ಗುಡ್ಡಗಾಡು ಪ್ರದೇಶದಲ್ಲಿ ದಶಲಕ್ಷ ಗಿಡ ನೆಡುವ ಅಭಿಯಾನ

KannadaprabhaNewsNetwork |  
Published : Jun 25, 2026, 02:15 AM IST
ಫೋಟೋ ಜೂ.೨೨ ವೈ.ಎಲ್.ಪಿ. ೦೪ | Kannada Prabha

ಸಾರಾಂಶ

ತಾಲೂಕಿನ ಗುಡ್ಡಗಾಡು ಪ್ರದೇಶ ಹೊಂದಿರುವ ೧೧ ವಿವಿಧ ಗ್ರಾಪಂ ವ್ಯಾಪ್ತಿಯ ೬೬ ಹಳ್ಳಿಗಳಲ್ಲಿ ದಶಲಕ್ಷ ಗಿಡ ನೆಡುವ ಅಭಿಯಾನಕ್ಕೆ ಅರಣ್ಯವಾಸಿಗಳು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಯಲ್ಲಾಪುರ

ತಾಲೂಕಿನ ಗುಡ್ಡಗಾಡು ಪ್ರದೇಶ ಹೊಂದಿರುವ ೧೧ ವಿವಿಧ ಗ್ರಾಪಂ ವ್ಯಾಪ್ತಿಯ ೬೬ ಹಳ್ಳಿಗಳಲ್ಲಿ ದಶಲಕ್ಷ ಗಿಡ ನೆಡುವ ಅಭಿಯಾನಕ್ಕೆ ಅರಣ್ಯವಾಸಿಗಳು ಚಾಲನೆ ನೀಡಿದರು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಸಂಚಾಲಕ ಚಂದ್ರು ಪೂಜಾರಿ ಹಾಸಣಗಿ ತಿಳಿಸಿದ್ದಾರೆ.

ಈ ಕುರಿಕು ಪ್ರಕಟಣೆ ನೀಡಿರುವ ಅವರು, ತಾಲೂಕಿನ ಕಣ್ಣಿಗೇರಿ, ಕಂಪ್ಲಿ, ಕುಂದರಗಿ, ಕಿರವತ್ತಿ, ವಜಳ್ಳಿ, ಮಾವಿನಮನೆ, ಮಂಚಿಕೇರಿ, ನಂದೊಳ್ಳಿ, ಆನಗೋಡ, ದೇಹಳ್ಳಿ, ಹಾಸಣಗಿ ಮುಂತಾದ ಗ್ರಾಪಂ ವ್ಯಾಪ್ತಿಯಲ್ಲಿ ಭಾನುವಾರ ದಶಲಕ್ಷ ಗಿಡ ನೆಡುವ ಕಾರ್ಯಕ್ರಮ ಯಶಸ್ವಿ ಜರುಗಿತು.ತಾಲೂಕಿನಲ್ಲಿ ಜುಲೈ ೧೧ರ ವರೆಗೆ ೨೧ ದಿನ ನಿರಂತರವಾಗಿ ಗಿಡ ನೆಡುವ ಅಭಿಯಾನ ಮುಂದುವರೆಸಿ, ಪರಿಸರ ಕುರಿತು ಅರಣ್ಯವಾಸಿಗಳಲ್ಲಿ ಅರಿವು ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದರು.

ತಾಲೂಕಾದ್ಯಂತ ಜರುಗಿದ ಅಭಿಯಾನದಲ್ಲಿ ಸಂಚಾಲಕ ಚಂದ್ರು ಪೂಜಾರಿ ಮಂಚಿಕೇರಿ, ಸೀತಾರಾಮ ಈಶ್ವರ ನಾಯ್ಕ ಕುಂದರಗಿ, ದಿವಾಕರ ನಾಗ ಮರಾಠಿ, ಮಹೇಶ ವಿ. ಮರಾಠಿ ಶಿರನಾಳ, ಚಂದ್ರಕಾಂತ ಮರಾಠಿ, ವಿಠ್ಠು ಜಿ. ಪಾಂಡ್ರಮೀಸೆ, ರವಿ ಟಿ. ದೇಸಾಯಿ, ಶ್ರೀಧರ ಎಂ. ಪೂಜಾರಿ, ಬಾಬು ನಾಗು ಪೂಜಾರಿ ಶಿರನಾಳ, ಆನಂದ ಮಡೂರ್ ದೇವಡಿಗ ಶಿರನಾಳ, ಕೃಷ್ಣ ಮರಾಠಿ, ಸಂತೋಷ ಮರಾಠಿ, ಪ್ರಶಾಂತ ಮರಾಠಿ, ಬಸ್ಯಾಂವ್ ಡಿಸೋಜಾ ಜಮಗುಳಿ, ವಿಶ್ವಾಸ್ ಭಟ್ಟ ಗಾಂವ್ಕರ, ಅಣ್ಣಪ್ಪ ನಾಯ್ಕ ಕಣ್ಣಿಗೇರಿ, ಮಾಲ್ಲೇಶ್ವರ ಮರಾಠಿ, ಗಣಪ ಮರಾಠಿ, ಡುಮಿಂಗ್ ಡಿಸೋಜಾ ಕಣ್ಣಿಗೇರಿ, ರಾಮ ಮರಾಠಿ, ಸುರೇಶ ಮರಾಠಿ ಕಣ್ಣಿಗೇರಿ ಮುಂತಾದವರು ನೇತ್ರತ್ವ ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸದ ನಿರ್ಮೂಲನೆಗೆ ಮಹಾನಗರ ಪಾಲಿಕೆ ಕಸರತ್ತು
ಅನಧಿಕೃತ ವೈದ್ಯಕೀಯ ವೃತ್ತಿ ತಡೆಗೆ ವಿಶೇಷ ಪಡೆ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್