ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಲಾಳನಕೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಿಂದ ನಡೆದ 14ನೇ ವರ್ಷದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಪ್ರಮುಖವಾಗಿ ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವುದು ಬಹು ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಸದಸ್ಯರೂ ಉತ್ತಮ ದರ್ಜೆಯ ಹಾಲನ್ನು ಸರಬರಾಜು ಮಾಡಬೇಕು ಎಂದರು.ಪ್ರತಿನಿತ್ಯ ಒಕ್ಕೂಟಕ್ಕೆ ಲಕ್ಷಾಂತರ ಲೀಟರ್ ಹಾಲು ಸರಬರಾಜುತ್ತಿದ್ದು, ಇದನ್ನು ಸಂಸ್ಕರಿಸಿ ಮಾರುಕಟ್ಟೆಗೆ ಹಾಲು ಸೇರಿದಂತೆ ಹಾಲಿನ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮೂಲಕ ಆರ್ಥಿಕವಾಗಿ ಸ್ವಾವಲಂಭನೆ ಸಾಧಿಸಲಾಗುತ್ತಿದೆ. ಇದಕ್ಕೆ ಸದಸ್ಯರೂ ಸಹ ಒಳ್ಳೆಯ ಹಾಲನ್ನು ಸರಬರಾಜು ಮಾಡಿದರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಮದ್ದೂರು ಎಪಿಎಂಸಿ ಮಾಜಿ ನಿರ್ದೇಶಕ ಶಿವಮಲ್ಲಪ್ಪ ಮಾತನಾಡಿ, ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಹಾಕಿದರೆ ಸಂಘವೂ ಮುನ್ನಡೆ ಸಾಧಿಸುತ್ತದೆ. ಕಳಪೆ ಗುಣಮಟ್ಟದ ಹಾಲನ್ನು ಹಾಕಿದರೆ ಸಂಘ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದರು.
ಸಂಘದ ಉಪಾಧ್ಯಕ್ಷೆ ಬಿ.ಟಿ.ರೂಪ, ನಿರ್ದೇಶಕರಾದ ನಂಜಮ್ಮಣಿ, ಕೆಂಡಗಣ್ಣಮ್ಮ, ಸುನಂದ, ಮಂಜುಳಾ, ಮಹದೇವಮ್ಮ, ಸರ್ವಮಂಗಳ, ಕಾರ್ಯದರ್ಶಿ ಗೌರಮಣಿ ಇತರರು ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು.