ನಂದಿಕಟ್ಟಾ ಗ್ರಾಪಂನ ವಿವಿಧೆಡೆ ಗಿಡ ನೆಡುವ ಕಾರ್ಯಕ್ರಮ

KannadaprabhaNewsNetwork |  
Published : Jun 25, 2026, 02:15 AM IST
ದಶ ಲಕ್ಷ ಗಿಡ ನೆಡುವ ಅಭಿಯಾನದ ಅಂಗವಾಗಿ ಸೋಮವಾರ ತಾಲೂಕಿನ ನಂದಿಕಟ್ಟಾ ಗ್ರಾಪಂನ ವಿವಿಧ ಸ್ಥಳಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಜರುಗಿತು. | Kannada Prabha

ಸಾರಾಂಶ

ನಡುತೋಪು ಕಾಮಗಾರಿಗೆ ಸಂಬಂಧಪಟ್ಟಂತೆ ಸಾರ್ವಜನಿಕವಾಗಿ ಸಾಕಷ್ಟು ಟೀಕೆ ಬರುತ್ತಿರುವ ಹಿನ್ನೆಲೆ ಮಾಹಿತಿ ಹಕ್ಕು ಅಧಿನಿಯಮ ಮತ್ತು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದ ಮತ್ತು ನಿಯಮದಡಿಯಲ್ಲಿ ಅವಶ್ಯ ಮಾಹಿತಿಯನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಸಾರ್ವತ್ರಿಕವಾಗಿ ಪ್ರಕಟಿಸಲು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮುಂಡಗೋಡ

ಈಗಾಗಲೇ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಜರುಗುತ್ತಿರುವ ನಡುತೋಪು ಕಾಮಗಾರಿಗೆ ಸಂಬಂಧಿಸಿ ಇತ್ತೀಚಿನ 3 ವರ್ಷದಲ್ಲಿ ನೆಟ್ಟಿದ್ದೆಷ್ಟು, ಬದುಕ್ಕಿದ್ದೆಷ್ಟು ಎಂಬ ಮಾಹಿತಿಗಾಗಿ ಸಿಸಿಎಫ್‌ಗೆ ಉತ್ತರಿಸಲು ನೀಡಿದ ೩೦ ದಿನ ಕಾಲಾವಧಿಯಲ್ಲಿ ಪ್ರಸಕ್ತ ಮಾಸದ ಅಂತ್ಯದಲ್ಲಿ ಉತ್ತರ ಬಾರದಿದ್ದಲ್ಲಿ, ಮುಂದಿನ ತಿಂಗಳು ಅರಣ್ಯವಾಸಿಗಳು ಸಿಸಿಎಫ್ ಕಚೇರಿಗೆ ಹೋಗುವುದಾಗಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ದಶ ಲಕ್ಷ ಗಿಡ ನೆಡುವ ಅಭಿಯಾನದ ಅಂಗವಾಗಿ ತಾಲೂಕಿನ ನಂದಿಕಟ್ಟಾ ಗ್ರಾಪಂನ ವಿವಿಧ ಸ್ಥಳಗಳಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಡುತೋಪು ಕಾಮಗಾರಿಗೆ ಸಂಬಂಧಪಟ್ಟಂತೆ ಸಾರ್ವಜನಿಕವಾಗಿ ಸಾಕಷ್ಟು ಟೀಕೆ ಬರುತ್ತಿರುವ ಹಿನ್ನೆಲೆ ಮಾಹಿತಿ ಹಕ್ಕು ಅಧಿನಿಯಮ ಮತ್ತು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದ ಮತ್ತು ನಿಯಮದಡಿಯಲ್ಲಿ ಅವಶ್ಯ ಮಾಹಿತಿಯನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಸಾರ್ವತ್ರಿಕವಾಗಿ ಪ್ರಕಟಿಸಲು ಆಗ್ರಹಿಸಿದರು.

ತಾಲೂಕಾದ್ಯಂತ ಜು. ೧೧ರವರೆಗೆ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅರಣ್ಯವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಹಕರಿಸಬೇಕೆಂದು ತಿಳಿಸಿದರು.

ತಾಲೂಕಾಧ್ಯಕ್ಷ ಶಿವಾನಂದ ಜೋಗಿ, ಗ್ರೀನ್ ಕಾರ್ಡ ಪ್ರಮುಖರಾದ ಮಂಜುನಾಥ ನಾಯ್ಕ, ಮಹೇಶ ಹುಲಿಯವರ, ದುರ್ಗವ್ವ ಭಜಂತ್ರಿ, ಸುರೇಶ ಜಾಧವ್, ರಾಮಣ್ಣ ಉಪ್ಪಾರ, ಶಂಭು ಸಾಲಿಯವರ್, ಶೇಖಯ್ಯ ಹಿರೇಮಠ, ಗಣಪತಿ ಟಿ ನಾಯ್ಕ, ಪ್ರಶಾಂತ್ ಜೈನ್, ಬಸವರಾಜ ಗಣಪತಿ ಹುಲಿಯರ್, ಹಸನಸಾಬ ದುಂಡಶಿ, ಯಲ್ಲಪ್ಪ, ಸೋಮಸಿಂಗ್ ಶಿಗ್ಗಟ್ಟಿ, ವೀರಭದ್ರ ಗಳಗಿ, ರಾಮಸಿಂಗ್ ದೊಡವಾರ, ಬಸವರಾಜ, ರೆಹಮಾನ್ ಸಾಬ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸದ ನಿರ್ಮೂಲನೆಗೆ ಮಹಾನಗರ ಪಾಲಿಕೆ ಕಸರತ್ತು
ಅನಧಿಕೃತ ವೈದ್ಯಕೀಯ ವೃತ್ತಿ ತಡೆಗೆ ವಿಶೇಷ ಪಡೆ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್