ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ ಕಿರು ಹಣಕಾಸು ಸಾಲ

KannadaprabhaNewsNetwork | Published : Oct 25, 2024 12:54 AM

ಸಾರಾಂಶ

ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ ಕಿರು ಹಣಕಾಸಿನ ಸಾಲದ ಮುಖಾಂತರ ಮಹಿಳೆಯರು ಆರ್ಥಿಕವಾಗಿ ಬೆಳೆಯಲು ಸಾಲವನ್ನು ನೀಡಲಾಗುತ್ತದೆ. ಜೊತೆಗೆ ಬೆಂಗಳೂರಿನ ಕ್ರೆಡಿಟ್ ಆಕ್ಸೆಸ್ ಇಂಡಿಯಾ ಫೌಂಡೇಶನ್ (ಸಿಎಸ್‌ಆರ್ ವತಿಯಿಂದ) ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ ಎಂದು ಕ್ರೆಡಿಟ್ ಆಕ್ಸೆಸ್ ಗ್ರಾಮೀಣ್ ಲಿಮಿಟೆಡ್‌ನ ಸರ್ಕಾರ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗದ ರಾಷ್ಟ್ರಮಟ್ಟದ ಮುಖ್ಯಸ್ಥ ಜಗದೀಶ್ ಬೆಗೂರು ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ ಕಿರು ಹಣಕಾಸಿನ ಸಾಲದ ಮುಖಾಂತರ ಮಹಿಳೆಯರು ಆರ್ಥಿಕವಾಗಿ ಬೆಳೆಯಲು ಸಾಲವನ್ನು ನೀಡಲಾಗುತ್ತದೆ. ಜೊತೆಗೆ ಬೆಂಗಳೂರಿನ ಕ್ರೆಡಿಟ್ ಆಕ್ಸೆಸ್ ಇಂಡಿಯಾ ಫೌಂಡೇಶನ್ (ಸಿಎಸ್‌ಆರ್ ವತಿಯಿಂದ) ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ ಎಂದು ಕ್ರೆಡಿಟ್ ಆಕ್ಸೆಸ್ ಗ್ರಾಮೀಣ್ ಲಿಮಿಟೆಡ್‌ನ ಸರ್ಕಾರ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗದ ರಾಷ್ಟ್ರಮಟ್ಟದ ಮುಖ್ಯಸ್ಥ ಜಗದೀಶ್ ಬೆಗೂರು ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಡೆಯುತ್ತಿರುವ ಪೊಲೀಸ್ ಚಿಣ್ಣರ ಅಂಗಳ ಶಾಲೆಯಲ್ಲಿ ಬುಧವಾರ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ್ ಲಿಮಿಟೆಡ್ ಅಂಗ ಸಂಸ್ಥೆಯಾದ ಬೆಂಗಳೂರಿನ ಕ್ರೆಡಿಟ್ ಆಕ್ಸೆಸ್ ಇಂಡಿಯಾ ಫೌಂಡೇಶನ್ ವತಿಯಿಂದ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಮಕ್ಕಳ ಆಟಿಕೆಗಳನ್ನು ಹಾಗೂ ವಿದ್ಯಾಭ್ಯಾಸದ ಆಟಿಕೆಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆರೋಗ್ಯ, ಶಿಕ್ಷಣ, ಅಂಗನವಾಡಿ- ಪ್ರಾಥಮಿಕ ಸರ್ಕಾರಿ ಶಾಲೆಗಳಿಗೆ ಪಿಠೋಪಕರಣ ಹಾಗೋ ಆಟೋಪಕರಣಗಳನ್ನು ಹಾಗೂ ಇತರೆ ಆಟಿಕೆ ಸಾಮಾನುಗಳನ್ನು ನೀಡಲಾಗುತ್ತಿದೆ. ಸಾಮಾಜಿಕ ಕಾರ್ಯಗಳನ್ನೂ ಮಾಡಲಾಗುತ್ತಿದೆ. ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಡೆಯುತ್ತಿರುವ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಫೌಂಡೇಷನ್‌ನಿಂದ ಸಿಎಸ್‌ಆರ್ ವತಿಯಿಂದ ಆಟಿಕೆ ಸಾಮಗ್ರಿಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೊಲೀಸ್ ಚಿಣ್ಣರ ಅಂಗಳ ಶಾಲೆ ಗುಣಾತ್ಮಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಜಾಯಪುಲ್ ಲರ್ನಿಂಗ್ ಮೂಲಕ ಶಿಕ್ಷಣ ನೀಡುತ್ತದೆ. ನಾವು ಎನ್‌ಇಪಿ ನಾರ್ಮ್ಸ್ ನಂತೆ ಶಿಕ್ಷಣ ನೀಡುತ್ತಿದ್ದೇವೆ. ಕ್ರೆಡಿಟ್ ಆಕ್ಸೆಸ್ ಗ್ರಾಮೀಣ್ ಅಮಿಟೆಟ್‌ನವರ ಸಿಎಸ್‌ಆರ್ ಸಮಾಜಮುಖಿ ಕೆಲಸಗಳು ಸಾಕಷ್ಟು ಪ್ರೇರಕವಾಗಿವೆ. ಸಮಾಜಕ್ಕೆ ಅತ್ಯಮೂಲ್ಯವಾದ ಕೊಡುಗೆ ನೀಡಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವುದರಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಪ್ರೇರಣೆ ನೀಡುತ್ತದೆ ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪೊಲೀಸ್ ಸಿಬ್ಬಂದಿಯ ಮೂವರು ಹೆಣ್ಣುಮಕ್ಕಳಿಗೆ ತಲಾ ₹20000ದಂತೆ ಪ್ರೋತ್ಸಾಹಧನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸಿಎಜಿಎಲ್ ನ ಅಧಿಕಾರಿಗಳಾದ ಬೆಳಗಾವಿ ಝೋನಲ್ ಮ್ಯಾನೇಜರ್ ಎಸ್.ಎನ್. ರವಿ, ಎಂ.ಆರ್. ಸಚಿನ್ ಕುಮಾರ, ವಿನಯ ಕುಮಾರ, ಲೈಸನ್ ಅಧಿಕಾರಿ ಪ್ರಹ್ಲಾದ್ (ನಿವೃತ್ತ ಡಿಎಸ್‌ಪಿ), ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯ ಕುಮಾರ ಸಂತೋಷ, ಮಂಜುನಾಥ, ಡಿಎಆರ್ ಡಿಎಸ್‌ಪಿ ಪ್ರಕಾಶ್, ನಗರ ಡಿಎಸ್‌ಪಿ ಮಲ್ಲೇಶ್ ದೊಡ್ಡಮನಿ, ಸೋಮಶೇಖರಪ್ಪ ಹಾಗೂ ಸಿಬ್ಬಂದಿ, ಇತರರು ಇದ್ದರು.

ಪೊಲೀಸ್ ಪಬ್ಲಿಕ್ ಶಾಲೆ ವಿದ್ಯಾರ್ಥಿನಿಯರು ಪ್ರಾರ್ಥಿಸಿದರೆ, ಡಿಎಆರ್ ಡಿಎಸ್‌ಪಿ ಪ್ರಕಾಶ್, ಮುಖ್ಯ ಪೇದೆ ಅಮರೇಶ ಕಾರ್ಯಕ್ರಮ ನಿರೂಪಿಸಿ, ಮಲ್ಲೇಶ್ ದೊಡ್ಡಮನಿ ವಂದಿಸಿದರು.

Share this article