ಹಾಲು ಉತ್ಪಾದಕ ಸಂಘಗಳು ರೈತರ ಬೆನ್ನೆಲುಬು

KannadaprabhaNewsNetwork |  
Published : Feb 25, 2026, 02:30 AM IST
24ಕೆಪಿಎಲ್1: ಕೊಪ್ಪಳ ತಾಲೂಕಿನ ಹಳೇಗೊಂಡಬಾಳ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್‌ ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ರೈತರ ಏಳಿಗೆ ಜತೆಗೆ ಒಕ್ಕೂಟ ಇನ್ನಷ್ಟು ಬಲಿಷ್ಠ ಹಾಗೂ ಲಾಭದಾಯಕ ಸಂಸ್ಥೆಯಾಗಿ ರೂಪಿಸುವ ಗುರಿಯಿದೆ. ಈ ಕಾರ್ಯದಲ್ಲಿ ರೈತರು ನಮ್ಮೊಂದಿಗೆ ಕೈಜೋಡಿಸಬೇಕು

ಕೊಪ್ಪಳ: ಗ್ರಾಮೀಣ ಭಾಗದ ರೈತರ ಆರ್ಥಿಕ ಬೆನ್ನೆಲುಬಾಗಿ ಹಾಲು ಉತ್ಪಾದಕರ ಸಹಕಾರಿ ಸಂಘ ಕಾರ್ಯ ನಿರ್ವಹಿಸುತ್ತಿವೆ. ನಾನು ರಾಬಕೊವಿ ಒಕ್ಕೂಟದ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ನಂತರ ಹಾಲು ಉತ್ಪಾದಕರ ಸಂಘಗಳ ಸಂಖ್ಯೆ ಹೆಚ್ಚಿಸುವುದರ ಜತೆಗೆ ಒಕ್ಕೂಟ ಲಾಭದಾಯಕವಾಗಿಸುವ ದಿಕ್ಕಿನಲ್ಲಿ ಹೆಚ್ಚಿನ ಶ್ರಮ ವಹಿಸಲಾಗುತ್ತಿದೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

ತಾಲೂಕಿನ ಹಳೇಗೊಂಡಬಾಳ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ರೈತರ ಏಳಿಗೆ ಜತೆಗೆ ಒಕ್ಕೂಟ ಇನ್ನಷ್ಟು ಬಲಿಷ್ಠ ಹಾಗೂ ಲಾಭದಾಯಕ ಸಂಸ್ಥೆಯಾಗಿ ರೂಪಿಸುವ ಗುರಿಯಿದೆ. ಈ ಕಾರ್ಯದಲ್ಲಿ ರೈತರು ನಮ್ಮೊಂದಿಗೆ ಕೈಜೋಡಿಸಬೇಕು ಎಂದರು.

ರಾಬಕೊವಿ ಜಿಲ್ಲಾ ಒಕ್ಕೂಟದಿಂದ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಐದು ಲಕ್ಷ ಸಹಾಯಧನ ಘೋಷಿಸಲಾಯಿತು.

ರಾಬಕೊವಿ ನಿರ್ದೇಶಕ ಕೃಷ್ಣಾರಡ್ಡಿ ಗಲಬಿ, ಸಂಘದ ಅಧ್ಯಕ್ಷ ಬಸವರಾಜ ಏಕಾಂಬ್ರಪ್ಪ ಹಳ್ಳಿಕೇರಿ, ಉಪಾಧ್ಯಕ್ಷ ಯಲ್ಲಪ್ಪ ಕೊಳ್ಳಪ್ಪನವರ್, ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಗೇರಿ, ಗ್ರಾಪಂ ಸದಸ್ಯ ಕೊಟ್ರೇಶ ಹಳ್ಳಿಕೇರಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಾಲಚಂದ್ರ, ನಿಂಗಜ್ಜ ಜಹಗೀರದಾರ, ಭೀಮಜ್ಜ ಕರ್ಕಿಹಳ್ಳಿ, ಶರಣಪ್ಪ ಸಜ್ಜನ್, ವಿರುಪಾಕ್ಷಪ್ಪ ಹಳ್ಳಿಗುಡಿ ನವೋದಯ, ಕಾರ್ಯದರ್ಶಿ ನಾಗರಾಜ ಯತ್ನಟ್ಟಿ, ನಾಗನಗೌಡ ಪೊಲೀಸ್ ಪಾಟೀಲ್, ಕಾಳಪ್ಪ ಅಯ್ಯನಗೌಡ್ರ, ಮಂಜುನಾಥ ಹಳ್ಳಿಕೇರಿ, ಯಲ್ಲಪ್ಪ ವಾಲಿಕಾರ, ನಿಂಗನಗೌಡ ಪಾಟೀಲ, ಖಾಸಿಂಸಾಬ್, ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರು, ಸದಸ್ಯರು, ಗ್ರಾಮದ ಮುಖಂಡರು ಹಾಗೂ ಅಧಿಕಾರಿಗಳಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಂದೇ ವಾರದಲ್ಲಿ ಮನೆಗಳ್ಳತನ ಪ್ರಕರಣ ಭೇದಿಸಿದ ಪೊಲೀಸರು
ಸಹಕಾರ ಸಂಘ ಜನಸ್ನೇಹಿಯಾಗಿಸಲು ಯೋಜನೆ: ಎಂ.ಎಫ್. ಕಲ್ಲಗುಡಿ