಕೆ.ಶಿವಕುಮಾರ್ ಅವರಿಂದ ಈ ಭಾಗದ ಜನರು ಹಲವು ಅಭಿವೃದ್ಧಿ ಚಟುವಟಿಕೆಗಳ ಘೋಷಣೆ ನಿರೀಕ್ಷೆಯಲ್ಲಿದ್ದಾರೆ.ಮುಖ್ಯಮಂತ್ರಿಯಾದ ಬಳಿಕ ಜಿಲ್ಲೆಗೆ ಮೊದಲ ಬಾರಿಗೆ ಡಿಕೆಶಿಯವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಹೊಸ ಅಭಿವೃದ್ಧಿ ಕಾರ್ಯ ಹಾಗೂ ಮಂದಗತಿಯಲ್ಲಿರುವ ಕಾಮಗಾರಿ ಚುರುಕಿಗೆ ಆದೇಶ ನೀಡುವರೆಂಬ ಭರವಸೆಯಲ್ಲಿದ್ದಾರೆ.
ಇದರಿಂದ ಮಲೆನಾಡು ಜನರು ನಿಟ್ಟುಸಿರು ಬಿಟ್ಟರೂ ಸಹ, ಬಾಳೆಹೊನ್ನೂರಿಗೆ ಭೇಟಿ ಸಂದರ್ಭದಲ್ಲಿ ಸಾರ್ವ ಜನಿಕರು ಕಸ್ತೂರಿ ರಂಗನ್ ವರದಿ ಕುರಿತು ಪ್ರಸ್ತಾಪಿಸಿ ನೀಡುವ ಮನವಿಗಳಿಗೆ ಸಿಎಂ ಏನು ಉತ್ತರ ಏನು ಎಂಬ ಕಾತರದಲ್ಲಿದ್ದಾರೆ.
ಬಾಳೆಹೊನ್ನೂರು ಪ್ರವಾಸಿ, ಧಾರ್ಮಿಕ ಕ್ಷೇತ್ರ. ರಂಭಾಪುರಿ ಪೀಠ, ಶೃಂಗೇರಿ, ಹೊರನಾಡು, ಹರಿಹರಪುರ, ಶಕಟಪುರ, ಗೌರಿಗದ್ದೆ, ಬಸ್ತಿಮಠ, ಖಾಂಡ್ಯ, ಧರ್ಮಸ್ಥಳ ಮುಂತಾದ ಕ್ಷೇತ್ರಗಳಿಗೆ, ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೇಂದ್ರ. ಇಲ್ಲಿಗೆ ಉನ್ನತೀಕರಿಸಿದ ಆಸ್ಪತ್ರೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸುವ ಸಾಧ್ಯತೆಇದೆ.
ಪಟ್ಟಣದ ವ್ಯಾಪ್ತಿಗೆ ಒಳಪಡುವ ಬಿ.ಕಣಬೂರು ಗ್ರಾಪಂ ಪ್ರಸ್ತುತ ಸುಮಾರು ೨೦ ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವುದರಿಂದ ಪಟ್ಟಣ ಪಂಚಾಯತಿಯಾಗಿ ಘೋಷಿಸಬೇಕು ಎಂಬ ಈ ಭಾಗದ ಜನರ ಬೇಡಿಕೆ ಸಹ ಹಲವು ವರ್ಷಗಳಿಂದ ಈಡೇರಿಲ್ಲ. 2011ರ ಜನಗಣತಿ ಪ್ರಕಾರ ಬಿ.ಕಣಬೂರು ಗ್ರಾಪಂ ವ್ಯಾಪ್ತಿ ಗೆ 11800 ಜನಸಂಖ್ಯೆ ಎಂದು ವರದಿಯಲ್ಲಿದೆ. ಕಳೆದ 15 ವರ್ಷಗಳಿಂದ ಜನಗಣತಿ ಆಗದೆ ಪಪಂ ಘೋಷಣೆಗೆ ಅಡ್ಡಿಯುಂಟಾಗಿದೆ. ಮುಂದಿನ ಜನವರಿಯಲ್ಲಿ ಜನಗಣತಿ ನಿರೀಕ್ಷೆಯಿದ್ದು, ಆ ವೇಳೆಯೊಳಗೆ ಸರ್ಕಾರ ಕ್ರಮಕೈಗೊಂಡು, ಬಾಳೆಹೊನ್ನೂರನ್ನು ಪಟ್ಟಣ ಪಂಚಾಯತ್ ಮಾಡಿಸಿದಲ್ಲಿ ಹೆಚ್ಚಿನ ಅಭಿವೃದ್ಧಿಯಾಗುವ ನಿರೀಕ್ಷೆ ಇದೆ.(ಬಾಕ್ಸ್)
ಬಾಳೆಹೊನ್ನೂರಿನಿಂದ ಚಿಕ್ಕಮಗಳೂರು ಸಂಪರ್ಕಿಸುವ ಭದ್ರಾ ನದಿಗೆ ಅಡ್ಡಲಾಗಿ ಬ್ರಿಟೀಷರ ಕಾಲದಲ್ಲಿ ನಿರ್ಮಿಸಿದ ಸೇತುವೆ ಅತ್ಯಂತ ಹಳೆಯದಾದ ಕಾರಣ ಕಳೆದ 2017ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ರಸ್ತೆ ಅಭಿವೃದ್ಧಿ ನಿಗಮದಿಂದ (ಕೆಆರ್‌ಡಿಎಲ್) ₹19 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲು ಆದೇಶಿಸಿ ಶಂಕುಸ್ಥಾಪನೆ ಮಾಡಿದ್ದರು. ಆದರೆ ಸೇತುವೆ ನಿರ್ಮಾಣ ಆರಂಭಿಸಿ 9 ವರ್ಷವಾದರೂ ಈವರೆಗೆ ಪೂರ್ಣಗೊಂಡಿಲ್ಲ. ಇನ್ನೂ ಅರ್ಧ ಭಾಗದ ಕಾಮಗಾರಿ ನಡೆಯದೆ ಅದಕ್ಕಾಗಿ ತಂದ ಕಬ್ಬಿಣ, ಸಿಮೆಂಟ್, ಯಂತ್ರೋಪಕರಣ ಹಾಳಾಗುತ್ತಿದೆ.
ಬಾಳೆಹೊನ್ನೂರು ಜನರ ಬಹುದಿನದ ಬೇಡಿಕೆಯಾದ ಆಸ್ಪತ್ರೆ ಮೇಲ್ದರ್ಜೆಗೆ ಹಾಗೂ ಗ್ರಾಪಂನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ರಂಭಾಪುರಿ ಜಗದ್ಗುರು ಸಮ್ಮುಖದಲ್ಲಿ ಶಾಸಕರ ನೇತೃತ್ವ ದಲ್ಲಿ ಮನವಿ ಸಲ್ಲಿಸಲು ಸಿದ್ಧತೆ ಮಾಡಲಾಗಿದೆ.
--ಮುಖ್ಯಮಂತ್ರಿಗಳು ಜಿಲ್ಲೆಯ ಸಮಸ್ಯೆ ಆಲಿಸಲು ಜನರ ಬಳಿಗೆ ಬರುತ್ತಿದ್ದು, ಸಾರ್ವಜನಿಕರು ಕಸ್ತೂರಿ ರಂಗನ್ ವರದಿ ಮತ್ತಿ ತರರ ವಿಷಯಗಳ ಬಗ್ಗೆ ನೇರವಾಗಿ ಸಂವಾದ ನಡೆಸಲಿದ್ದಾರೆ. ಇದರೊಂದಿಗೆ ಮಲೆನಾಡು ಭಾಗದ ರೈತರ ಜ್ವಲಂತ ಸಮಸ್ಯೆ ಕುರಿತು ಸಹ ಚರ್ಚಿಸಲಿದ್ದಾರೆ.ಸಿಎಂ ಭೇಟಿಯಿಂದ ಜಿಲ್ಲೆಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಕ್ಕೆ ವೇಗ ದೊರೆಯಲಿದೆ.
--- ಟಿ.ಡಿ.ರಾಜೇಗೌಡ, ಶಾಸಕ.೧೮ಬಿಹೆಚ್‌ಆರ್ ೨: ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರ.೧೮ಬಿಹೆಚ್‌ಆರ್ ೩: ಬಾಳೆಹೊನ್ನೂರಿನ ಬಿ.ಕಣಬೂರು ಗ್ರಾಪಂ೧೮ಬಿಹೆಚ್ಆರ್ ೪: ಬಾಳೆಹೊನ್ನೂರಿನಿಂದ ಚಿಕ್ಕಮಗಳೂರು ಸಂಪರ್ಕ ಕಲ್ಪಿಸುವ ಭದ್ರಾ ನದಿಗೆ ನೂತನವಾಗಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಅಪೂರ್ಣಗೊಂಡಿರುವುದು.೧೮ಬಿಹೆಚ್‌ಆರ್ ೫: ಹಿರಿಯಣ್ಣ (ನಾಗರೀಕ ವೇದಿಕೆ ಸಂಚಾಲಕ)೧೮ಬಿಹೆಚ್‌ಆರ್ ೬: ಕೌಶಿಕ್ ಪಟೇಲ್ (ಪಿಸಿಎಆರ್‌ಡಿ ಬ್ಯಾಂಕ್ ಉಪಾಧ್ಯಕ್ಷ)೧೮ಬಿಹೆಚ್‌ಆರ್ ೭: ಟಿ.ಡಿ.ರಾಜೇಗೌಡ (ಶಾಸಕ.)