ಪಠ್ಯದಲ್ಲಿ ಟಾಟಾ ವಂಶದ ಸಾಧನೆಗಳ ಬಗ್ಗೆ ಮಾಹಿತಿ ಅಗತ್ಯ: ರಾಜೇಂದ್ರ ಭಟ್‌

KannadaprabhaNewsNetwork |  
Published : Nov 14, 2024, 12:52 AM IST
ಟಾಟಾ ವಂಶದ ಸಾಧನೆಗಳ ಉಲ್ಲೇಖ ಪಠ್ಯದಲ್ಲಿರಬೇಕು - ರಾಜೇಂದ್ರ ಭಟ್. | Kannada Prabha

ಸಾರಾಂಶ

ತನ್ ಟಾಟಾ ಅವರು ತಮ್ಮ ಸಂಪತ್ತಿನ ಶೇ. 60 ಭಾಗವನ್ನು ಸಮಾಜಕ್ಕೆ ಅರ್ಪಣೆ ಮಾಡುವುದರ ಮೂಲಕ ಉದ್ಯಮಿಗಳಿಗೆ ಹೇಗೆ ಮಾದರಿಯಾದರು, ಮಾನವೀಯ ಸ್ಪಂದನೆಗಳ ಮೂಲಕ ಹೇಗೆ ಲೆಜೆಂಡ್ ಆದರು ಎಂಬುದನ್ನು ಅವರು ಹಲವು ನಿದರ್ಶನಗಳ ಮೂಲಕ ವಿವರಿಸಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ನಮ್ಮ ಪಠ್ಯದಲ್ಲಿ ಮೊಗಲ್, ಕದಂಬರು, ಚೋಳರು ಮೊದಲಾದ ರಾಜವಂಶಗಳ ವಿಸ್ತಾರವಾದ ಉಲ್ಲೇಖಗಳು ದೊರೆಯುತ್ತವೆ. ಅದೇ ರೀತಿ ಭಾರತದ ಶ್ರೇಷ್ಠತೆಗೆ ಅತೀ ದೊಡ್ಡ ಕೊಡುಗೆಗಳನ್ನು ನೀಡಿದ ಟಾಟಾ ವಂಶದ ಸಾಧನೆಗಳ ಉಲ್ಲೇಖಗಳು ನಮ್ಮ ಪಠ್ಯದಲ್ಲಿರಬೇಕು. ರತನ್ ಟಾಟಾ ಅವರ ಹೃದಯಶ್ರೀಮಂತಿಕೆ, ಕೊಡುಗೆಗಳು, ಬದುಕಿ ತೋರಿದ ಮೌಲ್ಯಗಳು ಇವುಗಳನ್ನು ಮುಂದಿನ ಜನಾಂಗವು ನೆನಪಿಟ್ಟುಕೊಳ್ಳುವ ಅಗತ್ಯ ಇದೆ. ರತನ್ ಟಾಟಾ ಅವರಿಗೆ ಭಾರತರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಭಾರತ ಸರಕಾರವು ಘೋಷಣೆ ಮಾಡಬೇಕು ಎಂದು ವಿಕಸನದ ರಾಷ್ಟ್ರಮಟ್ಟದ ತರಬೇತುದಾರ ಮತ್ತು ವಾಗ್ಮಿ ರಾಜೇಂದ್ರ ಭಟ್ ಅಭಿಪ್ರಾಯಪಟ್ಟರು.

ಅವರು ಮಂಗಳವಾರ ಕಾರ್ಕಳ ಸಾಹಿತ್ಯ ಸಂಘ ಆಯೋಜಿಸಿದ್ದ ರತನ್ ಟಾಟಾ ಅವರ ಸಂಸ್ಮರಣೆ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು.

ರತನ್ ಟಾಟಾ ಅವರು ತಮ್ಮ ಸಂಪತ್ತಿನ ಶೇ. 60 ಭಾಗವನ್ನು ಸಮಾಜಕ್ಕೆ ಅರ್ಪಣೆ ಮಾಡುವುದರ ಮೂಲಕ ಉದ್ಯಮಿಗಳಿಗೆ ಹೇಗೆ ಮಾದರಿಯಾದರು, ಮಾನವೀಯ ಸ್ಪಂದನೆಗಳ ಮೂಲಕ ಹೇಗೆ ಲೆಜೆಂಡ್ ಆದರು ಎಂಬುದನ್ನು ಅವರು ಹಲವು ನಿದರ್ಶನಗಳ ಮೂಲಕ ವಿವರಿಸಿದರು.

ಸಾಹಿತ್ಯ ಸಂಘದ ಕಾರ್ಯಾಧ್ಯಕ್ಷ ಕೆ.ಪಿ. ಶೆಣೈ ಅಧ್ಯಕ್ಷತೆ ವಹಿಸಿದ್ದರು. ನಯನ ಪ್ರಭು ಪ್ರಾರ್ಥಿಸಿದರು. ಗೌರವ ಅಧ್ಯಕ್ಷ ತುಕಾರಾಮ ನಾಯಕ್ ಮತ್ತು ಕೋಶಾಧಿಕಾರಿ ಎಸ್. ನಿತ್ಯಾನಂದ ಪೈ ಉಪಸ್ಥಿತರಿದ್ದರು. ಕಾರ್ಕಳದ ಹೋಟೆಲ್ ಪ್ರಕಾಶದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಪ್ರಧಾನ ಕಾರ್ಯದರ್ಶಿ ಬಿ. ಪದ್ಮನಾಭ ಗೌಡ ವಂದಿಸಿದರು. ಉಪನ್ಯಾಸಕಿ ಡಾ. ಸುಮತಿ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

₹22267 ಕೋಟಿ ವೆಚ್ಚದಲ್ಲಿ 16.75 ಕಿ.ಮೀ ಸುರಂಗ ರಸ್ತೆ ನಿರ್ಮಿಸಲು ಅದಾನಿ ಗ್ರೂಪ್ ಬಿಡ್‌ ಸಲ್ಲಿಕೆ
ಚನ್ನಬಸವ ಶ್ರೀ ಇಡೀ ಮನುಕುಲ ಪ್ರೀತಿಸುವ ಗುಣದವರು