
ಕನ್ನಡಪ್ರಭ ವಾರ್ತೆ, ತುಮಕೂರು
ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ ಅಧ್ಯಕ್ಷರಾಗಿದ್ದ ಖಂಡ್ರೆಯವರ ಸಾಧನೆ ಅವಿಸ್ಮರಣೀಯ. ಮಹಾಸಭೆಯ ಅಧ್ಯಕ್ಷರಾಗಿ ಸಮಾಜದ ಸಂಘಟನೆಗೆ ವಹಿಸಿದ ಆಸಕ್ತಿ, ಮಹಾಸಭೆಯ ಆಡಳಿತ ಕಚೇರಿ ಕಟ್ಟಡ ಕಟ್ಟುವ ಸಂದರ್ಭದ ಸಂಪೂರ್ಣ ಅವಧಿಯಲ್ಲಿ ದ್ರವಾಹಾರ ಸೇವಿಸುವ ಶಪಥ ಕೈಗೊಂಡು ಮಹಾಸಭೆಗೆ ಶಾಶ್ವತವಾದ ಕಟ್ಟಡ ಕಟ್ಟುವ ಮೂಲಕ ಅವರು ಮಾಡಿದ ಸಾಧನೆ ನಮಗೆಲ್ಲರಿಗೂ ಸ್ಫೂರ್ತಿ ಹಾಗೂ ಆದರ್ಶಪ್ರಾಯವಾಗಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಘಟಕದ ಅಧ್ಯಕ್ಷ ಕೆ.ಎಸ್.ಉಮಾಮಹೇಶ್ ಮಾತನಾಡಿ ಖಂಡ್ರೆಯವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ವೀರಶೈವ-ಲಿಂಗಾಯತ ಸಮಾಜಕ್ಕೆ ತೊಂದರೆಯಾದ ಸಂದರ್ಭದಲ್ಲಿ ಸಿಡಿದೆದ್ದು ಏಕಾಂಗಿಯಾಗಿ ಹೋರಾಟ ಮಾಡಿದವರು. ಹಾವನೂರ ವರದಿ ಲಿಂಗಾಯತ ವಿರೋಧಿಯೆಂದು ವಾದಿಸಿ ವಿಧಾನಸಭೆಯಲ್ಲಿ ವರದಿಯನ್ನು ಹರಿದು ಹಾಕುವುದರ ಮೂಲಕ ಪ್ರತಿಭಟಿಸಿದ ಎದೆಗಾರಿಕೆ ಅವರದ್ಧು ಎಂದು ತಿಳಿಸಿದರು.ಮಹಾಸಭೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಮತಾ ದಿವಾಕರ್, ನಗರ ಘಟಕದ ಅಧ್ಯಕ್ಷೆ ಪುಷ್ಪಾ, ತಾಲೂಕು ಕಾರ್ಯದರ್ಶಿ ಡಾ. ಎಚ್.ಜಿ.ಸದಾಶಿವಯ್ಯ, ಜಿಲ್ಲಾ ಕಾರ್ಯದರ್ಶಿ ಧರ್ಮಪಾಲ್, ಟಿ.ಎಂ.ವಿಜಯಕುಮಾರ ನುಡಿನಮನ ಸಲ್ಲಿಸಿದರು. ನಗರ ಖಜಾಂಚಿ ಬಿ.ರಾಜಶೇಖರಯ್ಯ, ಯುವ ಘಟಕದ ಮನು, ಪದಾಧಿಕಾರಿಗಳಾದ ನಟರಾಜು, ಶಾಂತ ಉಮೇಶ್, ರಶ್ಮಿ, ಮಮತಾ ಪ್ರಸನ್ನ ಮೊದಲಾದವರು ಹಾಜರಿದ್ದರು.