ಪಿಡಬ್ಲ್ಯುಡಿ ಎಂಜಿನಿಯರ್ ರವಿ ನಾಯ್ಕಗೆ ತರಾಟೆ/ ಸದಸ್ಯೆಯರಿಂದ ಉಪಾಧ್ಯಕ್ಷರ ತರಾಟೆಕನ್ನಡಪ್ರಭ ವಾರ್ತೆ ಹೊಸಪೇಟೆ
ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾನ್ಯ ಸಭೆಯಲ್ಲಿ ನಗರಸಭೆಯನ್ನು ಮೇಲ್ದರ್ಜೆಗೇರಿಸಲು ನಗರ ವಾಪ್ತಿಯಲ್ಲಿ ಪ್ರಸ್ತುತ 2.5 ಲಕ್ಷ ಜನಸಂಖ್ಯೆ ಇದೆ. ಮುಂದಿನ ವರ್ಷ 3 ಲಕ್ಷ ಗಡಿ ದಾಟಲಿದೆ. ವಿಸ್ತೀರ್ಣ, ಆದಾಯ ಸೇರಿದಂತೆ ಎಲ್ಲದರಲ್ಲೂ ಅರ್ಹತೆ ಹೊಂದಿರುವ ನಗರಸಭೆಯನ್ನು ಮಹಾನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ಇದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳಹಿಸಿ ಕೊಡಲು ಸರ್ವ ಸದಸ್ಯರು ತೀರ್ಮಾನಿಸಿದರು.
ಮಹಾನಗರ ಪಾಲಿಕೆಗಾಗಿ ಹತ್ತಿರದ ಊರುಗಳನ್ನು ಸೇರಿಸಿಕೊಳ್ಳಬಹುದು. ಆದರೆ ಅವರು ಸ್ವಯಂ ಪ್ರೇರಿತವಾಗಿ ಮುಂದೆ ಬಂದಲ್ಲಿ ಯಾವುದೇ ಅಡತಡೆಗಳು ಇರುವುದಿಲ್ಲ ಎಂದು ಪೌರಾಯುಕ್ತ ಶಿವುಕುಮಾರ್ ಯರಗುಡಿ ಸಭೆಗೆ ತಿಳಿಸಿದರು.ಪಿಡಬ್ಲ್ಯೂಡಿ ಅಧಿಕಾರಿ ರವಿ ನಾಯ್ಕಗೆ ತರಾಟೆ:
ಪಿಡಬ್ಲ್ಯುಡಿ ಎಇಇ ರವಿ ನಾಯ್ಕ ಅವರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಉತ್ತರಿಸಿದ ಎಇಇ ರವಿ ನಾಯ್ಕ ಅವರು, ತರಕಾರಿ ಮಾರುಕಟ್ಟೆ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ, ಎಲೆಕ್ಟ್ರಿಕ್ ಕೆಲಸ ಮಾತ್ರ ಬಾಕಿ ಇದೆ. ಇದನ್ನು ಶೀಘ್ರ ಪೂರ್ಣಗೊಳಿಸಿ ನಗರಸಭೆಗೆ ಹಸ್ತಾಂತರ ಮಾಡಲಾಗುವುದು ಎಂದರು.
ವಿದ್ಯುತ್ ಕಂಬ ಬದಲಿಸಿ:
ಕೆಲವರು ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಅವರ ಮನೆಗಳಿಗೆ ಜೆಸ್ಕಾಂ ಮೀಟರ್ ಅಳವಡಿಸಿ ಕೊಡುತ್ತಿಲ್ಲ. ಇದಕ್ಕೆ ತಾಂತ್ರಿಕ ಕಾರಣಗಳನ್ನು ಹೇಳುತ್ತಿದೆ. ಮನೆ ನಿರ್ಮಾಣ ಮಾಡಿಕೊಂಡವರು ಕತ್ತಲು ಮನೆಯಲ್ಲಿ ಇರಬೇಕಾ? ಅವರಿಗೆ ಕೂಡಲೇ ಮೀಟರ್ ಅಳವಡಿಸಿಕೊಳ್ಳಲು ಅನುವು ಮಾಡಿಕೊಡಿ ಎಂದು ಅಧ್ಯಕ್ಷ ರೂಪೇಶ್ ಕುಮಾರ್ ತಾಕೀತು ಮಾಡಿದರು.
ಸ್ಲಂ ಬೋರ್ಡ್‌ಗಳಿಂದ ಮಂಜೂರಾಗಿರುವ ಮನೆಗಳು ಅಪೂರ್ಣಗೊಂಡಿವೆ. ಇದಕ್ಕಾಗಿ ಸಾರ್ವಜನಿಕರು, ಸಾಲಸೋಲ ಮಾಡಿ ಬೋರ್ಡ್ ಗೆ ಡಿಡಿ ಹಣವನ್ನು ಪಾವತಿಸಿದ್ದಾರೆ. ಮನೆಯೂ ಇಲ್ಲ, ಇತ್ತ ಹಣವೂ ಇಲ್ಲ ಎಂದು ಸದಸ್ಯರು ಸ್ಲಂ ಬೋರ್ಡ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕಾಗಿ ಶೀಘ್ರವೇ ಸ್ಲಂ ಬೋರ್ಡ್ ಅಧಿಕಾರಿಗಳೊಂದಿಗೆ ಪ್ರತೇಕ ಸಭೆ ಆಯೋಜಿಸಲಾಗುವುದು ಎಂದು ಅಧ್ಯಕ್ಷ ರೂಪೇಶ್ ತಿಳಿಸಿದರು.
ಉಪಾಧ್ಯಕ್ಷ ರಮೇಶ್ ಗುಪ್ತಾ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಶಂಕ್ರಿ ಮತ್ತಿತರರಿದ್ದರು.
ಮಹಿಳಾ ಸದಸ್ಯರಿಂದ ಉಪಾಧ್ಯಕ್ಷರಿಗೆ ತರಾಟೆ:ಸದಸ್ಯೆಯರಿಗೂ ಸಾಮಾನ್ಯ ಸಭೆಯಲ್ಲಿ ಮಾತನಾಡಲು ಅವಕಾಶ ಮಾಡಿಕೊಡಬೇಕು ಎಂದು ಸದಸ್ಯೆ ಮುನ್ನಿ ಖಾಸಿಂ ಕೋರಿದರು. ಈ ವೇಳೆ ಉಪಾಧ್ಯಕ್ಷರು, ಸಭೆ ಮುಗಿಯುತ್ತಿದೆ, ಏನೂ ಮಾತನಾಡುತ್ತೀರಿ? ಎನ್ನುತ್ತಲೇ ಮಹಿಳಾ ಸದಸ್ಯೆಯರು ಒಗ್ಗೂಡಿ ಉಪಾಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಎಚ್ಚೆತ್ತುಕೊಂಡ ಅವರು, "ಅಕ್ಕಂದೀರಾ, ಬಾಯಿ ತಪ್ಪಿನಿಂದ ಹೀಗಾಗಿದೆ. ವಿಷಾದಿಸುವೆ " ಎನ್ನುತ್ತಲೇ ಎಲ್ಲರೂ ನಗು ನಗುತ್ತಲೇ ಸಭೆಯಿಂದ ಹೊರ ಬಂದರು.